ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವಿನ ಎರಡು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯ ಚಿತ್ತಗಾಂಗ್ನಲ್ಲಿ (Zahur Ahmed Chowdhury Stadium) ನಡೆಯುತ್ತಿದೆ. ಈ ಪಂದ್ಯದಲ್ಲಿ 2ನೇ ದಿನದ ಭೋಜನ ವಿರಾಮದ ನಂತರ ಭಾರತ ತಂಡವು 133.5 ಓವರ್ಗಳಲ್ಲಿ 404 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾದೇಶ ತಂಡವು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿತು. ಆದರೆ ಭಾರತ ಬೌಲರ್ಗಳು ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ 2ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ ತಂಡವು 8 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯಲ್ಲಿದೆ. ಈ ಮೂಲಕ ಭಾರತ ಇಂದು ಮೇಲುಗೈ ಸಾಧಿಸಿದೆ. ಈ ಮೂಲಕ ಪಂದ್ಯವನ್ನು ಗೆಲ್ಲುವ ಸೂಚನೆ ನೀಡಿದ್ದಾರೆ.
ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಬಾಂಗ್ಲಾ:
ಇನ್ನು, ಭಾರತದ ಮೊದಲ ಇನ್ನಿಂಗ್ಸ್ ನಂತರ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡವು 2ನೇ ದಿನದಾಟದ ಅಂತ್ಯಕ್ಕೆ 44 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ 271 ರನ್ಗಳ ಹಿನ್ನಡ ಅನುಭವಿಸಿದೆ. ಇನ್ನು, ಬಾಂಗ್ಲಾ ಪರ ಝಾಕಿರ್ ಹಸನ್ 202 ರನ್, ನಜ್ಮುಲ್ ಹೊಸೈನ್ ಶಾಂಟೊ ಶೂನ್ಯ, ಲಿಟನ್ ದಾಸ್ 24 ರನ್, ಶಾಕಿಬ್ ಅಲ್ ಹಸನ್ 3 ರನ್, ಮುಶ್ಫಿಕರ್ ರಹೀಮ್ 28 ರನ್, ಯಾಸಿರ್ ಅಲಿ 4 ರನ್, ನೂರುಲ್ ಹಸನ್ 16 ರನ್, ತೈಜುಲ್ ಇಸ್ಲಾಂ ಶೂನ್ಯಕ್ಕೆ ಔಟ್ ಆದರೆ, 3ನೇ ದಿನಕ್ಕೆ ಮೆಹದಿ ಹಸನ್ ಮಿರಾಜ್ 16 ರನ್, ಇಬಾದತ್ ಹೊಸೈನ್ 13 ರನ್ ಗಳಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ.
That's Stumps on Day 2 of the first #BANvIND Test!
A dominating show with the ball by #TeamIndia! 👍👍
4⃣ wickets for @imkuldeep18
3⃣ wickets for @mdsirajofficial
1⃣ wicket for @y_umesh
Scorecard ▶️ https://t.co/CVZ44NpS5m pic.twitter.com/SkqzNIqlSj
— BCCI (@BCCI) December 15, 2022
ಇನ್ನು, 404 ರನ್ ಗಳಿಗೆ ಆಲ್ಔಟ್ ಆದ ಬಳಿಕ ಭಾರತ ಬೌಲಿಂಗ್ ಆರಂಭಿದಾಗ ಮೊದಲ ಓವರ್ನಿಂದಲೇ ಬಾಂಗ್ಲಾ ವಿರುದ್ಧ ಹಿಡಿತ ಸಾಧಿಸಿತು. ಭಾರತದ ಪರ ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಸಿರಾಜ್ 9 ಓವರ್ ಬೌಲ್ ಮಾಡಿ 14 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ಇತ್ತ ಕುಲ್ದೀಪ್ ಯಾವದ್ 10 ಓವರ್ಗೆ 34 ರನ್ ನೀಡಿ 4 ವಿಕೆಟ್ ಪಡೆದು ಅಬ್ಬರಿಸಿದರು. ಉಳದಿಂತೆ ಉಮೇಶ್ ಯಾದವ್ 1 ವಿಕೆಟ್ ಪಡೆದರು.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ