ಚಟ್ಟೋಗ್ರಾಮ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಈ ಟೆಸ್ಟ್ನ ಎರಡನೇ ದಿನದಂದು ಭಾರತದ (Team India) ಮೊದಲ ಇನ್ನಿಂಗ್ಸ್ 404 ರನ್ಗಳಿಗೆ ಕೊನೆಗೊಂಡಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಬಾಂಗ್ಲಾದೇಶದ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಅವರು ನಜ್ಮುಲ್ ಹುಸೇನ್ ಶಾಂಟೊ ಅವರನ್ನು ಔಟ್ ಮಾಡಿದರು. ಭಾರತದ ನಾಯಕ ಕೆಎಲ್ ರಾಹುಲ್ ಬಹುಶಃ ಇದಕ್ಕಿಂತ ಉತ್ತಮ ಆರಂಭವನ್ನು ನಿರೀಕ್ಷಿಸಿರಲಿಲ್ಲ. ಅವರು ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳನ್ನು ಚೆಂಡಿನಿಂದ ಮಾತ್ರವಲ್ಲದೆ ತಮ್ಮ ತಮ್ಮ ಸಿಟ್ಟಿನಿಂದಲೂ ಸಾಕಷ್ಟು ತೊಂದರೆಗೊಳಿಸಿದ್ದಾರೆ. ಹೌದು, ಪಂದ್ಯದ ವೇಳೆ ಸಿರಾಜ್ ಮತ್ತು ಲಿಟನ್ ದಾಸ್ ಜತೆ ವಾಗ್ವಾದ ನಡೆಯಿತು.
ಸಿರಾಜ್-ಲಿಟನ್ ಕಿರಿಕ್:
ಬಾಂಗ್ಲಾದೇಶದ ಎರಡು ವಿಕೆಟ್ಗಳು ಬಿದ್ದ ನಂತರ, ಲಿಟನ್ ದಾಸ್ ಬಂದ ತಕ್ಷಣ ಬೌಂಡರಿಗಳನ್ನು ಹೊಡೆಯಲು ಪ್ರಾರಂಭಿಸಿದರು. ಅವರು ಸಿರಾಜ್ ಎಸೆತದಲ್ಲಿ ಕೆಲವು ಉತ್ತಮ ಹೊಡೆತಗಳನ್ನು ಸಹ ಹೊಡೆದರು. ಬಾಂಗ್ಲಾದೇಶದ ಇನಿಂಗ್ಸ್ ನ 14ನೇ ಓವರ್ ಬೌಲ್ ಮಾಡಲು ಸಿರಾಜ್ ಬಂದಿದ್ದರು. ಈ ಓವರ್ನ ಮೊದಲ ಎಸೆತದ ನಂತರ ಸಿರಾಜ್ ಅವರು ಲಿಟನ್ ದಾಸ್ ಬಳಿ ಹೋಗಿ ಏನೋ ಹೇಳಿದ್ದಾರೆ. ಇದಕ್ಕೆ ಲಿಟನ್ ಕೊಂಚ ವ್ಯಂಗ್ಯವಾಗಿ ಹೇಳಿದ್ದು ನನಗೆ ಕೇಳಿಸಲಿಲ್ಲ ಎಂದು ಕೈ ಸನ್ನೆ ಮೂಲಕ ಹೇಳಿದರು. ಇಬ್ಬರ ನಡುವೆ ಜಗಳವನ್ನು ಕಂಡು ಅಂಪೈರ್ ಬಂದು ದಾಸ್ ಅವರನ್ನು ತಡೆದರು. ಆದಾಗ್ಯೂ, ಈ ಉದ್ವಿಗ್ನತೆಯು ಮುಂದಿನ ಎಸೆತದಲ್ಲಿ ಕೊನೆಗೊಂಡಿತು. ಏಕೆಂದರೆ ಸಿರಾಜ್ ಮುಂದಿನ ಎಸೆತದಲ್ಲಿ ಲಿಟನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
Siraj having a go at Liton Das.
Meanwhile, Kohli also stepped in.pic.twitter.com/kiyoCpia4y
— Saikat Ghosh (@Ghosh_Analysis) December 15, 2022
ಬೋಲ್ಡ್ ಆದ ಕೂಡಲೇ ಸಿರಾಜ್ ಬಾಯಿಯತ್ತ ಬೆರಳು ತೋರಿಸಿ ಸುಮ್ಮನಿರುವಂತೆ ಸೂಚಿಸಿದರು. ಅದೇ ವೇಳೆ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಬಾಂಗ್ಲಾ ಅಭಿಮಾನಿಗಳಿಗೆ ಸದ್ದು ಕೇಳುತ್ತಿಲ್ಲ ಎಂದು ಕಿವಿಯಲ್ಲಿ ಕೈ ಇಟ್ಟು ಸನ್ನೆ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತ-ಬಾಂಗ್ಲಾ ಪಂದ್ಯದ ವೇಳೆ ಈ ರೀತಿಯ ಘಟನೆ ನಡೆದಂತಾಗಿದೆ.
ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಬಾಂಗ್ಲಾ:
ಇನ್ನು, ಭಾರತದ ಮೊದಲ ಇನ್ನಿಂಗ್ಸ್ ನಂತರ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡವು 2ನೇ ದಿನದಾಟದ ಅಂತ್ಯಕ್ಕೆ 44 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ 271 ರನ್ಗಳ ಹಿನ್ನಡ ಅನುಭವಿಸಿದೆ. ಇನ್ನು, ಬಾಂಗ್ಲಾ ಪರ ಝಾಕಿರ್ ಹಸನ್ 202 ರನ್, ನಜ್ಮುಲ್ ಹೊಸೈನ್ ಶಾಂಟೊ ಶೂನ್ಯ, ಲಿಟನ್ ದಾಸ್ 24 ರನ್, ಶಾಕಿಬ್ ಅಲ್ ಹಸನ್ 3 ರನ್, ಮುಶ್ಫಿಕರ್ ರಹೀಮ್ 28 ರನ್, ಯಾಸಿರ್ ಅಲಿ 4 ರನ್, ನೂರುಲ್ ಹಸನ್ 16 ರನ್, ತೈಜುಲ್ ಇಸ್ಲಾಂ ಶೂನ್ಯಕ್ಕೆ ಔಟ್ ಆದರೆ, 3ನೇ ದಿನಕ್ಕೆ ಮೆಹದಿ ಹಸನ್ ಮಿರಾಜ್ 16 ರನ್, ಇಬಾದತ್ ಹೊಸೈನ್ 13 ರನ್ ಗಳಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ 2023 ಮಿನಿ ಹರಾಜಿನಲ್ಲಿ 40 ವರ್ಷ ವಯಸ್ಸಿನ ಆಟಗಾರ! ಹಾಗಿದ್ರೆ ಅತಿ ಕಿರಿಯ ಪ್ಲೇಯರ್ ಯಾರು?
ಸಿರಾಜ್-ಯಾದವ್ ಸೂಪರ್ ಬೌಲಿಂಗ್:
ಭಾರತದ ಪರ ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಸಿರಾಜ್ 9 ಓವರ್ ಬೌಲ್ ಮಾಡಿ 14 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ಇತ್ತ ಕುಲ್ದೀಪ್ ಯಾವದ್ 10 ಓವರ್ಗೆ 34 ರನ್ ನೀಡಿ 4 ವಿಕೆಟ್ ಪಡೆದು ಅಬ್ಬರಿಸಿದರು. ಉಳದಿಂತೆ ಉಮೇಶ್ ಯಾದವ್ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ