• Home
  • »
  • News
  • »
  • sports
  • »
  • IND vs BAN Test: ಗಾಯಗೊಂಡ ಕೆಎಲ್​ ರಾಹುಲ್​​, ಎರಡನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನ

IND vs BAN Test: ಗಾಯಗೊಂಡ ಕೆಎಲ್​ ರಾಹುಲ್​​, ಎರಡನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನ

ಕೆಎಲ್ ರಾಹುಲ್

ಕೆಎಲ್ ರಾಹುಲ್

IND vs BAN Test: ಎರಡನೇ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಗೆ ಕೆಟ್ಟ ಸುದ್ದಿ ಬಂದಿದೆ. ಕೆಎಲ್​ ರಾಹುಲ್​ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಹೀಗಾಘಿ ನಾಲಿನ ಪಂದ್ಯದಲ್ಲಿ ರಾಹುಲ್​ ಆಡುತ್ತಾರೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ.

  • Share this:

ಟೀಂ ಇಂಡಿಯಾಗೆ ಬಾಂಗ್ಲಾ ಪ್ರವಾಸದ ವೇಳೆ ಸಾಲು ಸಾಲು ತೊಂದರೆಗಳು ಎದುರಾಗುತ್ತಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ ಈಗಾಗಲೇ ಗಾಯದ ಸಮಸ್ಯೆಯಿಂದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಕೆಎಲ್ ರಾಹುಲ್ (KL Rahul) ನಾಯಕತ್ವ ವಹಿಸಿದ್ದರು. ಈಗ ಅವರಿಗೂ ಗಾಯವಾಗಿರುವುದಾಗಿ ತಿಳಿದುಬಂದಿದೆ. ಸರಣಿಯ ಎರಡನೇ ಟೆಸ್ಟ್ (IND vs BAN) ನಾಳೆಯಿಂದ ಮೀರ್‌ಪುರದಲ್ಲಿ ಆರಂಭವಾಗಲಿದೆ. ಬುಧವಾರ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ವಿಷಯದಲ್ಲಿ ಭಾರತಕ್ಕೂ ಈ ಟೆಸ್ಟ್​​ ಮಹತ್ವದ್ದಾಗಿದೆ. ಆದರೆ, ಮೊದಲ ಟೆಸ್ಟ್‌ನಲ್ಲಿ ರಾಹುಲ್‌ ಉತ್ತಮ ಪ್ರದರ್ಶನ ನೀಡಲಿಲ್ಲ. 


2ನೇ ಟೆಸ್ಟ್​ಗೆ ರಾಹುಲ್​ ಅಲಭ್ಯ?:


ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಕೆಎಲ್ ರಾಹುಲ್ ಅವರ ಕೈ ಗಾಯ ಗಂಭೀರವಾಗಿಲ್ಲ. ವೈದ್ಯರು ಈಗ ಅವರನ್ನು ಪರಿಶೀಲಿಸುತ್ತಿದ್ದಾರೆ. ಅಭ್ಯಾಸದ ವೇಳೆ ರಾಥೋಡ್ ಚೆಂಡನ್ನು ಎಸೆಯುತ್ತಿದ್ದರು,  ಈ ವೇಳೆ ರಾಹುಲ್ ಗಾಯಗೊಂಡರು. ಒಂದು ವೇಳೆ ರಾಹುಲ್ ಈ ಪಂದ್ಯ ಆಡದಿದ್ದರೆ ಚೇತೇಶ್ವರ ಪೂಜಾರ ನಾಯಕನಾಗಿ ಆಡಲಿದ್ದಾರೆ. ರೋಹಿತ್ ಬದಲಿಗೆ ಬ್ಯಾಕ್‌ಅಪ್‌ ಆಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಅಭಿಮನ್ಯು ಈಶ್ವರನ್‌ಗೆ ಅವಕಾಶ ಸಿಗುವ ಸಾಧ್ಯತೆ ಇರುತ್ತದೆ.


ಬಾಂಗ್ಲಾದಲ್ಲಿ ಟೀಂಇಂಡಿಯಾಗೆ ಇಂಜುರಿ ಸಮಸ್ಯೆ:


ಇದಕ್ಕೂ ಮುನ್ನ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯಲ್ಲಿ 1-2 ಅಂತರದಲ್ಲಿ ಸೋತಿದ್ದು ಗೊತ್ತೇ ಇದೆ. ಈ ವೇಳೆ ರವೀಂದ್ರ ಜಡೇಜಾ ಹಾಗೂ ಯುವ ಬೌಲರ್ ಯಶ್ ದಯಾಳ್ ಅವರು ಗಾಯದ ಸಮಸ್ಯೆಯಿಂದ ಮೊದಲು ಹೊರಬಿದ್ದರು. ಇದಾದ ಬಳಿಕ ರಿಷಬ್ ಪಂತ್ ಕೂಡ ತವರಿಗೆ ಮರಳಿದ್ದರು. ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಗೆ ಅವಕಾಶ ಸಿಕ್ಕಿದ್ದು, ಸಿಕ್ಕ ಅವಕಾಶದ ಸಂಪೂರ್ಣ ಲಾಭ ಪಡೆದರು. ಮೂರನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಇದಲ್ಲದೆ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ, ದೀಪಕ್ ಚಹಾರ್ ಮತ್ತು ನವದೀಪ್ ಸೈನಿ ಕೂಡ ಗಾಯದ ಕಾರಣ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿದ್ದಾರೆ.


ಇದನ್ನೂ ಓದಿ: IND vs BAN Test: ದ್ವಿತಿಯ ಟೆಸ್ಟ್​ಗೂ ಮುನ್ನ ಟೀಂ ಇಂಡಿಯಾಗೆ ಭಾರೀ ಹಿನ್ನಡೆ, ತಂಡದಿಂದ ಇಬ್ಬರು ಸ್ಟಾರ್​ ಪ್ಲೇಯರ್ಸ್​ ಔಟ್​


ಭಾರತ-ಬಾಂಗ್ಲಾದೇಶ ತಂಡ:


ಭಾರತ ತಂಡ: ಕೆಎಲ್ ರಾಹುಲ್ (ನಾಯಕ - 2ನೇ ಪಂದ್ಯದಲ್ಲಿ ಆಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್.


ಬಾಂಗ್ಲಾದೇಶ ತಂಡ: ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ನಸುಮ್ ಅಹ್ಮದ್, ಮಹ್ಮುದುಲ್ ಹಸನ್ ಪ್ಲೆಷರ್, ಮೊಮಿನುಲ್ ಹಕ್, ರೆಹಮಾನ್ ರಾಜಾ, ತಸ್ಕಿನ್ ಅಹ್ಮದ್.

Published by:shrikrishna bhat
First published: