ರೋಹಿತ್ ಏಕಾಂಗಿ ಹೋರಾಟ ವ್ಯರ್ಥ: ಏಕದಿನ ಪಂದ್ಯದಲ್ಲಿ ಆಸೀಸ್ ಶುಭಾರಂಭ

ತಂಡವನ್ನು ಹೇಗಾದರು ಗೆಲುವಿನ ದಡ ಸೇರಿಸಬೇಕೆಂದು ಪಣತೊಟ್ಟಿದ್ದ ರೋಹಿತ್ ಶರ್ಮಾ ಭರ್ಜರಿ ಆಟ ಪ್ರದರ್ಶಿಸಿದರು. ಒಂದು ಕಡೆ ವಿಕೆಟ್ ಉರುಳಿದ್ದರೆ ಇತ್ತ ಏಕಾಂಗಿ ಹೋರಾಟ ನಡೆಸಿದ ರೋಹಿತ್ ಶತಕ ಸಿಡಿಸಿ ಮಿಂಚಿದರು.

Vinay Bhat | news18
Updated:January 12, 2019, 4:31 PM IST
ರೋಹಿತ್ ಏಕಾಂಗಿ ಹೋರಾಟ ವ್ಯರ್ಥ: ಏಕದಿನ ಪಂದ್ಯದಲ್ಲಿ ಆಸೀಸ್ ಶುಭಾರಂಭ
(Image: ICC)
Vinay Bhat | news18
Updated: January 12, 2019, 4:31 PM IST
ಸಿಡ್ನಿ:  ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ.

ರೋಹಿತ್ ಅವರ ಅಮೋಘ ಶತಕ ಹಾಗೂ ಧೋನಿ ಅರ್ಧಶತಕದ ಹೊರತಾಗಿಯು ಟೀಂ ಇಂಡಿಯಾ ಸೋಲುಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 34 ರನ್​ಗಳ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ನೀಡಿದ್ದ 289 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತ 4 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಹಾಗೂ ಅಂಬಟಿ ರಾಯುಡು ಸೊನ್ನೆ ಸುತ್ತಿದರೆ, ನಾಯಕ ವಿರಾಟ್ ಕೊಹ್ಲಿ 3 ರನ್​ಗೆ ಬ್ಯಾಟ್ ಕೆಳಗಿಟ್ಟು ಆಘಾತ ನೀಡಿದರು. ಈ ಮೂಲಕ ಭಾರತ ಆರಂಭದಲ್ಲೆ ಸೋಲಿನ ಸುಳಿಗೆ ಸಿಲುಕಿತು.

ಆದರೆ, ಟೀಂ ಇಂಡಿಯಾಕ್ಕೆ ಗೆಲುವಿನ ರುಚಿ ನೀಡಿದ್ದು ರೋಹಿತ್ ಶರ್ಮಾ ಹಾಗೂ ಎಂ ಎಸ್ ಧೋನಿ. ಎಚ್ಚರಿಕೆಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟರು. ಸುಮಾರು ಒಂದು ವರ್ಷದ ಬಳಿಕ ಧೋನಿ ಅರ್ಧಶತಕ ಗಳಿಸಿದರು. 4ನೇ ವಿಕೆಟ್​​ಗೆ ರೋಹಿತ್-ಧೋನಿ 137 ರನ್​ಗಳ ಕಾಣಿಕೆ ನೀಡಿದರು. ಧೋನಿ ಅರ್ಧಶತಕ ಬಾರಿಸಿ 51 ರನ್​ಗೆ ಎಲ್​ಬಿ ಬಲೆಗೆ ಸಿಲುಕಿದರು. ಈ ಮಧ್ಯೆ ಏಕದಿನ ಪಂದ್ಯಗಳಲ್ಲಿ 10,000 ರನ್ ಪೂರೈಸಿದ ಭಾರತದ ಐದನೇ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದರು.

LIVE BLOG: India vs Australia, Live Cricket Score: ಏಕದಿನ ಸರಣಿಯಲ್ಲಿ ಆಸೀಸ್ ಶುಭಾರಂಭ: 34 ರನ್​ಗಳ ಗೆಲುವು

ಇತ್ತ ತಂಡವನ್ನು ಹೇಗಾದರು ಮಾಡಿ ಗೆಲುವಿನ ದಡ ಸೇರಿಸಬೇಕೆಂದು ಪಣತೊಟ್ಟಿದ್ದ ರೋಹಿತ್ ಶರ್ಮಾ ಭರ್ಜರಿ ಆಟ ಪ್ರದರ್ಶಿಸಿದರು. ಒಂದು ಕಡೆ ವಿಕೆಟ್ ಉರುಳಿದ್ದರೆ ಇತ್ತ ಏಕಾಂಗಿ ಹೋರಾಟ ನಡೆಸಿದ ರೋಹಿತ್ ಶತಕ ಸಿಡಿಸಿ ಮಿಂಚಿದರು. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 22ನೇಸೆಂಚುರಿ ಬಾರಿಸಿದರು. ಸೆಂಚುರಿ ಬಳಿಕವೂ ರೋಹಿತ್ ಅಬ್ಬರಿಸಿದರಾದರು ಇವರಿಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾತ್ ನೀಡಲಿಲ್ಲ. ದಿನೇಶ್ ಕಾರ್ತಿಕ್ 12, ರವೀಂದ್ರ ಜಡೇಜಾ 8 ರನ್​ಗೆ ನಿರ್ಗಮಿಸಿದರು. ಅಂತಿಮವಾಗಿ ರೋಹಿತ್ ಶರ್ಮಾ ಕೂಡ 129 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸ್​ನೊಂದಿಗೆ 133 ರನ್ ಗಳಿಸಿ ಸುಸ್ತಾದರು.
Loading...

ಕೊನೆಯಲ್ಲಿ ಭುವನೇಶ್ವರ್ ಕುಮಾರ್(ಅಜೇಯ 29) ಬ್ಯಾಟ್ ಬೀಸಿದರಾದರು ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಭಾರತ 50 ಓವರ್​ಗೆ 9 ವಿಕೆಟ್ ಕಳೆದುಕೊಂದು 254 ರನ್​​ ಗಳಿಸಲಷ್ಟೆ ಶಕ್ತವಾಯಿತು. ಆಸೀಸ್ ಪರ ರಿಚರ್ಡಸನ್​ 4 ವಿಕೆಟ್ ಕಿತ್ತರೆ, ಬೆಹ್ರೆನ್​​​ಡ್ರಾಫ್​ ಹಾಗೂ ಸ್ಟಾಯಿನಿಸ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ನಾಯಕ ಆ್ಯರೋನ್​​ ಫಿಂಚ್ ಕೇವಲ 6 ರನ್​ಗೆ ಔಟ್ ಆದರು.ಇದರ ಬೆನ್ನಲ್ಲೆ ಮತ್ತೊಬ್ಬ ಓಪನರ್ ಅಲೆಕ್ಸ್ ಕ್ಯಾರಿ ಕೂಡ 24 ರನ್​ಗೆ ನಿರ್ಗಮಿಸಿದರು.

ಇದನ್ನೂ ಓದಿ: 'ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ' ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ

ಬಳಿಕ ಜೊತೆಯಾದ ಉಸ್ಮಾನ್ ಖ್ವಾಜಾ ಹಾಗೂ ಶಾನ್ ಮಾರ್ಶ್​ ಭರ್ಜರಿ ಆಟ ಪ್ರದರ್ಶಿಸಿದರು. 92 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟರು. ಅಂತೆಯೆ ಖ್ವಾಜಾ ಆಕರ್ಷಕ ಅರ್ಧಶತಕ ಸಿಡಿಸಿ 59 ರನ್​ಗೆ ಜಡೇಜಾಗೆ ವಿಕೆಟ್ ಒಪ್ಪಿಸಿದರು.

4ನೇ ವಿಕೆಟ್​ಗೆ ಮಾರ್ಶ್​​ ಜೊಯತೆಯಾದ ಪೀಟರ್ ಹ್ಯಾಂಡ್ಸ್​ಕಾಂಬ್​​ ಕೂಡ ಉತ್ತಮ ಆಟ ಪ್ರದರ್ಶಿಸಿದರು. ಅರ್ಧಶತಕದ ಜೊತೆಯಾಟದೊಂದಿಗೆ ಮಾರ್ಶ್​​ 54 ರನ್​ಗೆ ನಿರ್ಗಮಿಸಿದರು. ಮಾರ್ಶ್​​ ನಿರ್ಗಮನದ ಬಳಿಕ ಮಾರ್ಕಸ್ ಸ್ಟೊಯಿನಿಸ್ ಜೊತೆಯಾದ ಹ್ಯಾಂಡ್ಸ್​​ಕಾಂಬ್​​ ಬಿರುಸಿನ ಆಟಕ್ಕೆ ಮುಂದಾದರು. ಟೀಂ ಇಂಡಿಯಾ ಬೌಲರ್​ಗಳನ್ನು ಕಾಡಿದ ಈ ಜೋಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಆರ್ಭಟಿಸಿದ ಹ್ಯಾಂಡ್ಸ್​​ಕಾಂಬ್​​ 61 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 73 ರನ್​ ಗಳಿಸಿ ಕೊನೆ ಕ್ಷಣದಲ್ಲಿ ನಿರ್ಗಮಿಸಿದರೆ, ಸ್ಟೊಯಿನಿ ಬ್ಯಾಟ್ ಬೀಸಿ ಅಜೇಯ 47 ರನ್ ಸಿಡಿಸಿ ಭಾರತಕ್ಕೆ 289 ರನ್ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ ಪರ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ ಜಡೇಜಾ 1 ವಿಕೆಟ್ ಪಡೆದರು.

34 ರನ್​ಗಳ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. 4 ವಿಕೆಟ್ ಕಿತ್ತ ರಿಚರ್ಡಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಮುಂದಿನ ಎರಡನೇ ಏಕದಿನ ಪಂದ್ಯ ಜನವರಿ 15 ರಂದು ಓವೆಲ್​ನ ಅಡಿಲೇಡ್ ಮೈದಾನದಲ್ಲಿ ನಡೆಯಲಿದೆ.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...