ಟೀಂ ಇಂಡಿಯಾ (Team India) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul), ಟಿ20 ಮತ್ತು ಏಕದಿನ ಮಾದರಿ ಕ್ರಿಕೆಟ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲೂ (Test Cricket) ನಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಈ ನಡುವೆ ಅಭಿಮಾನಿಗಳು ಕೆಎಲ್ ರಾಹುಲ್ರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿರುವ ಕಾರಣ ಬಿಸಿಸಿಐ (BCCI) ಅವರಿಗೆ ಟೆಸ್ಟ್ ಕ್ಯಾಪ್ಟನ್ ಪಟ್ಟವನ್ನು ನೀಡಿದ್ದಾರೆ. ಬಾಂಗ್ಲಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೆಎಲ್ ರಾಹುಲ್ ನಾಯಕತ್ವದಲ್ಲಿ ಗೆಲುವು ಪಡೆದಿತ್ತು. ಈ ನಡುವೆ ಕೆಎಲ್ ರಾಹುಲ್ ಟೀಂ ಇಂಡಿಯಾದ ಲಕ್ಕಿ ಕ್ಯಾಪ್ಟನ್ ಅಂತಲೂ ಪ್ರಚಾರ ನಡೆಯುತ್ತಿದೆ. ಏಕೆಂದರೆ ಕೆಎಲ್ ರಾಹುಲ್ ನಾಯಕತ್ವದಲ್ಲೇ ವಿರಾಟ್ ಕೊಹ್ಲಿ, ಪೂಜಾರ ತಮ್ಮ ಶತಕದ ದಾಹವನ್ನು ನೀಗಿಸಿಕೊಂಡಿದ್ದರು. ಇತ್ತ ಇಶಾನ್ ಕಿಶನ್, ಶುಭ್ಮನ್ ಗಿಲ್ ಸ್ಮರಣೀಯ ಶತಕಗಳನ್ನು ಸಿಡಿಸಿದ್ದಾರೆ.
ಟೀಂ ಇಂಡಿಯಾ ಕಮ್ಬ್ಯಾಕ್ ಬಳಿಕ ನಿರಾಸ ಪ್ರದರ್ಶನ
ಕೆಎಲ್ ರಾಹುಲ್, ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಳಿಕ ಸುದೀರ್ಘ ಕಾಲ ಟೀಂ ಇಂಡಿಯಾದಿಂದ ದೂರವಾಗಿದ್ದರು. ಏಷ್ಯಾ ಕಪ್ನಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿದರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು.
ಆ ಬಳಿಕ ಟಿ20 ವಿಶ್ವಕಪ್ನಲ್ಲೂ ಸಣ್ಣ ತಂಡಗಳ ಮೇಲೆ ಅರ್ಧ ಶತಕಗಳಿಸಿದ್ದು ಹೊರತುಪಡಿಸಿದರೆ, ಬಲಿಷ್ಠ ತಂಡಗಳ ವಿರುದ್ಧ ತಮ್ಮ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲರಾಗಿದ್ದರು. ಉಳಿದಂತೆ ಬಾಂಗ್ಲಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು, ಉಳಿದ ಎರಡು ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು.
ರಾಹುಲ್ ಲಕ್ಕಿ ಕ್ಯಾಪ್ಟನ್ ಅಂತಿದ್ದಾರೆ ನೆಟ್ಟಿಗರು
ಬಿಸಿಸಿಐ ಪದೇ ಪದೇ ಅವಕಾಶಗಳನ್ನು ನೀಡುತ್ತಿದ್ದರು ಕೂಡ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ರಾಹುಲ್ ಯಶಸ್ವಿಯಾಗಿಲ್ಲ ಅಂತಲೇ ಹೇಳಬಹುದು. ಇದರಿಂದ ಸಾಕಷ್ಟು ಅಭಿಮಾನಿಗಳು ಅವರನ್ನು ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಆದರೆ ಬಾಂಗ್ಲಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಗಾಯಗೊಂಡಿದ್ದ ಕಾರಣ, ರಾಹುಲ್ ಟೆಸ್ಟ್ ತಂಡದ ನಾಯಕರಾಗಿ ಜವಾಬ್ದಾರಿ ಪಡೆದುಕೊಂಡಿದ್ದಾರೆ. ಆದರೆ ರಾಹುಲ್ ತಂಡದಲ್ಲಿ ಇರೋದು ತಂಡಕ್ಕೆ ನಷ್ಟ ಅಂತ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಲಕ್ನಿಂದ ಕ್ಯಾಪ್ಟನ್ ಆಗಿದ್ದಾರೆ ಅಂತ ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಭರ್ಜರಿ ಫಾರ್ಮ್ನಲ್ಲಿ ಟೀಂ ಇಂಡಿಯಾ ಆಟಗಾರರು
ಕೆಎಲ್ ರಾಹುಲ್ ನಾಯಕತ್ವದಲ್ಲಿ ಬಾಂಗ್ಲಾದೇಶದ ವಿರುದ್ಧ ಮೂರನೇ ಏಕದಿನ ಪಂದ್ಯ ಆಡಿದ್ದ ಟೀಂ ಇಂಡಿಯಾ, ಮೊದಲ ಎರಡು ಪಂದ್ಯಗಳ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತ್ತು.
ಇದನ್ನೂ ಓದಿ: KL Rahul Marriage: ಶೀಘ್ರದಲ್ಲೇ ಕೆಎಲ್ ರಾಹುಲ್ ಕಲ್ಯಾಣೋತ್ಸವ! ಮದುವೆ ಆಗ್ತಿದ್ದೀನಿ ರಜೆ ಕೊಡಿ ಅಂದ್ರಂತೆ ಕ್ರಿಕೆಟಿಗ!
ಇಶಾನ್ ಕಿಶನ್ 210 ರನ್ ಗಳಿಸಿ ದ್ವಿಶತಕ ಸಾಧನೆ ಮಾಡಿದರೆ, ಕೊಹ್ಲಿ 113 ರನ್ ಗಳಿಸಿ ತಮ್ಮ ಶತಕದ ಬರವನ್ನು ನೀಗಿಸಿಕೊಂಡಿದ್ದರು. ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ ಟೀಂ ಇಂಡಿಯಾ 409 ರನ್ ಗಳಿಸಿತ್ತು. ಅಲ್ಲದೇ 227 ರನ್ಗಳ ಅಂತರದಲ್ಲಿ ಭಾರೀ ಗೆಲುವು ಕೂಡ ಪಡೆದುಕೊಂಡಿತ್ತು.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಗೆಲುವು
ಇನ್ನು, ಚಟ್ಟೋಗ್ರಾಮ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಗಿಲ್, ಪೂಜಾರ ಶತಕ ಸಾಧಿಸಿದ ಪರಿಣಾಮ ಬಾಂಗ್ಲಾ ದೇಶಕ್ಕೆ ಟೀಂ ಇಂಡಿಯಾ 513 ರನ್ಗಳ ಬೃಹತ್ ಮೊತ್ತವನ್ನು ಟಾರ್ಗೆಟ್ ಆಗಿ ನೀಡಿತ್ತು.
ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಏಷ್ಯಾ ಕಪ್ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಂಡಿದ್ದ ಕಾರಣ ರಾಹುಲ್ ಕ್ಯಾಪ್ಟನ್ ಆಗಿದ್ದರು.
WHAT. A. WIN! 👏👏#TeamIndia put on an impressive show to win the first #BANvIND Test by 188 runs 🙌🙌
Scorecard ▶️ https://t.co/CVZ44N7IRe pic.twitter.com/Xw9jFgtsnm
— BCCI (@BCCI) December 18, 2022
ಅಂದು ಅಫ್ಘಾನ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ, 1000 ದಿನಗಳ ಬಳಿಕ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಬಾಂಗ್ಲಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ ಮೂರು ವರ್ಷಗಳ ಬಳಿಕ ಏಕದಿನ ಮಾದರಿ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು.
Everyone ending their century drought under Captain KL Rahul😭. pic.twitter.com/NoYmC4y0dx
— iᴍ_Aʀʏᴀɴ18 (@crickohli18) December 16, 2022
Virat Kohli got his 71st and 72nd century .
Ishan Kishan got his double hundred.
Kuldeep Yadav, cameback to test cricket and got a fifer.
Shubman Gill got his first ODI and 1st test century.
Pujara got his century after 47 months.
What a Captain KL Rahul has been😂#INDvBAN pic.twitter.com/aNnyE0tbHo
— Akshat (@AkshatOM10) December 16, 2022
ಇದೆಲ್ಲವೂ ಕಾಕತಾಳೀಯವಾದರು ಸಹ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ರಾಹುಲ್ ನಾಯಕತ್ವದಲ್ಲಿ ನಡೆದಿದೆ ಅಂತ ಪ್ರಚಾರ ಮಾಡಲಾಗುತ್ತಿದೆ. ಆಟಗಾರರು ಭರ್ಜರಿ ಪ್ರದರ್ಶನ ನೀಡಿದ ಕಾರಣ ಟೀಂ ಇಂಡಿಯಾ ಗೆಲುವು ಪಡೆಯಿತಾ? ಇಲ್ಲ ಎಂದರೇ, ರಾಹುಲ್ ಕ್ಯಾಪ್ಟನ್ ಆಗಿದ್ದರಿಂದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ರಾ? ಆದರೆ, ತನ್ನದೇ ನಾಯತ್ವದಲ್ಲಿ ರಾಹುಲ್ ಏಕೆ ಸೆಂಚುರಿ ಸಾಧಿಸಿಲ್ಲ? ಮುಂದಿನ ಶತಕ ಸಾಧಿಸುವುದು ರಾಹುಲ್ ಅವರೇನಾ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ