ಫೆಬ್ರವರಿ 9 ರಂದು ಆರಂಭವಾಗಲಿರುವ ಭಾರತ ವಿರುದ್ಧ ನಾಗ್ಪುರ ಟೆಸ್ಟ್‌ಗೆ ಮೊದಲು ಆಸ್ಟ್ರೇಲಿಯಾ (IND vs AUS) ಮತ್ತೊಂದು ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ (Josh Hazlewood) ಕೂಡ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು. ಸರಣಿಗೂ ಮುನ್ನ ಗಾಯಗೊಂಡಿರುವ ಆಸ್ಟ್ರೇಲಿಯಾದ ಮೂರನೇ ವೇಗದ ಬೌಲರ್ ಹೇಜಲ್‌ವುಡ್ ಆಗಿದ್ದಾರೆ. ಗಾಯಗೊಂಡ ಆಟಗಾರರ ಪಟ್ಟಿಯಲ್ಲಿ ಮಿಚೆಲ್ ಸ್ಟಾರ್ಕ್ (Mitchell Starc) ಮತ್ತು ಆಲ್-ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಸಹ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಿಲ್ಲ ಎಂದು ಆಸೀಸ್ ತಿಳಿಸಿದೆ.
ಪಂದ್ಯಕ್ಕೂ ಮುನ್ನ ಆಸೀಸ್ಗೆ ಆಘಾತ:
ನಾಗ್ಪುರ ಟೆಸ್ಟ್‌ನಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ವೇಗದ ಬೌಲಿಂಗ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಆಯ್ಕೆಗಳಿಲ್ಲ. ಸ್ಕಾಟ್ ಬೋಲ್ಯಾಂಡ್ ಭಾರತದಲ್ಲಿ ಮೊದಲ ಟೆಸ್ಟ್ ಆಡಲು ಅವಕಾಶ ಪಡೆಯಬಹುದು ಅಥವಾ ಲ್ಯಾನ್ಸ್ ಮೋರಿಸ್ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿರಬಹುದು. ಎಡಗಾಲಿನ ಗಾಯದ ಕಾರಣ ಜೋಶ್ ಹ್ಯಾಜಲ್‌ವುಡ್ ಆಲೂರಿನಲ್ಲಿ ತಂಡದ ಅಭ್ಯಾಸ ಅವಧಿಯಲ್ಲಿ ಹೆಚ್ಚು ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾಗ್ಪುರ ಟೆಸ್ಟ್‌ಗೆ ಮೊದಲು ಅವರು ಫಿಟ್ ಆಗುವುದು ಕಷ್ಟಕರವಾಗಿದೆ. ಈ ಕಾರಣದಿಂದ ಅವರನ್ನು ಮೊದಲ ಟೆಸ್ಟ್‌ನಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಹೇಜಲ್‌ವುಡ್ ಇಂಜುರಿ ಕುರಿತು ಮಾಹಿತಿ ನೀಡಿದ್ದು, ‘ಸಿಡ್ನಿ ಟೆಸ್ಟ್‌ನಿಂದ ಈ ಗಾಯವು ನನ್ನನ್ನು ಕಾಡುತ್ತಿದೆ. ಮಳೆ ಬಿದ್ದ ನಂತರ ಆ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಿದೆವು. ಅಂತಹ ಪರಿಸ್ಥಿತಿಯಲ್ಲಿ, ಮೈದಾನದಲ್ಲಿ ಓಡುವಾಗ ಹಿಮ್ಮಡಿಗೆ ಗಾಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನನ್ನ ದೇಹವು ಕ್ರಿಕೆಟ್ ಆಡಲು ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ನಾನು ಭಾವಿಸುತ್ತೇನೆ‘ ಎಂದು ಹೇಳಿಕೊಂಡಿದ್ದಾರೆ.
ಭಾರತ-ಆಸೀಸ್ ಸರಣಿ:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಫೆಬ್ರವರಿ 17 ರಿಂದ ದೆಹಲಿಯಲ್ಲಿ ನಡೆಯಲಿದೆ. ನಾಗ್ಪುರ ಮತ್ತು ದೆಹಲಿ ಟೆಸ್ಟ್ ನಡುವೆ 3 ದಿನಗಳ ವ್ಯತ್ಯಾಸವಿದೆ. ಹೀಗಿರುವಾಗ ಡೆಲ್ಲಿ ಟೆಸ್ಟ್‌ಗೂ ಮುನ್ನ ಫಿಟ್ ಆಗುವುದು ಹ್ಯಾಜಲ್‌ವುಡ್‌ಗೆ ಸವಾಲಾಗಿ ಪರಿಣಮಿಸಲಿದೆ. ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ, ಸ್ಕಾಟ್ ಬೋಲ್ಯಾಂಡ್ ಭಾರತದಲ್ಲಿ ಮೊದಲ ಟೆಸ್ಟ್ ಆಡುವ ಅವಕಾಶವನ್ನು ಪಡೆಯಬಹುದು. ಬೋಲ್ಯಾಂಡ್ ಇದುವರೆಗೆ ಎಲ್ಲಾ 6 ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಮಾತ್ರ ಆಡಿದ್ದಾರೆ. ಬೋಲ್ಯಾಂಡ್ ಮತ್ತು ಕಮ್ಮಿನ್ಸ್ ಅಭ್ಯಾಸದ ಅವಧಿಯಲ್ಲೂ ಹೊಸ ಚೆಂಡಿನೊಂದಿಗೆ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ. ಬೋಲ್ಯಾಂಡ್ 6 ಟೆಸ್ಟ್‌ಗಳಲ್ಲಿ 12.21 ಸರಾಸರಿಯಲ್ಲಿ ಒಟ್ಟು 28 ವಿಕೆಟ್‌ಗಳನ್ನು ಪಡೆದಿದ್ದಾರೆ.
ಭಾರತ - ಆಸ್ಟ್ರೇಲಿಯಾ ತಂಡ:
ಭಾರತ ತಂಡ (2 ಟೆಸ್ಟ್ಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಪೀಟರ್ ಹ್ಯಾಂಡ್ಸ್‌ಕಾಂಬ್ , ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್ , ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ , ಸ್ಟೀವ್ ಸ್ಮಿತ್, ಮಿಚೆಲ್ ಸ್ವೆಪ್ಸನ್, ಡೇವಿಡ್/ ಮಿಚೆಲ್ ಸ್ಟಾರ್ಕ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್ (ಈ ಮೂವರು ಕಣಕ್ಕಿಳಿಯುವುದು ಅನುಮಾನ).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ