• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs BAN Test: ಕುಲ್​ದೀಪ್​ ಸ್ಪಿನ್​ ಮೋಡಿಗೆ ಬಾಂಗ್ಲಾ ಕಕ್ಕಾಬಿಕ್ಕಿ, ಭಾರತಕ್ಕೆ 254 ರನ್ ಮುನ್ನಡೆ

IND vs BAN Test: ಕುಲ್​ದೀಪ್​ ಸ್ಪಿನ್​ ಮೋಡಿಗೆ ಬಾಂಗ್ಲಾ ಕಕ್ಕಾಬಿಕ್ಕಿ, ಭಾರತಕ್ಕೆ 254 ರನ್ ಮುನ್ನಡೆ

IND vs BAN 1st Test

IND vs BAN 1st Test

IND vs BAN 1st Test: 3ನೇ ದಿನದ ಆರಂಭದಲ್ಲಿಯೇ 55.5 ಓವರ್​ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 150 ರನ್ ಗಳಿಸಿದೆ. ಈ ಮೂಲಕ ಭಾರತ ತಂಡ 154 ರನ್ ಗಳ ಮುನ್ನಡೆ ಸಾಧಿಸಿದೆ. ಇದೀಗ ಟೀಂ ಇಂಡಿಯಾ ತನ್ನ 2ನೇ ಇನ್ನಿಂಗ್ಸ್​​ ಆಂಭಿಸಿದೆ.

  • Share this:

ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವಿನ 2 ಟೆಸ್ಟ್​ ಪಂದ್ಯದ ಸರಣಿಯ ಮೊದಲು ಪಂದ್ಯವು ಈಗಾಗಲೇ ಚಿತ್ತಗಾಂಗ್‌ನಲ್ಲಿ (Zahur Ahmed Chowdhury Stadium) ಆರಂಭವಾಗಿದೆ. ಈ ಪಂದ್ಯದ3ನೇ ದಿನವಾದ ಇಂದು ಬಾಂಗ್ಲಾ ವಿರುದ್ಧ ಭಾರತ ಆರಂಭದಲ್ಲಿಯೇ ಮುನ್ನಡೆ ಸಾಧಿಸಿದೆ. 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡಿತ್ತು. ಇಂದು ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ 3ನೇ ದಿನದ ಆರಂಭದಲ್ಲಿಯೇ 55.5 ಓವರ್​ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 150 ರನ್ ಗಳಿಸಿದೆ. ಈ ಮೂಲಕ ಭಾರತ ತಂಡ 154 ರನ್ ಗಳ ಮುನ್ನಡೆ ಸಾಧಿಸಿದೆ. ಇದೀಗ ಟೀಂ ಇಂಡಿಯಾ ತನ್ನ 2ನೇ ಇನ್ನಿಂಗ್ಸ್​​ ಆಂಭಿಸಿದೆ.


ಟೀಂ ಇಂಡಿಯಾ ದಾಳಿಗೆ ಬಾಂಗ್ಲಾ ತತ್ತರ:


ಇನ್ನು, ಭಾರತದ ಮೊದಲ ಇನ್ನಿಂಗ್ಸ್​ನ 404 ರನ್​ಗೆ ಪ್ರತ್ಯುತ್ತರವಾಗಿ ಬಾಂಗ್ಲಾ ತನ್ನ ಮೊದಲ ಇನ್ನಿಂಗ್ಸ್​​ ಆರಂಬಿಸಿದಾಗ ಆರಂಭಿಕ ಆಘಾತಕ್ಕೆ ಒಳಗಾಗಿತು. ಬಾಂಗ್ಲಾದೇಶದ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಬೇಗನೇ ಫೇವೆಲಿಯನ್​ ಸೇರಿದರು. ಬಾಂಗ್ಲಾ ಪರ  ಬಾಂಗ್ಲಾ ಪರ ಝಾಕಿರ್ ಹಸನ್ 202 ರನ್, ನಜ್ಮುಲ್ ಹೊಸೈನ್ ಶಾಂಟೊ ಶೂನ್ಯ, ಲಿಟನ್ ದಾಸ್ 24 ರನ್, ಶಾಕಿಬ್ ಅಲ್ ಹಸನ್ 3 ರನ್, ಮುಶ್ಫಿಕರ್ ರಹೀಮ್ 28 ರನ್, ಯಾಸಿರ್ ಅಲಿ 4 ರನ್, ನೂರುಲ್ ಹಸನ್ 16 ರನ್, ತೈಜುಲ್ ಇಸ್ಲಾಂ ಶೂನ್ಯ, ಇಬಾದತ್ ಹೊಸೈನ್ 17 ರನ್, ಮೆಹದಿ ಹಸನ್ ಮಿರಾಜ್ 25 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು.5 ವಿಕೆಟ್ ಕಬಳಿಸಿದ ಯಾದವ್:


ಇನ್ನು, ಟೀಂ ಇಂಡಿಯಾ ಭರ್ಜರಿ ಬೌಲಿಂಗ್​ ಮಾಡಿತು. ಭಾರತದ ಪರ ಕುಲದೀಪ್​ ಯಾದವ್​ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದರು. ಯಾದವ್  16 ಓವರ್​ ಬೌಲ್​ ಮಾಡಿ 6 ಓವರ್​ ಮೇಡಿನ್​ ಮಾಡುವ ಮೂಲಕ 5 ವಿಕೆಟ್​ ಕಬಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್ 3 ವಿಕೆಟ್​, ಉಮೇಶ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.


ಸ್ಪಿನ್ನರ್ ಕುಲದೀಪ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಅವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಈ ಸಾಧನೆ ಮಾಡಿದ್ದರು. ಸುದೀರ್ಘ ಸಮಯದ ನಂತರ ಟೆಸ್ಟ್ ತಂಡಕ್ಕೆ ವಾಪಸಾಗಿರುವ ಕುಲದೀಪ್, ಸದ್ಯಕ್ಕೆ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ.


ಇದನ್ನೂ ಓದಿ: IND vs BAN Test: ಲಿಟನ್​ ದಾಸ್​-ಸಿರಾಜ್​ ನಡುವೆ ಕಿರಿಕ್​, ಕೊಹ್ಲಿ ರಿಯಾಕ್ಷನ್​ ವಿಡಿಯೋ ವೈರಲ್


ಭಾರತ-ಬಾಂಗ್ಲಾದೇಶ ಪ್ಲೇಯಿಂಗ್​ 11:


ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್


ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.

Published by:shrikrishna bhat
First published: