• Home
  • »
  • News
  • »
  • sports
  • »
  • India vs Bangladesh: ನಾಳೆಯಿಂದ ಭಾರತ-ಬಾಂಗ್ಲಾ ಟೆಸ್ಟ್ ಸರಣಿ ಆರಂಭ, ಎಷ್ಟು ಗಂಟೆಗೆ? ಎಲ್ಲಿ? ಇಲ್ಲಿದೆ ಮಾಹಿತಿ

India vs Bangladesh: ನಾಳೆಯಿಂದ ಭಾರತ-ಬಾಂಗ್ಲಾ ಟೆಸ್ಟ್ ಸರಣಿ ಆರಂಭ, ಎಷ್ಟು ಗಂಟೆಗೆ? ಎಲ್ಲಿ? ಇಲ್ಲಿದೆ ಮಾಹಿತಿ

IND vs BAN Test

IND vs BAN Test

India vs Bangladesh: ಏಕದಿನ ಸರಣಿಯ ಬಳಿಕ ಇದೀಗ ನಾಳೆಯಿಂದ ಭಾರತ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ತಂಡಗಳು ಈಗ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ. ಈ ಸರಣಿಯ ಮೊದಲ ಪಂದ್ಯದ ಸಂಪೂರ್ಣ ವಿವರ ಈ ಕೆಳಕಂಡಂತಿದೆ ನೋಡಿ.

  • Share this:

ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು (IND vs BAN) ಈಗ ODI ಸರಣಿಯ ನಂತರ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿ ಆಗಲಿದೆ. ಟೆಸ್ಟ್​ ಸರಣಿಯ ಮೊದಲ ಪಂದ್ಯ ನಾಳೆ (ಡಿಸೆಂಬರ್ 14) ನಡೆಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸೋತ ನಂತರ ಇದೀಗ ಟೆಸ್ಟ್​ ಸರಣಿಯಲ್ಲಿ ಸೆಣಸಲಿದೆ. ಆದರೆ ಈ ಸರಣಿಯು ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್​ ರೇಸ್​ನಲ್ಲಿ ಉಳಿಯುವ ಸಲುವಾಗಿ ಈ ಸರಣಿ ಹೆಚ್ಚು ಆಸಕ್ತಿಕರವಾಗಿದೆ. ಮುಂದಿನ ಆಸೀಸ್​ ಹಾಗೂ ಈ ಟೆಸ್ಟ್ ಸರಣಿಗಳ ಎಲ್ಲಾ ಪಂದ್ಯಗಳನ್ನು ಗೆದ್ದಲ್ಲಿ ಮಾತ್ರ ಭಾರತ WTC ಅಲ್ಲಿ ಉಳಿಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವು ಜೂನ್, 2023 ರಲ್ಲಿ ನಡೆಯಲಿದೆ. 3 ಪಂದ್ಯಗಳ ಸರಣಿಯ ODI ಪಂದ್ಯಗಳನ್ನು 11:30ರಿಂದ ಆಡಲಾಯಿತು ಆದರೆ ಟೆಸ್ಟ್ ಪಂದ್ಯಗಳ ಸಮಯದಲ್ಲಿ ಬದಲಾವಣೆ ಆಗಲಿದೆ. 


ಪಂದ್ಯದ ವಿವರ:ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ (ಡಿಸೆಂಬರ್ 14 ರಿಂದ 18) ನಡೆಯಲಿದೆ. ಇದು ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಚಿತ್ತಗಾಂಗ್​ಗೆ ತಲುಪಿರುವ ಟೀಂ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಈ ಪಂದ್ಯವು 9:00 AM ISTಗೆ ನಡೆಯಲಿದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ನೇರ ಪ್ರಸಾರವನ್ನು ನೀವು ವೀಕ್ಷಿಸಬಹುದು.  ಲೈವ್ ಸ್ಟ್ರೀಮಿಂಗ್ ಅನ್ನು ನೀವು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.ರೋಹಿತ್​ ಶರ್ಮಾ -ಜಡೇಜಾ ಔಟ್​:


ಇನ್ನು, 2ನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಹೆಬ್ಬರಳಿಗೆ ಗಾಯಮಾಡಿಕೊಂಡ ಕಾರಣ ಮೊದಲ ಟೆಸ್ಟ್ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ ಹೊರಗುಳಿಯಲಿದ್ದಾರೆ. ಅವರು ಈಗಾಗಲೇ ಹೆಚ್ಚಿನ ಚಿಕಿತ್ಸೆಗೆ ಮುಂಬೈಗೆ ವಾಪಸ್ಸಾಗಿದ್ದಾರೆ. ಅವರ ಬದಲಿಗೆ  ಅಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಬುಮ್ರಾ ಮತ್ತು ಜಡೇಜಾ ಸಹ ಸರಣಿಯಿಂದ ದೂರವುಳಿದಿದ್ದು, ಇವರಿಬ್ಬರ ಬದಲಿಗೆ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.


ಇದನ್ನೂ ಓದಿ: Ishan Kishan: ಬಾಲಿವುಡ್​ ಹಿರೋಯಿನ್​ಗಳನ್ನು ಮೀರಿಸುವ ಇಶಾನ್ ಕಿಶನ್​ ಗರ್ಲ್​​ಪ್ರೆಂಡ್​, ಯಾರು ಈ ಅದಿತಿ ಹುಂಡಿಯಾ


IND vs BAN ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ನಾಯಕ), ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.


ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್​ 11: ನಜ್ಮುಲ್ ಹೊಸೈನ್ ಶಾಂಟೊ, ನಜ್ಮುಲ್ ಹಕ್, ಮೊಮಿನುಲ್ ಹಕ್, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಯಾನ್ ದಾಸ್, ಮೆಹದಿ ಹಸನ್, ತಸ್ಕಿನ್ ಅಹ್ಮದ್, ಶರೀಫುಲ್ ಇಸ್ಲಾಂ, ಎಬಾದತ್ ಹುಸೇನ್, ತೈಜುಲ್ ಇಸ್ಲಾಂ.


Published by:shrikrishna bhat
First published: