ಬಾಂಗ್ಲಾದೇಶದ ವಿರುದ್ಧ (India vs Bangladesh) ಢಾಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ (2nd Test) ಭಾರತ ತಂಡ ರೋಚಕ ಗೆಲುವನ್ನು ಸಾಧಿಸಿದೆ. ಈ ಮೂಲಕ ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಿಂದ ಸರಣಿ ಗೆದ್ದು ಬಾಂಗ್ಲಾವನ್ನುಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಬಾಂಗ್ಲಾದೇಶ ನೀಡಿದ 145 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 4ನೇ ದಿನದಾಟದಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿದೆ.
ಅಯ್ಯರ್-ಅಶ್ವಿನ್ ಗೆಲುವಿನ ಆಟ:
ಭಾರತದ ಗೆಲುವಿಗೆ ಕೇವಲ 145 ರನ್ ಗಳ ಸುಲಭ ಗುರಿಯನ್ನು ಬಾಂಗ್ಲಾ ತಂಡ ನೀಡಿತು. ಆದರೂ ಸಹ ಭಾರತ 2ನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಆಘಾತ ಎದುರಿಸಿತು. ಭಾರತದ 2ನೇ ಇನ್ನಿಂಗ್ಸ್ನಲ್ಲಿ ಶುಭಮ್ನ್ ಗಿಲ್ 7 ರನ್, ನಾಯಕ ಕೆಎಲ್ ರಾಹುಲ್ 2 ರನ್, ಚೇತೇಶ್ವರ್ ಪೂಜಾರ 6 ರನ್ ಮತ್ತು ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೇ 4ನೇ ದಿನದಾಟ ಆರಂಭದಲ್ಲಾದರೂ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದವರಿಗೆ ತೀರ್ವ ನಿರಾಸೆ ಉಂಟಾಯಿತು. ಇಂದು, ಅಕ್ಷರ್ ಪಟೇಲ್ 34 ರನ್, ಜಯದೇವ್ ಉನದ್ಕಟ್ 13 ರನ್, ರಿಷಭ್ ಪಂತ್ 9 ರನ್ ಗಳಿಸಿ ದಿನದ ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿದರು.
A cracking unbeaten 71-run stand between @ShreyasIyer15 (29*) & @ashwinravi99 (42*) power #TeamIndia to win in the second #BANvIND Test and 2⃣-0⃣ series victory 👏👏
Scorecard - https://t.co/CrrjGfXPgL pic.twitter.com/XVyuxBdcIB
— BCCI (@BCCI) December 25, 2022
ಇದನ್ನೂ ಓದಿ: IPL 2023: ಐಪಿಎಲ್ ಹರಾಜಿನಲ್ಲಿ ಸೆಹ್ವಾಗ್ ಸೋದರಳಿಯನಿಗೆ ಜಾಕ್ಪಾಟ್! ಭರ್ಜರಿ ಮೊತ್ತಕ್ಕೆ ಸೇಲ್
ಹಸನ್ ಭರ್ಜರಿ ಬೌಲಿಂಗ್:
ಇನ್ನು, 2ನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ ಬೌಲರ್ಗಳು ಅದ್ಭುತ ಬೌಲಿಂಗ್ ಮಾಡಿತು. ಬಾಂಗ್ಲಾ ಪರ ಮೆಹಂದಿ ಹಸನ್ 19 ಓವರ್ ಗಳಲ್ಲಿ 63 ರನ್ ನೀಡಿ 5 ವಿಕೆಟ್ ಪಡೆದು ಮಿಮಚಿದರೆ ನಾಯಕ ಶಕೀಬ್ ಅಲ್ ಹಸನ್ 2 ವಿಕೆಟ್ ಪಡೆದು ಮಿಂಚಿದರು. ಈ ವೇಳೆ ಭಾರತಕ್ಕೆ ಹಸನ್ ಬೌಲಿಂಗ್ ದಾಳಿ ಕೊಂಚ ಕಷ್ಟವನ್ನು ನೀಡಿತು.
ಅಕ್ಷರ್ ಪಟೇಲ್ ಉತ್ತಮ ಬ್ಯಾಟಿಂಗ್-ಬೌಲಿಂಗ್:
ಟೀಂ ಇಂಡಿಯಾ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದೆ. ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿ ಮಿಂಚಿದರೆ 34 ರನ್ ಗಳಿಸಿ ಬ್ಯಾಟಿಂಗ್ನಲ್ಲಿಯೂ ಮಿಂಚಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ