ಬಾಂಗ್ಲಾ ದೇಶದ ವಿರುದ್ಧ (India vs Bangladesh) ಢಾಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ (2nd Test ) ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ (Team India) 316 ರನ್ಗಳಿಗೆ ಆಲೌಟ್ ಆಯ್ತು. ವಿಕೆಟ್ ನಷ್ಟವಿಲ್ಲದೆ 19 ರನ್ಗಳಿಂದ ಎರಡನೇ ದಿನ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾಗೆ ಬಾಂಗ್ಲಾ ಸ್ಪಿನ್ನರ್ ತೈಜುಲ್ ಇಸ್ಲಾಂ ದೊಡ್ಡ ಹೊಡೆತ ನೀಡಿದ್ದರು. ಸತತವಾಗಿ ಟೀಂ ಇಂಡಿಯಾ ಕ್ಯಾಪ್ಟನ್ (Team India Captain) ಕೆಎಲ್ ರಾಹುಲ್ (10 ರನ್), ಶುಭ್ಮನ್ ಗಿಲ್ (20 ರನ್) ಅವರನ್ನು ಎಲ್ಬಿ ಬಲೆಗೆ ಕೆಡವಿದ್ದರು. ಇದರೊಂದಿಗೆ ಟೀಂ ಇಂಡಿಯಾ 38 ರನ್ಗಳಿಗೆ ತನ್ನ ಇಬ್ಬರು ಆರಂಭಿಕರನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಪೂಜಾರ (55 ಎಸೆತಗಳಲ್ಲಿ 24 ರನ್), ಕೊಹ್ಲಿ (73 ಎಸೆತಗಳಲ್ಲಿ 24 ರನ್) ಗಳಿಸಿ ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದ್ದರು. ಆದರೆ ಪೂಜಾರ, ಜೈಜುಲ್ಗೆ ವಿಕೆಟ್ ಒಪ್ಪಿಸಿದ ಪರಿಣಾಮ ಮಧ್ಯಾಹ್ನ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು.
ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿ ಅವರನ್ನು ಟಸ್ಕಿನ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು. ಪರಿಣಾಮ ಕೇವಲ 94 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರಿಸ್ಗೆ ಬಂದ ರಿಷಭ್ ಪಂತ್ 105 ಎಸೆತಗಳಲ್ಲಿ 93 ರನ್, ಶ್ರೇಯಸ್ ಅಯ್ಯರ್ 105 ಎಸೆತಗಳಲ್ಲಿ 87 ರನ್ ಗಳಿಸಿ ಟೀಂ ಇಂಡಿಯಾಗೆ ನೆರವಾದರು. ಈ ಇಬ್ಬರ ಜೋಡಿ ಐದನೇ ವಿಕೆಟ್ಗೆ 159 ರನ್ಗಳ ಜೊತೆಯಾಟ ನೀಡಿತ್ತು.
Stumps on Day 2 of the 2nd Test.
Bangladesh 227 & 7/0, trail #TeamIndia (314) by 80 runs.
Scorecard - https://t.co/XZOGpedaAL #BANvIND pic.twitter.com/34yNqtidji
— BCCI (@BCCI) December 23, 2022
ಶತಕ ಮಿಸ್ ಮಾಡಿಕೊಂಡ ರಿಷಭ್ ಪಂತ್
ಬಿರುಸಿನ ಆಟ ಪ್ರದರ್ಶಿಸಿದ ರಿಷಭ್ ಪಂತ್, ಶತಕ ಸಿಡಿಸಲಿದ್ದಾರೆ ಅಂತ ಅಭಿಮಾನಿಗಳು ಭಾವಿಸಿದ್ದರು. ಆದರೆ ಮೆಹದಿ ಹಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ ಪಂತ್, ಶತಕ ಸಿಡಿಸುವ ಅವಕಾಶದಿಂದ ವಂಚಿತರಾದರು. ಅಯ್ಯರ್ ಸಹ 87 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿ ಹಿಂದಿರುಗಿದರು.
ಉಳಿದಂತೆ ಟೀಂ ಇಂಡಿಯಾ ಪರ ಆರ್.ಅಶ್ವಿನ್ 12 ರನ್, ಉಮೇಶ್ ಯಾದವ್ 14 ರನ್, ಜಯದೇವ್ ಉನಾದ್ಕತ್ 14 ರನ್ ಗಳಿಸಿ ಹಿಂದಿರುಗಿದರು. ಇದರೊಂದಿಗೆ ಟೀಂ ಇಂಡಿಯಾ 314 ರನ್ ಗಳಿಗೆ ಆಲೌಟ್ ಆಯ್ತು. ಬಾಂಗ್ಲಾ ಪರ ಸ್ಪಿನ್ನರ್ಗಳಾದ ತೈಜುಲ್ ಇಸ್ಲಾಂ, ಶಕೀಬ್ ತಲಾ 4 ವಿಕೆಟ್ ಪಡೆದುಕೊಂಡರು. ಇನ್ನು, 2ನೇ ದಿನದಾಟದ ಅಂತಿ ಸೆಷನ್ನಲ್ಲಿ 6 ಓವರ್ ಬ್ಯಾಟಿಂಗ್ ಮಾಡಿದ ಬಾಂಗ್ಲಾ, ವಿಕೆಟ್ ನಷ್ಟವಿಲ್ಲದೇ 7 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾಗೆ 87 ರನ್ಗಳ ಮುನ್ನಡೆ ಸಿಕ್ಕಿದೆ.
Rishabh Pant has missed out on his century by seven runs 👀
The solid 159-run stand has been broken!#WTC23 | #BANvIND | 📝: https://t.co/lyiPy1msJi pic.twitter.com/408ClTYlDl
— ICC (@ICC) December 23, 2022
ಢಾಕಾ ಟೆಸ್ಟ್ ಪಂದ್ಯದ ಮೊದಲ ದಿನ ಬಾಂಗ್ಲಾ ದೇಶ 227 ರನ್ಗಳಿಗೆ ಆಲೌಟ್ ಆಗಿತ್ತು. ಮೊಮಿನುಲ್ 84 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ನಿಂತಿದ್ದರು. ಭಾರತ ಪರ ಉಮೇಶ್ ಯಾದವ್, ಅಶ್ವಿನ್ ತಲಾ 4 ವಿಕೆಟ್ ಪಡೆದುಕೊಂಡಿರೇ, 12 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ರೀ ಎಂಟ್ರಿ ಕೊಟ್ಟಿದ್ದ ಜಯದೇವ್ ಉನಾದ್ಕತ್ ಎರಡು ವಿಕೆಟ್ ಗಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ