ಭಾರತ ಮತ್ತು ಬಾಂಗ್ಲಾದೇಶ (IND vs BAN 2nd Test) ಕ್ರಿಕೆಟ್ ತಂಡಗಳು ಇಂದು ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮೀರ್ಪುರದ ಶೇರ್-ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ (Sher-E-Bangla National Cricket Stadium) ಪಂದ್ಯ ನಡೆಯುತ್ತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) 1-0 ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಇನ್ನು, ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡಲಾಗಿದ್ದು, ಕುಲದೀಪ್ ಯಾದವ್ ಬದಲಿಗೆ ವೇಗಿ ಜಯದೇವ್ ಉನದ್ಕತ್ಗೆ (Jaydev Unadkat) ಅವಕಾಶ ನೀಡಲಾಗಿದೆ. ಅದರಂತೆ ಆತಿಥೇಯರು ಪ್ಲೇಯಿಂಗ್ ಇಲೆವೆನ್ನಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದಾರೆ.
12 ವರ್ಷಗಳ ನಂತರ ತಂಡಕ್ಕೆ ಎಂಟ್ರಿ:
ಇನ್ನು, ಭಾರತ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಆಡುವ XI ನಲ್ಲಿ ಒಂದು ಬದಲಾವಣೆಯನ್ನು ಮಾಡಿದೆ. ವೇಗದ ಬೌಲರ್ ಕುಲದೀಪ್ ಯಾದವ್ ಬದಲಿಗೆ ವೇಗಿ ಜಯದೇವ್ ಉನದ್ಕತ್ಗೆ ಅವಕಾಶ ನೀಡಲಾಗಿದೆ. ಜಯದೇವ್ ಉನದ್ಕತ್ 12 ವರ್ಷಗಳ ನಂತರ ಟೆಸ್ಟ್ ಆಡುತ್ತಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶ ಕೂಡ ಆಡುವ ಹನ್ನೊಂದರಲ್ಲಿ ಬದಲಾವಣೆ ಮಾಡಿದೆ. ಅದರಂತೆ ಯಾಸಿರ್ ಅಲಿ ಬದಲಿಗೆ ಮೊಮಿನುಲ್ ಹಕ್ಗೆ ಅವಕಾಶ ನೀಡಲಾಗಿದ್ದು, ಇಬಾದತ್ ಹುಸೇನ್ ಬದಲಿಗೆ ವೇಗಿ ತಸ್ಕಿನ್ ಅಹ್ಮದ್ ಆಡುತ್ತಿದ್ದಾರೆ.
A look at our Playing XI for the 2nd Test.
One change for #TeamIndia. Jaydev Unadkat comes in XI.
Live - https://t.co/XZOGpedIqj #BANvIND pic.twitter.com/ampkK88yX2
— BCCI (@BCCI) December 22, 2022
ಇನ್ನು, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಅದೇ ವೇಳೆಗೆ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾಗೆ ಮತ್ತೊಂದು ಅನುಕೂಲ ಸಿಕ್ಕಿದೆ. ಈ ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿಯಿತು. ಭಾರತ ತಂಡ ಅಂಕಪಟ್ಟಿಯಲ್ಲಿ 2 ಸ್ಥಾನ ಪಡೆದುಕೊಂಡಿದೆ.ಕಳೆದ ಸೀಸನ್ ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ, ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ಸೋತಿತ್ತು.
ಇದನ್ನೂ ಓದಿ: IPL Mini Auction 2023: ಜಿಂಬಾಬ್ವೆ ಆಟಗಾರನಿಗಾಗಿ ಭರ್ಜರಿ ಫೈಪೋಟಿ, ಐಪಿಎಲ್ ಪ್ರಾಂಚೈಸಿ ಗಮನ ಸೆಳೆದ ಆಲ್ರೌಂಡರ್
ಆಸ್ಟ್ರೇಲಿಯಾ ಇದುವರೆಗೆ 13 ಪಂದ್ಯಗಳನ್ನು ಆಡಿದೆ. ಅದರಲ್ಲಿ 9ರಲ್ಲಿ ಗೆದ್ದರೆ, ಇನ್ನೊಂದರಲ್ಲಿ ಸೋತರು. 3 ಪಂದ್ಯಗಳು ಡ್ರಾ ಆಗಿವೆ. 76.92 ರಷ್ಟು ಯಶಸ್ಸಿನೊಂದಿಗೆ ಅಗ್ರಸ್ಥಾನದಲ್ಲಿದೆ. ಮೊದಲ ಸೀಸನ್ನಲ್ಲಿ ಟಾಪ್-2ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ಭಾರತ ತಂಡವು 55.77 ಶೇಕಡಾ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ಇದುವರೆಗೆ 13 ಪಂದ್ಯಗಳನ್ನು ಆಡಿದೆ. 7 ಗೆದ್ದು 4 ಸೋತಿದೆ. 2 ಪಂದ್ಯಗಳು ಡ್ರಾ ಆಗಿದೆ.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ ಪ್ಲೇಯಿಂಗ್ 11: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ಸಿ), ನೂರುಲ್ ಹಸನ್ (ವಿಕೆ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್, ತಸ್ಕಿನ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ