ಬಾಂಗ್ಲಾದೇಶದ ವಿರುದ್ಧ (India vs Bangladesh) ಢಾಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ (2nd Test) ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ (Team India) 316 ರನ್ಗಳಿಗೆ ಆಲೌಟ್ ಆಯ್ತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ತಂಡವು ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿತು. ಆ ಮೂಲಕ 3ನೇ ದಿನದಾಟದ ಬೋಜನ ವಿರಾದ ನಂತರದಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 231 ರನ್ ಗಳಿಸುವ ಮೂಲಕ ಭಾರತಕ್ಕೆ 145 ರನ್ ಗಳ ಗೆಲುವಿನ ಗುರಿ ನೀಡಿದೆ. ಈ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದ್ದು, 3ನೇ ದಿನದಾಟದ ಅಂತ್ಯಕ್ಕೆ 23 ಓವರ್ಗೆ 45 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಇನ್ನು, ಭಾರತದ ಗೆಲುವಿಗೆ 100 ರನ್ ಗಳ ಅಗತ್ಯವಿದೆ.
ಲಿಟ್ಟನ್ ದಾಸ್ ಏಕಾಂಗಿ ಹೋರಾಟ:
ಇನ್ನು, ಭಾರತ ಆಲೌಟ್ ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ಪಡೆಯಲಿಲ್ಲ. ಅಲ್ಲದೇ ಬಹುಬೇಗ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ 231 ರನ್ ಗಳಿಸುವ ಮೂಲಕ ಭಾರತಕ್ಕೆ 145 ರನ್ ಗಳ ಗೆಲುವಿನ ಗುರಿ ನೀಡಿತು. ನಜ್ಮುಲ್ ಹೊಸೈನ್ ಶಾಂಟೊ 5 ರನ್, ಜಾಕಿರ್ ಹಸನ್ 51 ರನ್, ಮೊಮಿನುಲ್ ಹಕ್ 5 ರನ್, ಲಿಟನ್ ದಾಸ್ 73 ರನ್, ಮುಶ್ಫಿಕರ್ ರಹೀಮ್ 9 ರನ್, ಶಕೀಬ್ ಅಲ್ ಹಸನ್ ಶೂನ್ಯ, ನೂರುಲ್ ಹಸನ್ 31 ರನ್, ಮೆಹಿದಿ ಹಸನ್ ಮಿರಾಜ್ ಶೂನ್ಯ, ತೈಜುಲ್ ಇಸ್ಲಾಂ 1 ರನ್, ಖಾಲಿದ್ ಅಹ್ಮದ್ 4 ರನ್, ತಸ್ಕಿನ್ ಅಹ್ಮದ್ 31 ರನ್ ಗಳಿಸಿದರು.
2ND Test. 22.6: Taijul Islam to Axar Patel 4 runs, India 45/4 https://t.co/CrrjGfXPgL #BANvIND
— BCCI (@BCCI) December 24, 2022
ಟೀಂ ಇಂಡಿಯಾ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದೆ. ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿ ಮಿಂಚಿದರೆ, ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: IPL 2023: ಐಪಿಎಲ್ ಹರಾಜಿನಲ್ಲಿ ಸೆಹ್ವಾಗ್ ಸೋದರಳಿಯನಿಗೆ ಜಾಕ್ಪಾಟ್! ಭರ್ಜರಿ ಮೊತ್ತಕ್ಕೆ ಸೇಲ್
ಭಾರತಕ್ಕೆ ಸುಲಭ ಗುರಿ:
ಇನ್ನು, ಭಾರತದ ಗೆಲುವಿಗೆ ಕೇವಲ 145 ರನ್ ಗಳ ಸುಲಭ ಗುರಿಯನ್ನು ಬಾಂಗ್ಲಾ ತಂಡ ನೀಡಿದೆ. ಆದರೂ ಸಹ ಭಾರತ 2ನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಆಘಾತ ಎದುರಿಸಿದೆ. ಭಾರತದ 2ನೇ ಇನ್ನಿಂಗ್ಸ್ನಲ್ಲಿ ಶುಭಮ್ನ್ ಗಿಲ್ 7 ರನ್, ನಾಯಕ ಕೆಎಲ್ ರಾಹುಲ್ 2 ರನ್, ಚೇತೇಶ್ವರ್ ಪೂಜಾರ 6 ರನ್ ಮತ್ತು ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು, 3ನೇ ದಿನದಾಟದ ಅಂತ್ಯಕ್ಕೆ ಅಕ್ಷರ್ ಪಟೇಲ್ 26 ರನ್ ಮತ್ತು ಜಯದೇವ್ ಉನದ್ಕಟ್ 3 ರನ್ ಗಳಿಸಿ ನಾಳೆಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ ಪ್ಲೇಯಿಂಗ್ 11: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ಸಿ), ನೂರುಲ್ ಹಸನ್ (ವಿಕೆ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್, ತಸ್ಕಿನ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ