ಭಾರತ ಮತ್ತು ಬಾಂಗ್ಲಾದೇಶ (IND vs BAN 2nd Test) ಕ್ರಿಕೆಟ್ ತಂಡಗಳು ಇಂದು ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮೀರ್ಪುರದ ಶೇರ್-ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ (Sher-E-Bangla National Cricket Stadium) ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಉಮೇಶ್ ಯಾದವ್ ಮತ್ತು ಅಶ್ವಿನ್ ದಾಳಿಗೆ ತತ್ತರಿಸಿದ ಬಾಂಗ್ಲಾ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 73.5 ಒವರ್ಗೆ 227 ರನ್ ಗಳಿಸಿ ಆಲೌಟ್ ಆಗಿದೆ. ಇದೀಗ ಭಾರತ ಬ್ಯಾಟಿಂಗ್ ಆರಂಭಿಸಿದ್ದು, ಮೊದಲ ದಿನದಾಟದ ಅಂತ್ಯಕ್ಕೆ 8 ಓವರ್ಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ. ಇನ್ನು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) 1-0 ಮುನ್ನಡೆ ಸಾಧಿಸಿದೆ.
ಅಲ್ಪ ಮೊತ್ತಕ್ಕೆ ಕುಸಿದ ಬಾಂಗ್ಲಾ:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ನಲ್ಲಿ 73.5 ಒವರ್ಗೆ 227 ರನ್ ಗಳಿಸಿ ಆಲೌಟ್ ಆಯಿತು. ನಜ್ಮುಲ್ ಹೊಸೈನ್ ಶಾಂಟೊ 24 ರನ್, ಜಾಕಿರ್ ಹಸನ್ 15 ರನ್, ಮೊಮಿನುಲ್ ಹಕ್ 84 ರನ್, ಲಿಟನ್ ದಾಸ್ 25 ರನ್, ಮುಶ್ಫಿಕರ್ ರಹೀಮ್ 26 ರನ್, ಶಕೀಬ್ ಅಲ್ ಹಸನ್ 16 ರನ್, ನೂರುಲ್ ಹಸನ್ 6 ರನ್, ಮೆಹಿದಿ ಹಸನ್ ಮಿರಾಜ್ 15 ರನ್, ತೈಜುಲ್ ಇಸ್ಲಾಂ 4 ರನ್, ಖಾಲಿದ್ ಅಹ್ಮದ್ ಶೂನ್ಯ ಮತ್ತು ತಸ್ಕಿನ್ ಅಹ್ಮದ್ 1 ರನ್ ಗಳಿಸಿದರು.
Stumps on day one 🏏
A good day for the visitors!#WTC23 | #BANvIND | 📝: https://t.co/lyiPy1msJi pic.twitter.com/J2jCSFCXyu
— ICC (@ICC) December 22, 2022
ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ತಂಡವು ಆಲೌಟ್ ಆಯಿತು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 8 ಓವರ್ಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ. ಭಾರತದ ಪರ ನಾಯಕ ಕೆಎಲ್ ರಾಹುಲ್ 3 ರನ್ ಮತ್ತು ಶುಭ್ಮನ್ ಗಿಲ್ 14 ರನ್ ಗಳಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಯಾದವ್-ಅಶ್ವಿನ್ ಉತ್ತಮ ಬೌಲಿಂಗ್:
ಟೀಂ ಇಂಡಿಯಾ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿತು. ಆದರೆ ಭಾರತದ ಪರ ಇಂದು ವೇಗಿ ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಭರ್ಜರಿ ಬೌಲಿಂಗ್ ಮಾಡಿದರು. ಯಾದವ್ 15 ಓವರ್ ಮಾಡಿ 25 ರನ್ ನೀಡಿ 4 ವಿಕೆಟ್ ಪಡೆದು ಮೀಮಚಿದರು. ಅದರಂತೆ ಅಶ್ವಿನ್ ಸಹ 21 ಓವರ ್ಮಾಡಿ 71 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ 12 ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಕಂಬ್ಯಾಕ್ ಮಾಡಿದ ಜಯದೇವ್ ಉನದ್ಕಟ್ 2 ವಿಕೆಟ್ ಪಡೆದರು.
ಇದನ್ನೂ ಓದಿ: IPL 2023 Mini Auction: ನೀವು ಜಿಯೋ ಸಿಮ್ ಬಳಸುತ್ತಿದ್ದೀರಾ? ಹಾಗಿದ್ರೆ ಐಪಿಎಲ್ ಹರಾಜನ್ನು ಉಚಿತವಾಗಿ ವೀಕ್ಷಿಸಿ!
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ ಪ್ಲೇಯಿಂಗ್ 11: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ಸಿ), ನೂರುಲ್ ಹಸನ್ (ವಿಕೆ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್, ತಸ್ಕಿನ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ