IND vs AUS: ಭಾರತ-ಆಸ್ಟ್ರೇಲಿಯಾ ಸರಣಿ; ಸ್ಥಳ, ಸಮಯ, ಲೈವ್ ಸ್ಟ್ರೀಮಿಂಗ್ ಕುರಿತ ಸಂಪೂರ್ಣ ವಿವರ

IND vs AUS: ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸದಲ್ಲಿ ಒಟ್ಟು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. T20 ವಿಶ್ವಕಪ್ 2022 ರ ಮೊದಲು, ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾದೊಂದಿಗೆ T20 ಸರಣಿಯನ್ನು ಆಡಲಿದೆ.

IND vs AUS

IND vs AUS

  • Share this:
ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಮೂರು T20 ಪಂದ್ಯಗಳ ಸರಣಿ ಮಂಗಳವಾರದಿಂದ (ಸೆಪ್ಟೆಂಬರ್ 20) ಆರಂಭವಾಗಲಿದೆ. ಎರಡೂ ತಂಡಗಳು ಮೊಹಾಲಿ (Mohali)  ತಲುಪಿವೆ. ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ (T20 World Cup) ತಯಾರಿಯ ಭಾಗವಾಗಿ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಈ ತಿಂಗಳ 20 ಮತ್ತು 25 ರ ನಡುವೆ ಭಾರತ ಮತ್ತು ಆಸ್ಟ್ರೇಲಿಯಾ ಮೂರು T20I ಪಂದ್ಯಗಳನ್ನು ಆಡಲಿವೆ. ಏಷ್ಯಾಕಪ್ ನಲ್ಲಿ ಅನಿರೀಕ್ಷಿತವಾಗಿ ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ಭಾರತ ತಂಡಕ್ಕಿದೆ.

IND vs AUS ವೇಳಾಪಟ್ಟಿ: 

ಮೊದಲ T20- 20 ಸೆಪ್ಟೆಂಬರ್, ಮೊಹಾಲಿ
ಎರಡನೇ T20- 23 ಸೆಪ್ಟೆಂಬರ್, ನಾಗ್ಪುರ
ಮೂರನೇ T20- 25 ಸೆಪ್ಟೆಂಬರ್, ಹೈದರಾಬಾದ್

ಪಂದ್ಯದ ನೇರಪ್ರಸಾರ ಎಲ್ಲಿ?:

ಇನ್ನು, ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವು ಭಾರತದಲ್ಲಿಯೇ ನಡೆಲಿರುವ ಕಾರಣ ಅದರಲ್ಲಿಯೂ ಟಿ20 ಪಂದ್ಯಗಳಾಗಿರುವುದರಿಂದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ನಡೆಯುತ್ತದೆ. ಜೊತೆಗೆ 7:30 ಪಂದ್ಯ ಆರಂಭವಾಗುತ್ತದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ ನಮ್ಮ ವೆಬ್‌ಸೈಟ್ ಅನುಸರಿಸಿ.

ಇದನ್ನೂ ಓದಿ: T20 World Cup 2022: ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ವಿರಾಟ್​? ಹಾಗಿದ್ರೆ ಕೆಎಲ್ ರಾಹುಲ್ ಭವಿಷ್ಯವೇನು?

ಭಾರತ ಪ್ರವಾಸಕ್ಕೆ ಆಸೀಸ್​ ಸ್ಟಾರ್​ ಆಟಗಾರರ ಅಲಭ್ಯತೆ:

ಭಾರತ ವಿರುದ್ಧದ ಟಿ20 ಸರಣಿಗೆ ಡೇವಿಡ್ ವಾರ್ನರ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿಲ್ಲ. ಮುಂಬರುವ ಟಿ20 ವಿರ್ಶವಕಪ್​ 2022ಗಾಗಿ ಅವರಿಗೆ ವಿಶ್ರಾಂತಿ ನೀಡಿರುವುದಾಗಿ ತಿಳಿಸಿದೆ. ಅದರಂತೆ ಸ್ಟಾರ್ಕ್, ಮಾರ್ಷ್ ಮತ್ತು ಸ್ಟೊಯಿನ್ಸ್ ಕೊನೆಯ ಕ್ಷಣದಲ್ಲಿ ಗಾಯದಿಂದ ಹೊರಗುಳಿದರು. ಅವರ ಸ್ಥಾನದಲ್ಲಿ ಎಲ್ಲೀಸ್, ಡೇನಿಯಲ್ ಸ್ಯಾಮ್ಸ್ ಮತ್ತು ಸೀನ್ ಅಬಾಟ್ ಟಿ20 ಸರಣಿಗಾಗಿ ಆಯ್ಕೆ ಆಗಿದ್ದಾರೆ.

ಅದರಂತೆ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಕಾರಣದಿಂದ ಸ್ವಲ್ಪ ಸಮಯದಿಂದ ದೂರ ಉಳಿದಿದ್ದಾರೆ. ಬೆನ್ನು ನೋವಿನಿಂದ ಬುಮ್ರಾ, ಪಕ್ಕೆಲುಬಿನ ಗಾಯದಿಂದ ಹರ್ಷಲ್ ಪಟೇಲ್ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ನಂತರ ಟೀಮ್ ಇಂಡಿಯಾಗೆ ಮರಳಿದ್ದಾರೆ.

ಇದನ್ನೂ ಓದಿ: Rishabh Pant: ಊರ್ವಶಿ ಹೊದ್ಲು ಇಶಾ ಬಂದ್ಲು, ಮತ್ತೆ ಲವ್‌ನಲ್ಲಿ ಬಿದ್ದ ರಿಷಭ್ ಪಂತ್

IND vs AUS ತಂಡಗಳು:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ ತಂಡ:  ಆರನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ.
Published by:shrikrishna bhat
First published: