ತವರಿನಲ್ಲಿ ಆಸೀಸ್ ವಿರುದ್ಧ ಸರಣಿ: ಭಾರತ ತಂಡ ಪ್ರಕಟ; ಕಾರ್ತಿಕ್ ಔಟ್-ರಾಹುಲ್​​ಗೆ ಅವಕಾಶ

ನ್ಯೂಜಿಲೆಂಡ್ ಸರಣಿಯಿಂದ ಹೊರಗುಳಿದಿದ್ದ ಕೆ ಎಲ್ ರಾಹುಲ್​​​ಗೆ ಅವಕಾಶ ನೀಡಲಾಗಿದೆ. ಟಿ-20 ಹಾಗೂ ಏಕದಿನ ಸರಣಿಗೆ ಕನ್ನಡಿಗ ರಾಹುಲ್​​ ಆಯ್ಕೆಯಾಗಿದ್ದಾರೆ.

Vinay Bhat | news18
Updated:February 15, 2019, 5:33 PM IST
ತವರಿನಲ್ಲಿ ಆಸೀಸ್ ವಿರುದ್ಧ ಸರಣಿ: ಭಾರತ ತಂಡ ಪ್ರಕಟ; ಕಾರ್ತಿಕ್ ಔಟ್-ರಾಹುಲ್​​ಗೆ ಅವಕಾಶ
ಟೀಂ ಇಂಡಿಯಾ
  • News18
  • Last Updated: February 15, 2019, 5:33 PM IST
  • Share this:
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಬಿಸಿಸಿಐ ಆಟಗಾರರ ಹೆಸರನ್ನು ಪ್ರಕಟಮಾಡಿದೆ.

ವಿರಾಟ್ ಕೊಹ್ಲಿ ಟಿ-20 ಹಾಗೂ ಏಕದಿನ ಸರಣಿಯಲ್ಲಿ ನಾಯಕನ ಜವಾಬ್ದಾರಿಗೆ ಮತ್ತೆ ಮರಳಿದ್ದು ರೋಹಿತ್ ಶರ್ಮಾ ಉಪ ನಾಯಕ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಸರಣಿಯಿಂದ ಹೊರಗುಳಿದಿದ್ದ ಕೆ ಎಲ್ ರಾಹುಲ್​​​ಗೆ ಅವಕಾಶ ನೀಡಲಾಗಿದೆ. ಟಿ-20 ಹಾಗೂ ಏಕದಿನ ಸರಣಿಗೆ ಕನ್ನಡಿಗ ರಾಹುಲ್​​ ಆಯ್ಕೆಯಾಗಿದ್ದು, ಜೊತೆಗೆ ಮಯಾಂಕ್ ಮಾರ್ಕಂಡೆ ಅವರಿಗೆ ಟಿ-20 ಸರಣಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಟಿ-20 ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಕೆ ಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ವಿಜಯ್ ಶಂಕರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ್​ ಕೌಲ್, ಮಯಾಂಕ್ ಮಾರ್ಕಂಡೆ.

ಮೊದಲ ಎರಡು ಏಕದಿನ ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದರ್ ಜಾಧವ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್,  ವಿಜಯ್ ಶಂಕರ್, ಸಿದ್ಧಾರ್ಥ್​​​ ಕೌಲ್, ರಿಷಭ್ ಪಂತ್, ಕೆ ಎಲ್ ರಾಹುಲ್.

ಅಂತಿಮ ಮೂರು ಏಕದಿನ ಪಂದ್ಯಕ್ಕೆ ಭಾರತ ತಂಡ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದರ್ ಜಾಧವ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ವಿಜಯ್ ಶಂಕರ್, ರಿಷಭ್ ಪಂತ್, ಕೆ ಎಲ್ ರಾಹುಲ್.

First published:February 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading