ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ (IND vs BAN) ಆಡುತ್ತಿದ್ದಾರೆ. ಪಂದ್ಯದ ವೇಳೆ ವಿರಾಟ್ ಮೈದಾನದಲ್ಲಿ ಎದುರಾಳಿ ಬ್ಯಾಟರ್ ವಿರುದ್ಧಕೋಪಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಯಾವಾಗ? ವಿರಾಟ್ ಕೋಪಗೊಂಡಿದ್ದು ಯಾರ ಮೇಲೆ ಮತ್ತು ಏಕೆ? ಎಂದು ನೋಡೋಣ ಬನ್ನಿ.
ಅಷ್ಟಕ್ಕೂ ಏನಾಯ್ತು?:
ವಾಸ್ತವವಾಗಿ, ಬಾಂಗ್ಲಾದೇಶದ ಆರಂಭಿಕ ಆಟಗಾರ ನಜ್ಮುಲ್ ಹುಸೇನ್ ಶಾಂಟೊ ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ಎರಡನೇ ದಿನದ ಮೂರನೇ ಸೆಷನ್ನ ಆರಂಭದಲ್ಲಿ ನೋ-ಸ್ಟ್ರೈಕ್ ಎಂಡ್ನಲ್ಲಿ ಶೂಲೆಸ್ಗಳನ್ನು ಕಟ್ಟುತ್ತಿದ್ದರು. ಈ ವೇಳೆ ಡಗೌಟ್ನಿಂದ ಆಟಗಾರರು ಡ್ರಿಂಕ್ಸ್ನೊಂದಿಗೆ ಮೈದಾನ ತಲುಪಿದರು. ನಂತರ ಮೂರನೇ ಸೆಷನ್ ನಲ್ಲಿ 6 ಓವರ್ ಗಳ ಆಟ ಮುಗಿಯಿತು. ಅದಾಗಲೇ ಬೆಳಕು ಮಂದವಾಗುತ್ತಿತ್ತು. ಮಂದ ಬೆಳಕಿನ ಮೊದಲು ಆಟವನ್ನು ನಿಲ್ಲಿಸಬೇಕೆಂದು ವಿರಾಟ್ ಬಯಸಿದ್ದರು.
— Guess Karo (@KuchNahiUkhada) December 23, 2022
ಉತ್ತಮ ಆಟವಾಡಿದ ರಿಷಭ್ ಪಂತ್:
ಭಾರತದ ಮೊದಲ ಇನ್ನಿಂಗ್ಸ್ 314 ರನ್ಗಳಿಗೆ ಕುಸಿಯಿತು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಗರಿಷ್ಠ 93 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 105 ಎಸೆತಗಳಲ್ಲಿ 87 ರನ್ ಗಳಿಸಿ ಔಟಾದರು. ಪಂತ್ ಮತ್ತು ಶ್ರೇಯಸ್ ಐದನೇ ವಿಕೆಟ್ಗೆ 159 ರನ್ ಜೊತೆಯಾಟ ನಡೆಸಿದರು. ಭಾರತದ ವಿಕೆಟ್ ಕೀಪರ್ ಬ್ಯಾಟರ್ ತಮ್ಮ ಅರ್ಧಶತಕ ಇನ್ನಿಂಗ್ಸ್ನಲ್ಲಿ 104 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ಗಳನ್ನು ಬಾರಿಸಿದರು. ವಿರಾಟ್ ಕೊಹ್ಲಿ 73 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ ಮತ್ತು ತೈಜುಲ್ ಇಸ್ಲಾಂ ತಲಾ 4 ವಿಕೆಟ್ ಪಡೆದರು.
ಇದನ್ನೂ ಓದಿ: IPL 2023 Auction: ಆರ್ಸಿಬಿ ತಂಡಕ್ಕೆ ಎಂಟ್ರಿಕೊಟ್ಟ ಮೂವರು ಸ್ಟಾರ್ ಪ್ಲೇಯರ್ಸ್, ಆದ್ರೂ ಕನ್ನಡಿಗರನ್ನು ಮರೆತ್ರಾ RCB?
ಉಳಿದಂತೆ ಟೀಂ ಇಂಡಿಯಾ ಪರ ಆರ್.ಅಶ್ವಿನ್ 12 ರನ್, ಉಮೇಶ್ ಯಾದವ್ 14 ರನ್, ಜಯದೇವ್ ಉನಾದ್ಕತ್ 14 ರನ್ ಗಳಿಸಿ ಹಿಂದಿರುಗಿದರು. ಇದರೊಂದಿಗೆ ಟೀಂ ಇಂಡಿಯಾ 314 ರನ್ ಗಳಿಗೆ ಆಲೌಟ್ ಆಯ್ತು. ಇನ್ನು, ಢಾಕಾ ಟೆಸ್ಟ್ ಪಂದ್ಯದ ಮೊದಲ ದಿನ ಬಾಂಗ್ಲಾ ದೇಶ 227 ರನ್ಗಳಿಗೆ ಆಲೌಟ್ ಆಗಿತ್ತು. ಮೊಮಿನುಲ್ 84 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ನಿಂತಿದ್ದರು. ಭಾರತ ಪರ ಉಮೇಶ್ ಯಾದವ್, ಅಶ್ವಿನ್ ತಲಾ 4 ವಿಕೆಟ್ ಪಡೆದುಕೊಂಡಿರೇ, 12 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ರೀ ಎಂಟ್ರಿ ಕೊಟ್ಟಿದ್ದ ಜಯದೇವ್ ಉನಾದ್ಕತ್ ಎರಡು ವಿಕೆಟ್ ಗಳಿಸಿದ್ದರು.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ ಪ್ಲೇಯಿಂಗ್ 11: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ಸಿ), ನೂರುಲ್ ಹಸನ್ (ವಿಕೆ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್, ತಸ್ಕಿನ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ