ತವರಿನಲ್ಲಿ ಆಸೀಸ್ ವಿರುದ್ಧ ಸರಣಿ: ಫೆ. 15ಕ್ಕೆ ಭಾರತ ತಂಡ ಪ್ರಕಟ; ಸ್ಟಾರ್ ಆಟಗಾರರಿಗೆ ವಿಶ್ರಾಂತಿ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಪ್ರಮುಖ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುವ ಅಂದಾಜಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಹಿಂತಿರುಗಿದರೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವುದು ಬಹುತೇಕ ಪಕ್ಕಾ ಆಗಿದೆ.

Vinay Bhat | news18
Updated:February 12, 2019, 5:26 PM IST
ತವರಿನಲ್ಲಿ ಆಸೀಸ್ ವಿರುದ್ಧ ಸರಣಿ: ಫೆ. 15ಕ್ಕೆ ಭಾರತ ತಂಡ ಪ್ರಕಟ; ಸ್ಟಾರ್ ಆಟಗಾರರಿಗೆ ವಿಶ್ರಾಂತಿ?
ಟೀಂ ಇಂಡಿಯಾ
Vinay Bhat | news18
Updated: February 12, 2019, 5:26 PM IST
ಹೊಸದಿಲ್ಲಿ: ನ್ಯೂಜಿಲೆಂಡ್ ಸರಣಿ ಮುಗಿಸಿರುವ ಟೀಂ ಇಂಡಿಯಾ ಸದ್ಯ ಭಾರತಕ್ಕೆ ಹಿಂತಿರುಗಿದ್ದು, ಕುಟುಂಬಿಕರ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ತವರಿನಲ್ಲೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ-20 ಹಾಗೂ ಐದು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಫೆ. 15 ರಂದು ಭಾರತ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಪ್ರಮುಖ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುವ ಅಂದಾಜಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಹಿಂತಿರುಗಿದರೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವುದು ಬಹುತೇಕ ಪಕ್ಕಾ ಆಗಿದೆ.

ಅಂತೆಯೆ ಕೆ ಎಲ್ ರಾಹುಲ್, ಅಜಿಂಕ್ಯ ರಹಾನೆ, ರಿಷಭ್ ಪಂತ್ ಆಯ್ಕೆ ಆಗುವ ಅಂದಾಜಿದೆ. ಬೌಲಿಂಗ್​​ನಲ್ಲಿ ಜಸ್​ಪ್ರೀತ್​ ಬುಮ್ರಾ ತಂಡಕ್ಕೆ ಕಮ್​​ಬ್ಯಾಕ್ ಮಾಡಿದರೆ, ಯಜುವೇಂದ್ರ ಚಹಾಲ್ ಅಥವಾ ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡಿಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಐಪಿಎಲ್​​ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​ಗೆ ಆಲೌಟ್: ಆರ್​​ಸಿಬಿಗೆ ಮೊದಲ ಸ್ಥಾನ

ಮುಂಬರುವ ಐಪಿಎಲ್ ಹಾಗೂ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಹೀಗಾಗಿ ಫೆ. 15 ರಂದು ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಎರಡು ಟಿ-20 ಪಂದ್ಯಗಳ ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮೊದಲ ಟಿ-20 ಪಂದ್ಯ ಫೆಬ್ರವರಿ 24ಕ್ಕೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಇನ್ನು ಎರಡನೇ ಟಿ-20 ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಫೆ. 27 ರಂದು ನಡೆಯಲಿದೆ. ಎರಡೂ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
Loading...

ಇದನ್ನೂ ಓದಿ: ನಮ್ಮೊಂದಿಗೆ ಕ್ರಿಕೆಟ್ ಆಡಿ ಎಂದು ಭಾರತವೇ ಅಂಗಲಾಚುವಂತೆ ಮಾಡುತ್ತೇವೆ; ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಅಂತೆಯೆ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯ ಮಾ. 2 ರಂದು ಹೈದರಾಬಾದ್, 2ನೇ ಏಕದಿನ ಪಂದ್ಯ ಮಾ. 5 ನಾಗ್ಪುರ್, 3ನೇ ಏಕದಿನ ಪಂದ್ಯ ಮಾ. 8 ರಂದು ರಾಂಚಿ, 4ನೇ ಏಕದಿನ ಪಂದ್ಯ ಮಾ. 10 ರಂದು ಮೊಹಾಲಿಯಲ್ಲಿ ಹಾಗೂ ಕೊನೆಯ ಐದನೇ ಏಕದಿನ ಪಂದ್ಯ ಮಾ. 13 ರಂದು ಡೆಲ್ಲಿಯಲ್ಲಿ ನಡೆಯಲಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ