• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs BAN Test: ಪಟೇಲ್​ ಬೌಲಿಂಗ್​ಗೆ ತತ್ತರಿಸಿದ ಬಾಂಗ್ಲಾ ಹುಲಿಗಳು, ಟೀಂ ಇಂಡಿಯಾ ಗೆಲುವಿಗೆ ಬೇಕು 4  ವಿಕೆಟ್​

IND vs BAN Test: ಪಟೇಲ್​ ಬೌಲಿಂಗ್​ಗೆ ತತ್ತರಿಸಿದ ಬಾಂಗ್ಲಾ ಹುಲಿಗಳು, ಟೀಂ ಇಂಡಿಯಾ ಗೆಲುವಿಗೆ ಬೇಕು 4  ವಿಕೆಟ್​

IND vs BAN Test

IND vs BAN Test

IND vs BAN 1st Test: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿಲು ಇನ್ನು ಕೇಳವ 4 ವಿಕೆಟ್​ಗಳ ಅವಶ್ಯಕತೆ ಇದೆ.

  • Share this:

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ (IND vs BAN Test) ನಾಲ್ಕನೇ ದಿನದಾಟ ಅಂತ್ಯಗೊಂಡಿದೆ. ಈ ಟೆಸ್ಟ್ ನಲ್ಲಿ ಟೀಂ ಇಂಡಿಯಾ (Team India) ಗೆಲುವಿನತ್ತ ಸಾಗಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ (Bangladesh) 6 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಹೀಗಾಗಿ ಟೀಂ ಇಂಡಿಯಾ ಗೆಲುವಿಗೆ 4 ವಿಕೆಟ್ ಅವಶ್ಯಕತೆ ಇದೆ. ಹೌದು, ಈ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲ್ಲಲು 241 ರನ್‌ಗಳ ಅಗತ್ಯವಿದೆ.  ಸದ್ಯ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್40 ರನ್  ಮತ್ತು ಮೆಹದಿ ಹಸನ್9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಝಾಕಿರ್ ಹಸನ್ ಶತಕ ಸಿಡಿಸಿ ಮಿಂಚಿದರು. ಟೀಂ ಇಂಡಿಯಾದ ಬೌಲರ್ ಗಳ ಪೈಕಿ ಅಕ್ಷರ್ ಪಟೇಲ್ 3 ವಿಕೆಟ್ ಗಳನ್ನು ಕಬಳಿಸಿದ್ದು, ಇನ್ನು ಒಂದು ದಿನದ ಆಟ ಮಾತ್ರ ಉಳಿದಿದೆ.


ಅಕ್ಷರ್​ ಪಟೇಳ್​ ಉತ್ತಮ ಬೌಲಿಂಗ್​:


ದಿನದ ಆರಂಬದಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗದ ಟೀಂ ಇಂಡಿಯಾದ ಬೌಲರ್ ಗಳು ಲಂಚ್ ಬಳಿಕ 3 ಮಹತ್ವದ ವಿಕೆಟ್ ಗಳನ್ನು ಕಬಳಿಸಿದರು. ಆ ನಂತರ ಮೂರನೇ ಅವಧಿಯಲ್ಲೂ ಟೀಂ ಇಂಡಿಯಾ ಮೂರು ವಿಕೆಟ್ ಕಬಳಿಸುವ ಮೂಲಕ ಗೆಲುವಿನ ಸನಿಹಕ್ಕೆ ಬಂದಿದೆ.ಇದಕ್ಕೂ ಮುನ್ನ 42/0 ಓವರ್ ನೈಟ್ ಸ್ಕೋರ್ ನೊಂದಿಗೆ ನಾಲ್ಕನೇ ದಿನ ಆಟ ಮುಂದುವರಿಸಿದ ಬಾಂಗ್ಲಾದೇಶಕ್ಕೆ ಆರಂಭಿಕರಾದ ಶಾಂಟೊ ಹಾಗೂ ಜಾಕಿರ್ ಆಸರೆಯಾದರು. ಮೊದಲ ಸೆಷನ್‌ನಲ್ಲಿ ಭಾರತದ ಸ್ಪಿನ್ ತ್ರಯರಾದ ಅಶ್ವಿನ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪರಿಣಾಮಕಾರಿ ಆಗಲಿಲ್ಲ.



ಆದರೆ ಬಳಿಕ ಉಮೇಶ್ ಯಾದವ್ ಮೊದಲ ಬ್ರೇಕ್​ಥ್ರೂ ತಂಡದುಕೊಟ್ಟರು. ಯಾವದ್ 1 ವಿಕೆಟ್​ ಪಡೆದರು. ಉಳಿದಮತೆ ಅಕ್ಷರ್ ಪಟೇಲ್ 27 ಓವರ್ ಬೌಲ್ ಮಾಡಿ 50 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಇನ್ನು, ಕುಲ್​ದೀಪ್ ಯಾದವ್, ರವಿಚಂದ್ರನ್​ ಅಶ್ವಿನ್​ ತಲಾ 1 ವಿಕೆಟ್ ಪಡೆದರು.


ಭರ್ಜರಿ ಶತಕ ಸಿಡಿಸಿದ ಝಾಕಿರ್ ಹಸನ್:


3ನೇ ದಿನಾಟದ ಅಂತ್ಯಕ್ಕೆ 42 ರನ್​ ಗಳಿಸಿದ್ದ ಬಾಂಗ್ಲಾ ಇಂದು 4ನೇ ದಿನದಾಟದ ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್​ ಮಾಡಿತು. ಬಾಂಗ್ಲಾ ಪರ ಝಾಕಿರ್ ಹಸನ್ ಶತಕ ಸಿಡಿಸಿ ಮಿಂಚಿದರು. ಅವರು 224 ಬೌಲ್​ಗೆ 1 ಸಿಕ್ಸ್ ಮತ್ತು 13 ಫೋರ್​ ಮೂಲಕ 100 ರನ್ ಗಳಿಸಿದರು. ಉಳಿದಂತೆ ನಜ್ಮುಲ್ ಹೊಸೈನ್ ಶಾಂಟೊ 67 ರನ್, ಲಿಟನ್ ದಾಸ್ 19 ರನ್, ಯಾಸಿರ್ ಅಲಿ 5 ರನ್, ಮುಶ್ಫಿಕರ್ ರಹೀಮ್ 23 ರನ್, ನೂರುಲ್ ಹಸನ್ 3 ರನ್ ಗಳಿಸಿ ಔಟ್​ ಆಗಿದ್ದಾರೆ. ಆದರೆ ಅಂತಿಮ ದಿನಕ್ಕೆ ಶಾಕಿಬ್ ಅಲ್ ಹಸನ್ 40 ರನ್ ಮತ್ತು ಮೆಹದಿ ಹಸನ್ ಮಿರಾಜ್ 9 ರನ್ ಗಳಿಸಿ ಕ್ರೀಸ್​ ಕಾಯ್ದುಕೊಂಡಿದ್ದಾರೆ.


ಇದನ್ನೂ ಓದಿ: ODI World Cup 2023: ಸಂಕಷ್ಟದಲ್ಲಿ BCCI, 2023 ಏಕದಿನ ವಿಶ್ವಕಪ್​ ಭಾರತದಲ್ಲಿ ನಡೆಯುವುದು ಡೌಟ್​?


ಭಾರತ-ಬಾಂಗ್ಲಾದೇಶ ಪ್ಲೇಯಿಂಗ್​ 11:


ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್


ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.

Published by:shrikrishna bhat
First published: