IND vs BAN Test: ಟೀಂ ಇಂಡಿಯಾಗೆ ಆರಂಭಿಕ ಆಘಾತ, ಭೋಜನ ವಿರಾಮ ವೇಳೆಗೆ ಬಾಂಗ್ಲಾ ಮೇಲುಗೈ

IND vs BAN

IND vs BAN

IND vs BAN Test: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ಆರಂಭಿಸಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆಎಲ್ ರಾಹುಲ್​ 54 ಬೌಲ್​ಗೆ 22 ರನ್ ಮತ್ತು ಶುಭ್​ಮನ್ ಗಿಲ್​ 40 ಎಸೆತದಲ್ಲಿ 20 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು.

  • Share this:

ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವಿನ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಚಿತ್ತಗಾಂಗ್‌ನಲ್ಲಿ (Zahur Ahmed Chowdhury Stadium) ನಡೆಯುತ್ತಿದೆ. ಭಾರತ ತಂಡದ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಕುಲದೀಪ್ ಯಾದವ್ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ, ಝಾಕಿರ್ ಹಸನ್ ಬಾಂಗ್ಲಾದೇಶ ತಂಡದಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿದ್ದಾರೆ. ಇನ್ನು, ಭಾರತ ಮೊದಲ ಇನಿಂಗ್ಸ್‌ನಲ್ಲಿ ಭೋಜನ ವಿರಾಮದ ವೇಳೆಗೆ 26 ಓವರ್​ಗೆ 3 ವಿಕೆಟ್‌ಗೆ 85 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.


ಭಾರತಕ್ಕೆ ಆರಂಭಿಕ ಆಘಾತ:


ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ಆರಂಭಿಸಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆಎಲ್ ರಾಹುಲ್​ 54 ಬೌಲ್​ಗೆ 22 ರನ್ ಮತ್ತು ಶುಭ್​ಮನ್ ಗಿಲ್​ 40 ಎಸೆತದಲ್ಲಿ 20 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಸಹ ಕೇವಲ 1 ರನ್ ಗಳಿಸಿ ತಜುಲ್​ ಇಸ್ಲಾಂಗೆ ವಿಕೆಟ್​ ನೀಡಿದರು. ಈ ಮೂಲಕ ಭಾರತ ಭೋಜನ ವಿರಾಮದ ವೇಳೆಗೆ 26 ಓವರ್​ಗೆ 3 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದ್ದು, ಬಾಂಗ್ಲಾದೇಶ ತಂಡವು ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿದೆ. ಭಾರತದ ಪರ ಕ್ರಿಸ್​ನಲ್ಲಿ ಪೂಜಾರ (12 *) ಮತ್ತು ರಿಷಭ್ ಪಂತ್​ (29*) ರನ್ ಗಳಿಸಿದ್ದಾರೆ. ಇನ್ನು, ರಿಷಭ್ ಪಂತ್​ ಮತ್ತೆ ಟೀಂ ಇಂಡಿಯಾಗೆ ಮರಳಿದ್ದು, ಅವರು ಇಂದು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 4000 ರನ್ ಪೂರೈಸಿದರು.



ಹೇಗಿದೆ WTC ಲೆಕ್ಕಾಚಾರ?:


ಇನ್ನು, ಈ ಸರಣಿಯು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ರೇಸ್​ನಲ್ಲಿ ಉಳಿದುಕೊಳ್ಳಬೇಕಾದರೆ, ಈ ಸರಣಿಯನ್ನು ಗೆಲ್ಲಲೇ ಬೇಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಈ ಪೈಕಿ ಕನಿಷ್ಠ 5 ಟೆಸ್ಟ್ ಪಂದ್ಯಗಳನ್ನಾದರೂ ಟೀಂ ಇಂಡಿಯಾ ಗೆಲ್ಲಲೇಬೇಕು. ಮತ್ತೊಂದೆಡೆ ಏಕದಿನ ಸರಣಿ ಗೆಲುವಿನ ಬಳಿಕ ಆತಿಥೇಯ ಬಾಂಗ್ಲಾದೇಶ ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಟೆಸ್ಟ್ ಸರಣಿಯಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಗುಡ್​ ಬೈ ಹೇಳ್ತಾರಾ ಗಬ್ಬರ್ ಸಿಂಗ್​? ODI ವಿಶ್ವಕಪ್​ ಆಡಲ್ವಾ ಧವನ್?


ಭಾರತ-ಬಾಂಗ್ಲಾದೇಶ ಪ್ಲೇಯಿಂಗ್​ 11:


ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್


ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು