ಏಕದಿನ ಸರಣಿ ಸೋಲಿನ ನಂತರ ಭಾರತ ಕ್ರಿಕೆಟ್ ತಂಡವು ಆತಿಥೇಯ ಬಾಂಗ್ಲಾದೇಶ ವಿರುದ್ಧ ಮುಂಬರುವ 2 ಪಂದ್ಯಗಳ ಟೆಸ್ಟ್ ಸರಣಿಗೆ (IND vs BAN) ತಯಾರಿ ಆರಂಭಿಸಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ (ಡಿಸೆಂಬರ್ 14) ಚಿತ್ತಗಾಂಗ್ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ಬಲಾಬಲಗಳನ್ನು ನೋಡುವುದಾರೆ, ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಯಾವುದೇ ಪಂದ್ಯವನ್ನು (IND vs BAN Head to head) ಸೋತಿಲ್ಲ. ಆದರೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಗೆಲುವು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಟೆಸ್ಟ್ ಸರಣಿಯಲ್ಲಿ ಆತಿಥೇಯ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮುಂದಿನ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್:
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯವು ಜೂನ್, 2023ರಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2023) ಸಮೀಕರಣದ ಕುರಿತು ಮಾತನಾಡುತ್ತಾ, ಆತಿಥೇಯರ ವಿರುದ್ಧ ಒಂದೇ ಒಂದು ಟೆಸ್ಟ್ನಲ್ಲಿ ಫಭಾರತವು ಸೋಲಬಾರದು. ಉಭಯ ತಂಡಗಳ ನಡುವೆ ಇದುವರೆಗೆ 11 ಟೆಸ್ಟ್ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದಿದೆ. ಎರಡು ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಬಾಂಗ್ಲಾದೇಶದ ಖಾತೆಯಲ್ಲಿ ಒಂದೇ ಒಂದು ಗೆಲುವು ಇಲ್ಲ ಎನ್ನುವುದು ವಿಶೇಷ.
ಬಾಂಗ್ಲಾಗೆ ಮೊದಲ ಗೆಲುವಿನ ನಿರೀಕ್ಷೆ:
2000 ರಿಂದ ಎರಡೂ ತಂಡಗಳು ಪರಸ್ಪರ ಟೆಸ್ಟ್ ಪಂದ್ಯಗಳನ್ನು ಆಡುತ್ತಿವೆ. ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಸಮಯದಲ್ಲಿ ಬಾಂಗ್ಲಾ ಕೆಲವು ಟೆಸ್ಟ್ ಡ್ರಾಗಳನ್ನು ಪಡೆಯುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಸದ್ಯ ತವರಿನಲ್ಲಿ ಆಡುತ್ತಿರುವುದು ಬಾಂಗ್ಲಾದೇಶಕ್ಕೆ ಹೆಚ್ಚು ಲಾಭವಾಗಲಿದೆ. ಭಾರತದ ವಿರುದ್ಧ ಬಾಂಗ್ಲಾ ತವರಿನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ಏಕದಿನ ಸರಣಿಯಲ್ಲಿ ಭಾರತವನ್ನು 2-1 ಅಂತರದಿಂದ ಸೋಲಿಸಿತ್ತು. ಏಕದಿನ ಸರಣಿಯನ್ನು ಗೆದ್ದ ನಂತರ ಬಾಂಗ್ಲಾದೇಶದ ಉತ್ಸಾಹ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಪ್ರಯತ್ನವು ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2023 ರ ಹಾದಿಯಲ್ಲಿ ಅಡಚಣೆಯಾಗಲಿದೆ.
ಇದನ್ನೂ ಓದಿ: IND vs BAN Test: ಭಾರತ-ಬಾಂಗ್ಲಾ ಟೆಸ್ಟ್ಗೆ ಮಳೆ ಅಡ್ಡಿ? ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್
ಭಾರತ ತಂಡವು WTC ಪಾಯಿಂಟ್ ಪಟ್ಟಿ:
ಬಾಂಗ್ಲಾದೇಶದೊಂದಿಗೆ ತವರಿನಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದೆ . ಟೀಂ ಇಂಡಿಯಾ 6 ಪಂದ್ಯ ಗೆದ್ದಿದ್ದರೆ, 2 ಪಂದ್ಯ ಡ್ರಾ ಆಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇನ್ನೂ 6 ತಿಂಗಳು ಬಾಕಿ ಇದೆ. ಭಾರತ ತಂಡವು 6 ಟೆಸ್ಟ್ ಪಂದ್ಯಗಳನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಪ್ರಸ್ತುತ 4ನೇ ಸ್ಥಾನದಲ್ಲಿದೆ. ಈ ಆರು ತಿಂಗಳಲ್ಲಿ ಟೀಂ ಇಂಡಿಯಾ 6 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಫೈನಲ್ನ ರೇಸ್ನಲ್ಲಿ ಉಳಿಯಲು ಎಲ್ಲಾ ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕು.
ಪಿಚ್ ವರದಿ:
ಚಿತ್ತಗಾಂಗ್ನ ಪಿಚ್ ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತದೆ. ಇದಾಗಿಯೂ ಇಲ್ಲಿ ಸಾಕಷ್ಟು ರನ್ಗಳನ್ನು ಮಾಬಹುದಾಗಿದೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಕೂಡ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ತ್ರಿಶತಕ ಬಾರಿಸಿದ್ದರು. ಈ ಪಿಚ್ನಲ್ಲಿ ಸರಾಸರಿ ಸ್ಕೋರ್ 372 ರನ್ ಆಗಿದೆ. ಇಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಶಕೀಬ್ ಅವರು ನೀಡಿದ್ದು, ಅವರು ಈ ಪಿಚ್ನಲ್ಲಿ ಇಂದು ಇನ್ನಿಂಗ್ಸ್ನಲ್ಲಿ ಏಳು ವಿಕೆಟ್ ಕಬಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ