ಭಾರತ ಮತ್ತು ಬಾಂಗ್ಲಾದೇಶ (IND vs BAN Test) ನಡುವಿನ ಎರಡು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯ ಚಿತ್ತಗಾಂಗ್ನಲ್ಲಿ (Zahur Ahmed Chowdhury Stadium) ನಡೆಯುತ್ತಿದೆ. ಈಗಾಗಲೇ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 133.5 ಓವರ್ಗಳಲ್ಲಿ 404 ರನ್ ಗಳಿಸಿ ಆಲೌಟ್ ಆಗಿದೆ. ಬಾಂಗ್ಲಾದೇಶ ಇದೀಗ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ಆರಂಭಿಕ ಆಘಾತ ಅನುಭವಿಸಿದೆ. ಬಾಂಗ್ಲಾ 2 ವಿಕೆಟ್ ಪತನವಾಗಿದೆ. ಇಂದು ಭಾರತದ ಪರ ರವಿಚಂದ್ರನ್ ಅಶ್ವಿನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
ಆಕರ್ಷಕ ಅರ್ಧಶತಕ ಸಿಡಿಸಿದ ಅಶ್ವಿನ್:
2ನೇ ದಿನದಾಟದ ಭೋಜನ ವಿರಾಮದ ನಂತರ ಭಾರತ ತಂಡ ಆಲೌಟ್ ಆಗುವ ಮೂಲಕ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿದೆ. ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 133. 5 ಓವರ್ಗೆ 404 ರನ್ ಗಳಿಸಿದೆ. ಇಂದು ಭಾರತದ ಪರ ರವಿಂದ್ರನ್ ಅಶ್ವಿನ್ 113 ಎಸೆತದಲ್ಲಿ 2 ಫೋರ್ ಮತ್ತು 2 ಸಿಕ್ಸ್ ಮೂಲಕ 58 ರನ್ ಗಳಿಸಿದರು. ಉಳಿಂದತೆ ಕುಲದೀಪ್ ಯಾವದ್ 40 ರನ್ ಮತ್ತು ಉಮೇಶ್ ಯಾದವ್ 15 ರನ್, ಮೊಹಮ್ಮದ್ ಸಿರಾಜ್ 4 ರನ್, ಶ್ರೇಯಸ್ ಐಯ್ಯರ್ ಇಂದು 192 ಎಸೆತದಲ್ಲಿ 10 ಬೌಂಡರಿ ಸಿಡಿಸಿ 86 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ನಾಯಕ ಕೆಎಲ್ ರಾಹುಲ್ 54 ಬೌಲ್ಗೆ 22 ರನ್ ಮತ್ತು ಶುಭ್ಮನ್ ಗಿಲ್ 40 ಎಸೆತದಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಸಹ ಕೇವಲ 1 ರನ್ ಗಳಿಸಿ ತಜುಲ್ ಇಸ್ಲಾಂಗೆ ವಿಕೆಟ್ ನೀಡಿದರು. ರಿಷಭ್ ಪಂತ್ 46 ರನ್, ಚೇತೇಶ್ವರ್ ಪೂಜಾರ 203 ಎಸೆತದಲ್ಲಿ 11 ಪೋರ್ ಮೂಲಕ 90 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಶತಕ ಮಿಸ್ ಮಾಡಿಕೊಂಡರು. ಅಕ್ಷರ್ ಪಟೇಲ್ 14 ರನ್ ಗಳಿಸಿದರು.
#TeamIndia all out for 404 in the first innings.
Half-centuries for Cheteshwar Pujara (90), Shreyas Iyer (86) & Ashwin Ravi (58)👏 👏
Valuable 40s from Rishabh Pant (46) and Kuldeep Yadav (40)@mdsirajofficial into the attack gets a wicket on the first delivery.#BANvIND pic.twitter.com/4esaKrTtfi
— BCCI (@BCCI) December 15, 2022
ಇನ್ನು, ಬಾಂಗ್ಲಾದೇಶ ತಂಡವು 2ನೇ ದಿನ ಉತ್ತಮ ಬೌಲಿಂಗ್ ದಾಳಿ ನಡೆಸಿತು. ಬಾಂಗ್ಲಾ ಪರ ತೈಜುಲ್ ಇಸ್ಲಾಂ ಮತ್ತು ಮೆಹದಿ ಹಸನ್ ಮಿರಾಜ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಉಳಿಂದತೆ ಮೆಹದಿ ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್ ತಲಾ 1 ವಿಕೆಟ್ ಪಡೆದರು.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ