'ವಿರಾಟ್ ಕೊಹ್ಲಿ' ಕಾಂಗರೂಗಳ ನಾಡಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತದ ಪ್ರಥಮ ನಾಯಕ

ಧೋನಿ ಸಾರಥ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಆಸೀಸ್ ನೆಲದಲ್ಲಿ ಟೆಸ್ಟ್​ ಸರಣಿ ಆಡಿತ್ತಾದರು, ಅದುಕೂಡ ಯಶಸ್ವಿಯಾಗಿಲ್ಲ. ಆದರೆ, ಇದೀಗ ಕಿಂಗ್ ಕೊಹ್ಲಿ ಕಾಂಗರೂಗಳ ನಾಡಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

Vinay Bhat | news18
Updated:January 7, 2019, 1:28 PM IST
'ವಿರಾಟ್ ಕೊಹ್ಲಿ' ಕಾಂಗರೂಗಳ ನಾಡಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತದ ಪ್ರಥಮ ನಾಯಕ
ವಿರಾಟ್ ಕೊಹ್ಲಿ
Vinay Bhat | news18
Updated: January 7, 2019, 1:28 PM IST
ಸಿಡ್ನಿ (ಜ. 07): 1947-48ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡದ್ದ ಭಾರತ ಕ್ರಿಕೆಟ್ ತಂಡ ಇಲ್ಲಿಯ ವರೆಗೆ ಒಂದೇ ಒಂದು ಟೆಸ್ಟ್​ ಸರಣಿ ಗೆದ್ದಿರಲಿಲ್ಲ. ಟಿಂ ಇಂಡಿಯಾವನ್ನು ಟೆಸ್ಟ್​​ನಲ್ಲಿ ನಂಬರ್ 1 ಪಟ್ಟಕ್ಕೆ ಏರಿಸಿದಂತಹ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಆಸೀಸ್ ನೆಲದಲ್ಲಿ ಟೆಸ್ಟ್​ ಸರಣಿ ಆಡಿತ್ತಾದರು, ಅದುಕೂಡ ಯಶಸ್ವಿಯಾಗಿಲ್ಲ. ಆದರೆ, ಇದೀಗ ಕಿಂಗ್ ಕೊಹ್ಲಿ ಕಾಂಗರೂಗಳ ನಾಡಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಅಡಿಲೇಡ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 31 ರನ್​ಗಳ ಗೆಲುವು ದಾಖಲಿಸಿದರೆ, ಪರ್ಥ್​​ನಲ್ಲಿ ನಡೆದ ಎರಡನೇ ಟೆಸ್ಟ್​​​​ 146 ರನ್​ಗಳಿಂದ ಆಸೀಸ್ ಪಾಲಾಯಿತು. ಅಂತೆಯ ಮೆಲ್ಬೋರ್ನ್​​ನಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ 137 ರನ್​​ಗಳ ಜಯ ಸಾಧಿಸಿತು. ಅಂತಿಮ ನಾಲ್ಕನೇ ಟೆಸ್ಟ್​ ಪಂದ್ಯ ಮಳೆಯಿಂದ ಡ್ರಾನಲ್ಲಿ ಅಂತ್ಯಕಂಡ ಪರಿಣಾಮ, ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ 2-1 ಅಂತರದದಲ್ಲಿ ಟೆಸ್ಟ್​ ಸರಣಿ ವಶ ಪಡಿಸಿಕೊಂಡಿದೆ.

ಇದನ್ನೂ ಓದಿ: ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ: ಟೀಂ ಇಂಡಿಯಾ ಆರಂಭಿಕ ಸಮಸ್ಯೆಗೆ ಸಿಕ್ಕಿದೆ ಪರಿಹಾರ

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್​​ ಸರಣಿ ಗೆದ್ದ ಭಾರತದ ಮೊತ್ತ ಮೊದಲ ನಾಯಕ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 7 ದಶಕಗಳ ಬಳಿಕ ಕೊನೆಗೂ ಆಸ್ಟ್ರೇಲಿಯಾದಲ್ಲಿ ಭಾರತ ಚೊಚ್ಚಲ ಟೆಸ್ಟ್​​ ಸರಣಿ ಜಯಿಸಿದ ಸಾಧನೆ ಮಾಡಿದೆ. ಟೀಂ ಇಂಡಿಯಾ ವಿದೇಶಿನೆಲದಲ್ಲಿನ ಕಳಪೆ ಆಟದ ಬಗ್ಗೆ ಈ ಹಿಂದೆ ಭಾರೀ ಟೀಕೆಗಳು ಕೇಳಿಬಂದಿದ್ದವು. ಆದರೆ, ವಿರಾಟ್ ಕೊಹ್ಲಿ ಛಲ ಬಿಡದೆ, ಆಸ್ಟ್ರೇಲಿಯಾದಲ್ಲಿ ಹೊಸ ಇತಿಹಾಸ ಬರೆಯುವ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾರೆ.

First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ