ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವಿನ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಚಿತ್ತಗಾಂಗ್‌ನಲ್ಲಿ (Zahur Ahmed Chowdhury Stadium) ನಡೆಯುತ್ತಿದೆ. ಭಾರತ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಆರಂಭಿಕವಾಗಿ ಕ್ರೀಸ್ಗೆ ಬಂದ ರಾಹುಲ್, ವಿರಾಟ್ ಎಲ್ಲರೂ ಬಹುಬೇಗ ವಿಕೆಟ್ ಒಪ್ಪಿಸಿ ಮರಳಿದರು. ಆ ವೇಳೆ ತಂಡಕ್ಕೆ ಶ್ರೇಯಸ್ ಐಯ್ಯರ್ (Shreyas Iyer) ಮತ್ತು ಚೇತೇಶ್ವರ್ ಪೂಜಾರ (Cheteshwar Pujara) ಉತ್ತಮ ಜೊತೆಯಾಟ ಸಹಕಾರಿಯಾಯಿತು. ಮೊದಲ ದಿನದಾಟ ಅಂತ್ಯಗೊಂಡಿದ್ದು, ಭಾರತ 90 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ.
ಶತಕ ವಂಚಿತರಾದ ಪೂಜಾರ:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆಎಲ್ ರಾಹುಲ್ 54 ಬೌಲ್ಗೆ 22 ರನ್ ಮತ್ತು ಶುಭ್ಮನ್ ಗಿಲ್ 40 ಎಸೆತದಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಸಹ ಕೇವಲ 1 ರನ್ ಗಳಿಸಿ ತಜುಲ್ ಇಸ್ಲಾಂಗೆ ವಿಕೆಟ್ ನೀಡಿದರು. ಈ ಮೂಲಕ ಭಾರತ ಭೋಜನ ವಿರಾಮದ ವೇಳೆಗೆ ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ ಬಳಿಕ ಬಂದ ರಿಷಭ್ ಪಂತ್ 46 ರನ್ ಗಳಿಸಿ ಕೊಂಚ ಚೇತರಿಕೆ ನೀಡಿದರು. ಆದರೆ ಪೂಜಾರ ಮತ್ತು ಐಯ್ಯರ್ ಜೊತೆಯಾಟ ಮೊದಲ ದಿನದ ಅಂತ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಲು ಸಹಕಾರಿ ಆಯಿತು.
Stumps on Day 1⃣ of the first #BANvIND Test!@ShreyasIyer15 remains unbeaten on 8⃣2⃣* as #TeamIndia reach 278/6 at the end of day's play 👌
Scorecard ▶️ https://t.co/CVZ44N7IRe pic.twitter.com/muGIlGUbNE
— BCCI (@BCCI) December 14, 2022
ತೈಜುಲ್ ಇಸ್ಲಾಂ ಉತ್ತಮ ಬೌಲಿಂಗ್:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಬಾಂಗ್ಲಾ ಆರಂಭದಲ್ಲಿ ಭರ್ಜರಿ ಬೌಲಿಂಗ್ ದಾಳಿ ನಡೆಸಿತು. ಬಾಂಗ್ಲಾ ಪರ ತೈಜುಲ್ ಇಸ್ಲಾಂ 30 ಓವರ್ ಮಾಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿಂದತೆ ಮೆಹದಿ ಹಸನ್ ಮಿರಾಜ್ 2 ವಿಕೆಟ್ ಮತ್ತು ಖಾಲಿದ್ ಅಹ್ಮದ್ 1 ವಿಕೆಟ್ ಪಡೆದರು.
ಇದನ್ನೂ ಓದಿ: Arjun Tendulkar: ಅಪ್ಪನ ದಾಖಲೆ ಸರಿಗಟ್ಟಿದ ಮಗ, ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಅರ್ಜುನ್ ತೆಂಡೂಲ್ಕರ್!
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ