ಬಾಂಗ್ಲಾದೇಶದ (Bangladesh) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನಾಯಕ ಕೆಎಲ್ ರಾಹುಲ್ (KL Rahul) ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 22 ರನ್ಗಳಿದ್ದ ರಾಹುಲ್, ಎರಡನೇ ಇನ್ನಿಂಗ್ಸ್ನಲ್ಲೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೇವಲ 23 ರನ್ ಗಳಿಗೆ ಪೆವಿಲಿಯನ್ ಸೇರಿದ ರಾಹುಲ್ರನ್ನು ಫ್ಯಾನ್ಸ್ ಸಖತ್ ಟ್ರೋಲ್ ಮಾಡ್ತಿದ್ದಾರೆ. ಎರಡನೇ ಇನ್ನಿಂಗ್ನಲ್ಲಿ ಕೆಎಲ್ ರಾಹುಲ್ ಎಚ್ಚರಿಕೆಯ ಇನ್ನಿಂಗ್ಸ್ ಆಡಲು ಮುಂದಾಗಿದ್ದೇ, ಫ್ಯಾನ್ಸ್ ಅಸಮಾಧಾನಗೊಳ್ಳಲು ಕಾರಣ ಎನ್ನಲಾಗಿದೆ. ಏಕೆಂದರೆ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಕ್ಯಾಪ್ಟನ್, ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಅಗ್ರೆಸ್ಸಿವ್ ಆಟಕ್ಕೆ ಮುಂದಾಗುತ್ತದೆ ಎಂದು ಹೇಳಿದ್ದರು. ಆದರೆ ಹಾಗೇ ಹೇಳಿದ ರಾಹುಲ್ ಮಾತ್ರ, ತಾಳ್ಮೆಯ ಆಟಕ್ಕೆ ಮುಂದಾಗಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೇಳಬಹುದು.
ಕ್ಯಾಪ್ಟನ್ ಇನ್ನಿಂಗ್ಸ್ ಆಡಲಿಲ್ಲ ಕೆಎಲ್ ರಾಹುಲ್
ಮೊದಲ ಇನ್ನಿಂಗ್ಸ್ನಲ್ಲಿ ಆಫ್ ಸೈಡ್ ಹೋಗುತ್ತಿದ್ದ ಚೆಂಡನ್ನು ವಿಕೆಟ್ ಮೇಲೆ ಬರುವಂತೆ ಆಡಿದ್ದ ರಾಹುಲ್, ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿಯಾದರೂ ಕ್ಯಾಪ್ಟನ್ ಇನ್ನಿಂಗ್ಸ್ ಆಡುತ್ತಾರೆ ಎಂದುಕೊಂಡರೆ ಕೇವಲ 23 ರನ್ ಗಳಿಸಿದರು.
ಈ ಇನ್ನಿಂಗ್ಸ್ನಲ್ಲಿ ಸಹ ಖಲೀದ್ ಅಹ್ಮದ್ ಬೌಲಿಂಗ್ನಲ್ಲಿ ಔಟ್ ಆಗಿದ್ದು, ಖಲೀದ್ ಎಸೆದ ಚೆಂಡನ್ನು ಅಂದಾಜು ಮಾಡಲಾಗದೆ, ಸುಲಭ ಕ್ಯಾಚ್ ಕೊಟ್ಟು ಔಟ್ ಆಗಿದ್ದರು. ಇದರೊಂದಿಗೆ ಅಸಮಾಧಾನ ಹೊರ ಹಾಕಿರುವ ನೆಟ್ಟಿಗರು, ಜಸ್ಟ್ 77 ರನ್ಗಳ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡಿದ್ದೀರಿ ಎಂದು ಕಾಮೆಂಟ್ ಮಾಡುತ್ತಾ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: IND vs BAN Test: ಶತಕ ಸಿಡಿಸಿದ ಪೂಜಾರ-ಗಿಲ್, ಬಾಂಗ್ಲಾಗೆ ಬೃಹತ್ ಟಾರ್ಗೆಟ್; 3ನೇ ದಿನದಾಟ ಅಂತ್ಯ
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಅಗ್ರೆಸ್ಸಿವ್ ಆಟ ಎಂದಿದ್ದ ರಾಹುಲ್
ಟೆಸ್ಟ್ ಸರಣಿಗೂ ಮುನ್ನ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲೂ ರಾಹುಲ್ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದ ರಾಹುಲ್, ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಗಳಿಸಲು ವಿಫಲರಾಗಿದ್ದರು.
ರಾಹುಲ್ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದು ಟ್ರೋಲ್ ಆಗಲು ಒಂದು ಕಾರಣವಾದರೆ, ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಆಡಿದ್ದ ಮಾತುಗಳು ಕೂಡ ಹೆಚ್ಚು ಟ್ರೋಲ್ ಆಗಲು ಕಾರಣವಾಗಿದೆ. ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್, ಭಾರತವು ಬಾಂಗ್ಲಾದೇಶದ ವಿರುದ್ಧ ಆಕ್ರಮಣಕಾರಿ ಕ್ರಿಕೆಟ್ ಆಡಲಿದೆ. ವಿಶ್ವ ಟೆಸ್ಟ್ ಚಾಂಲಿಯನ್ ಶಿಫ್ ಫೈನಲ್ ಮುಂದಿದ್ದು, ಇಂಗ್ಲೆಂಡ್ನಲ್ಲಿ ಆಡಿದಂತೆ ಆಕ್ರಮಣಕಾರಿ ಆಗಿರಬೇಕಾಗುತ್ತದೆ ಎಂದರು ಹೇಳಿದ್ದರು.
ಬ್ಯಾಟಿಂಗ್ನಲ್ಲೂ ಗಮನ ಸೆಳೆದಿದ್ದ ಆರ್.ಅಶ್ವಿನ್
ಉಳಿದಂತೆ, ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಅರ್ಧ ಶತಕ ಗಳಿಸಿ ಮಿಂಚಿದ್ದರು. ಇದನ್ನು ರಾಹುಲ್ ಟ್ರೋಲ್ ಬಳಿಸಿಕೊಂಡಿರುವ ಫ್ಯಾನ್ಸ್, ಸ್ಪೆಷಲಿಸ್ಟ್ ಬ್ಯಾಟರ್ಗಳಿಗಿಂತ ಅಶ್ವಿನ್ ಉತ್ತಮವಾಗಿ ಆಡಿದ್ದಾರೆ. ಅದರಲ್ಲೂ ರಾಹುಲ್ಗಿಂತ, ಅಶ್ವಿನ್ ಆಟ ಸಾವಿರ ಪಟ್ಟು ಉತ್ತಮವಾಗಿದೆ ಅಂತ ಕಾಲೆಳೆದಿದ್ದಾರೆ. ಅಂಕಿ ಅಂಶಗಳನ್ನು ಗಮನಿಸಿದರೆ, ಟೀಂ ಇಂಡಿಯಾ ಬ್ಯಾಟಿಂಗ್ ಲೋ ಅರ್ಡರ್ನಲ್ಲಿ ಅಶ್ವಿನ್ ಉತ್ತಮ ಆಟಗಾರ ಎಂಬುವುದು ಸಾಬೀತಾಗುತ್ತದೆ.
That's Stumps on Day 3 of the first #BANvIND Test!
Bangladesh move to 42/0 after #TeamIndia secured a 512-run lead!
We will be back for Day 4 action tomorrow.
Scorecard ▶️ https://t.co/CVZ44NpS5m pic.twitter.com/scqMCXxlG2
— BCCI (@BCCI) December 16, 2022
ವೃತ್ತಿ ಜೀವನದಲ್ಲಿ 87ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್, 27.17ರ ಸರಾಸರಿಯಲ್ಲಿ 2989 ರನ್ಗಳನ್ನು ಟೆಸ್ಟ್ ಮಾದರಿಯಲ್ಲಿ ಗಳಿಸಿದ್ದಾರೆ. ಇದರಲ್ಲಿ 5 ಶತಕ, 13 ಅರ್ಧ ಶತಕಗಳು ಸೇರಿದೆ.
ಹೆಚ್ಚು ಆಫ್ ಸೆಂಚುರಿ ಗಳಿಸಿದ ಆಲ್ರೌಂಡರ್ಗಳ ಒಟ್ಟಿಯಲ್ಲಿ ದಿಗ್ಗಜ ಆಟಗಾರ ಕಪಿಲ್ ದೇವ್ ಬಳಿಕ ಅಶ್ವಿನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸದ್ಯ ಟೀಂ ಇಂಡಿಯಾ ಪರ ಆಡುತ್ತಿರುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ (8,074 ರನ್), ಪೂಜಾರ (6,882 ರನ್), ರೋಹಿತ್ ಶರ್ಮಾ (3,137 ರನ್) ಬಳಿಕ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರ ಅಶ್ವಿನ್ ಎನಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ