India vs Australia: ನಾಳೆ ಮೊದಲ ಟಿ-20 ಫೈಟ್; ವಿಶ್ವಕಪ್ ತಂಡಕ್ಕೆ ಕೊನೆಯ ಅವಕಾಶ

ಆಸೀಸ್ ವಿರುದ್ಧ ಭಾರತ ಎರಡು ಪಂದ್ಯಗಳ ಟಿ-20 ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪೈಕಿ ನಾಳೆ ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ.

Vinay Bhat | news18
Updated:February 23, 2019, 7:20 PM IST
India vs Australia: ನಾಳೆ ಮೊದಲ ಟಿ-20 ಫೈಟ್; ವಿಶ್ವಕಪ್ ತಂಡಕ್ಕೆ ಕೊನೆಯ ಅವಕಾಶ
ಭಾರತ vs ಆಸ್ಟ್ರೇಲಿಯಾ
  • News18
  • Last Updated: February 23, 2019, 7:20 PM IST
  • Share this:
ವಿಶಾಖಪಟ್ಟಣ: ನ್ಯೂಜಿಲೆಂಡ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಬಳಿಕ ಇದೀಗ ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗಿ ನಿಂತಿದೆ. ವಿಶ್ವಕಪ್ ಮಹಾಸಮರಕ್ಕೆ ಭಾರತಕ್ಕಿದ್ದು ಪೂರ್ವಭಾವಿ ತಾಲೀಮು ಆಗಲಿದ್ದು, ಕೊಹ್ಲಿ ಪಡೆ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಕಾತುರದಿಂದಿದೆ.

ಆಸೀಸ್ ವಿರುದ್ಧ ಭಾರತ ಎರಡು ಪಂದ್ಯಗಳ ಟಿ-20 ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪೈಕಿ ನಾಳೆ ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ.

ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲೂ ಬಲಿಷ್ಠವಾಗಿರುವ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲರ್ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಇವರ ಜೊತೆ ರೋಹಿತ್ ಶರ್ಮಾ, ರಿಷಭ್ ಪಂತ್, ಎಂ ಎಸ್ ಧೋನಿ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಬೆನ್ನು ನೋವಿನಿಂದ ಸರಣಿಯಿಂದ ಹೊರಗುಳಿದಿದ್ದು, ಜಡೇಜಾಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಿಶ್ವಕಪ್​​ ತಂಡದಲ್ಲಿ ಕಾಣಿಸಿಕೊಳ್ಳಲು ಇದು ಜಡೇಜಾಗೂ ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: ದ. ಆಫ್ರಿಕಾ ವಿರುದ್ಧ ಶ್ರೀಲಂಕಾಕ್ಕೆ ಭರ್ಜರಿ ಜಯ; ಇತಿಹಾಸ ರಚಿಸಿದ ಸಿಂಹಳೀಯರು

ಇನ್ನು ಬೌಲರ್ ಮಯಾಂಕ್ ಮಾರ್ಕಂಡೆಗೆ ಪದಾರ್ಪಣೆ ಮಾಡುವ ಅವಕಾಶವಿದೆಯೆ ಎಂಬುದು ಕಾದುನೋಡಬೇಕಿದೆ. ಇವರ ಜೊತೆ ಉಮೇಶ್ ಯಾದವ್ ಟಿ-20 ಸರಣಿಗೆ ಮರಳಿದ್ದು ಬುಮ್ರಾ ಜೊತೆ ಎದುರಾಳಿಗೆ ಕಾಡಲಿದ್ದಾರೆ.

 ಇತ್ತ ಆಸ್ಟ್ರೇಲಿಯಾ ಸೇಡಿಗಾಗಿ ಹಾತೊರೆಯುತ್ತಿದ್ದು, ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುವ ಅಂದಾಜಿನಲ್ಲಿದೆ. ಆ್ಯರೋನ್ ಫಿಂಚ್ ತಂಡವನ್ನು ಮುನ್ನಡೆಸುತ್ತಿದ್ದು, ಅಲೆಕ್ಸ್ ಕ್ಯಾರಿ, ಉಸ್ಮಾನ್ ಖ್ವಾಜಾ, ಶಾನ್ ಮಾರ್ಶ್​​​, ಗ್ಲೆನ್ ಮ್ಯಾಕ್ಸ್​ವೆಲ್​​ರಂತಹ ಟಿ-20 ಸ್ಪೆಷಲಿಸ್ಟ್​​ ಆಟಗಾರರನ್ನು ಹೊಂದಿದೆ. ಜೊತೆಗೆ ಮಾರ್ಕಸ್ ಸ್ಟೋಯ್ನಿಸ್​​​​ರಂತಹ ಸ್ಟಾರ್ ಆಲ್ರೌಂಡರ್​ ಆಟಗಾರ ತಂಡದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನಥನ್ ಲಯನ್, ರಿಚರ್ಡಸನ್ ಹಾಗೂ ಆ್ಯಡಂ ಜಂಪಾ ಪ್ರಮುಖ ಅಸ್ತ್ರವಾಗಿದ್ದಾರೆ.

ಇದನ್ನೂ ಓದಿ: 55 ಎಸೆತಗಳಲ್ಲಿ 147 ರನ್; ಅಯ್ಯರ್ ಅಬ್ಬರಕ್ಕೆ ಟಿ-20 ದಾಖಲೆಗಳೆಲ್ಲ ಪುಡಿಪುಡಿ

ಒಟ್ಟಾರೆ ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿದ್ದು, ಟಿ-20 ಕ್ರಿಕೆಟ್​​ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಬಲಿಷ್ಠ ಸವಾಲೊಡ್ಡಬಲ್ಲದು ಎಂಬುದು ಈ ಹಿಂದೆ ಅನೇಕ ಬಾರಿ ಸಾಭೀತಾಗಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿ ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಸಂಜೆ 7 ಘಂಟೆಗೆ
First published: February 23, 2019, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading