ಆಸ್ಟ್ರೇಲಿಯಾ ಸರಣಿಗೆ ಕೆ ಎಲ್ ರಾಹುಲ್ ಯಾಕೆ? ಪ್ರಶ್ನೆಗೆ ಆಯ್ಕೆ ಸಮಿತಿ ನೀಡಿದ ಉತ್ತರವೇನು?

ರಾಹುಲ್​​ರನ್ನು ಆಸೀಸ್ ಸರಣಿಗೆ ಆಯ್ಕೆ ಮಾಡಿಕೊಂಡ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಗೊಂಡಿದ್ದವು. ಆದರೆ, ಸದ್ಯ ಆಯ್ಕೆ ಸಮಿತಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Vinay Bhat | news18
Updated:February 18, 2019, 9:29 PM IST
ಆಸ್ಟ್ರೇಲಿಯಾ ಸರಣಿಗೆ ಕೆ ಎಲ್ ರಾಹುಲ್ ಯಾಕೆ? ಪ್ರಶ್ನೆಗೆ ಆಯ್ಕೆ ಸಮಿತಿ ನೀಡಿದ ಉತ್ತರವೇನು?
ಕೆ ಎಲ್ ರಾಹುಲ್
  • News18
  • Last Updated: February 18, 2019, 9:29 PM IST
  • Share this:
ಹೊಸದಿಲ್ಲಿ: ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕೊಹ್ಲಿ ಪಡೆ ಸಿದ್ದಗೊಂಡಿದೆ. ಅಂದುಕೊಂಡಂತೆ ಬಿಸಿಸಿಐ ಬಲಿಷ್ಠ ಭಾರತ ತಂಡವನ್ನೂ ಆಯ್ಕೆ ಮಾಡಿದೆ. ಅಂತೆಯೆ ಬ್ಯಾಡ್ ಫಾರ್ಮ್​ ಜೊತೆ ನಿಷೇಧದಿಂದ ತಂಡದಿಂದ ಹೊರಗುಳಿದಿದ್ದ ಕೆ ಎಲ್ ರಾಹುಲ್ ಮತ್ತೆ ಕಮ್​​ಬ್ಯಾಕ್ ಮಾಡಿದ್ದಾರೆ.

ರಾಹುಲ್​​ರನ್ನು ಆಸೀಸ್ ಸರಣಿಗೆ ಆಯ್ಕೆ ಮಾಡಿಕೊಂಡ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಗೊಂಡಿದ್ದವು. ಆದರೆ, ಸದ್ಯ ಆಯ್ಕೆ ಸಮಿತಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮುಂಬರುವ ವಿಶ್ವಕಪ್ ಅನ್ನು ಆಲೋಚನೆಯಲ್ಲಿಟ್ಟುಕೊಂಡು ಕೆ ಎಲ್ ರಾಹುಲ್​​ರನ್ನು ತಂಡಕ್ಕೆ ಮತ್ತೆ ಸೇರಿಸಿಕೊಂಡಿದ್ದೇವೆ. ಯಾಕಂದ್ರೆ, ನಾವು ವಿಶ್ವಕಪ್​ನಲ್ಲಿ ಮೂರನೇ ಆರಂಭಿಕ ಆಟಗಾರನಿಲ್ಲದೆ ಹೋಗುವಂತಿಲ್ಲ. ಆ ಸ್ಥಾನಕ್ಕೆ ಸೂಕ್ತ ಆಟಗಾರನ ಅವಶ್ಯಕತೆಯಿದೆ. ಅದಕ್ಕಾಗಿ ರಾಹುಲ್​​ರನ್ನು ಆಸ್ಟ್ರೇಲಿಯಾ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ ಅವರ ಪ್ರದರ್ಶನದ ಜೊತೆ  ಫಾರ್ಮ್​ ಕೂಡ ಹೇಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಒದಿ: ಪುಲ್ವಾಮ ದಾಳಿ: ಐಪಿಎಲ್​​​​ನಿಂದ ಎಬಿಡಿ, ಪೊಲಾರ್ಡ್​​ ಸೇರಿ ಪ್ರಮುಖ ಆಟಗಾರರ ನಿಷೇಧಕ್ಕೆ ಹೆಚ್ಚಿದ ಒತ್ತಡ

ಇನ್ನು ರಿಷಭ್ ಪಂತ್ ಆಯ್ಕೆ ಬಗ್ಗೆ ಮಾತನಾಡಿದ ಪ್ರಸಾದ್, ಪಂತ್ ಇನ್ನೂ ಕೆಲ ಪಂದ್ಯಗಳನ್ನು ಆಡಬೇಕು. ಹೀಗಾಗಿ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಪಂತ್ ಎಡಗೈ ಬ್ಯಾಟ್ಸ್​ಮನ್​ ಆಗಿರುವುದರಿಂದ ಪ್ರಯೋಗಕ್ಕೆ ಒಳಪಡಿಸುತ್ತಿದ್ದೇವೆ. ಒಬ್ಬ ಲೆಫ್ಟ್​​ ಹ್ಯಾಂಡರ್ ಜೊತೆ ರೈಟ್​ ಹ್ಯಾಂಡರ್​ ಕ್ರೀಸ್​ನಲ್ಲಿದ್ದರೆ ಲೆಫ್ಟ್​-ರೈಟ್ ಕಾಂಬಿನೇಷನ್ ಉತ್ತಮವಾಗಿರುತ್ತದೆ ಎಂದಿದ್ದಾರೆ.

First published:February 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading