ಬಾಂಗ್ಲಾದೇಶ ವಿರುದ್ಧದ (IND vs BAN Test) ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ (Zahur Ahmed Chowdhury Stadium) ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡ ಬಾಂಗ್ಲಾದೇಶವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆದ ಬಳಿಕ ಭಾರತದ ಪರ ಪೂಜಾರ ಮತ್ತು ಗಿಲ್ (Shubman Gill) ಅಬ್ಬರದ ಶತಕದ ಬಳಿಕ ಬರೋಬ್ಬರಿ 513 ರನ್ ಗಳಿಸಿ ಭಾರತ ಡಿಕ್ಲೇರ್ ಮಾಡಿಕೊಂಡಿದೆ. 3ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ತಂಡವು 12 ಓವರ್ಗೆ 42 ರನ್ಗೆ ಯಾವುದೇ ನಷ್ಟವಿಲ್ಲದೇ ನಾಳೆಗೆ ಕ್ರೀಸ್ ಕಾಯ್ದಿರಿಸಿಕೊಂಡಿದ್ದಾರೆ.
ಪೂಜಾರಾ-ಗಿಲ್ ಆಕಷ್ಟಕ ಶತಕ:
ಇನ್ನು, ಬಾಂಗ್ಲಾ ಆಲೌಟ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಪರ ನಾಯಕ ಕೆಎಲ್ ರಾಹುಲ್ ಕೇವಲ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಪೂಜಾರ ಮತ್ತು ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಶುಭ್ಮನ್ ಗಿಲ್ 152 ಎಸೆತದಲ್ಲಿ 3 ಸಿಕ್ಸ್ ಮತ್ತು 10 ಫೋರ್ ಮೂಲಕ ಆಕರ್ಷಕ ಶತಕ (110) ಸಿಡಿಸಿ ಮಿಂಚಿದರು. ಅದೇ ರೀತಿ ಚೇತೇಶ್ವರ್ ಪೂಜಾರ 130 ಎಸೆತದಲ್ಲಿ 13 ಬೌಂಡರಿಗಳ ಮೂಲಕ 102 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ ಈ ಶತಕ ಪೂಜಾರ ಅವರ ವೃತ್ತಿ ಜೀವನದಲ್ಲಿ ಅತೀ ವೇಗದ ಶತಕವಾಗಿದೆ. ಉಳಿದಂತೆ ವಿರಾಟ್ ಕೊಹ್ಲಿ 29 ಎಸೆತದಲ್ಲಿ 19 ರನ್ ಗಳಿಸಿದರು.
That's Stumps on Day 3 of the first #BANvIND Test!
Bangladesh move to 42/0 after #TeamIndia secured a 512-run lead!
We will be back for Day 4 action tomorrow.
Scorecard ▶️ https://t.co/CVZ44NpS5m pic.twitter.com/scqMCXxlG2
— BCCI (@BCCI) December 16, 2022
5 ವಿಕೆಟ್ ಕಬಳಿಸಿದ ಯಾದವ್:
ಇನ್ನು, ಟೀಂ ಇಂಡಿಯಾ ಭರ್ಜರಿ ಬೌಲಿಂಗ್ ಮಾಡಿತು. ಭಾರತದ ಪರ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಯಾದವ್ 16 ಓವರ್ ಬೌಲ್ ಮಾಡಿ 6 ಓವರ್ ಮೇಡಿನ್ ಮಾಡುವ ಮೂಲಕ 5 ವಿಕೆಟ್ ಕಬಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್ 3 ವಿಕೆಟ್, ಉಮೇಶ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Rohit Sharma: ಟೀಂ ಇಂಡಿಯಾಗೆ ಭರ್ಜರಿ ಗುಡ್ ನ್ಯೂಸ್, ರೋಹಿತ್ ಇಂಜುರಿ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್
ಸ್ಪಿನ್ನರ್ ಕುಲದೀಪ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಅವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಈ ಸಾಧನೆ ಮಾಡಿದ್ದರು. ಸುದೀರ್ಘ ಸಮಯದ ನಂತರ ಟೆಸ್ಟ್ ತಂಡಕ್ಕೆ ವಾಪಸಾಗಿರುವ ಕುಲದೀಪ್, ಸದ್ಯಕ್ಕೆ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ