ಆಸೀಸ್ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಆಘಾತ; ಸ್ಟಾರ್ ಆಟಗಾರ ತಂಡದಿಂದಲೇ ಔಟ್

ಬೆನ್ನು ನೋವಿಗೆ ತುತ್ತಾಗಿರುವ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಬೇಕೆಂದು ಟೀಂ ಇಂಡಿಯಾ ವೈದ್ಯಕೀಯ ತಂಡ ತಿಳಿಸಿದೆ. ಹೀಗಾಗಿ ಪಾಂಡ್ಯ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

Vinay Bhat | news18
Updated:February 21, 2019, 3:52 PM IST
ಆಸೀಸ್ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಆಘಾತ; ಸ್ಟಾರ್ ಆಟಗಾರ ತಂಡದಿಂದಲೇ ಔಟ್
ಟೀಂ ಇಂಡಿಯಾ ಆಟಗಾರರು
Vinay Bhat | news18
Updated: February 21, 2019, 3:52 PM IST
ಹೊಸದಿಲ್ಲಿ: ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಬೆನ್ನು ನೋವಿಗೆ ತುತ್ತಾಗಿರುವ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಬೇಕೆಂದು ಟೀಂ ಇಂಡಿಯಾ ವೈದ್ಯಕೀಯ ತಂಡ ತಿಳಿಸಿದೆ. ಹೀಗಾಗಿ ಪಾಂಡ್ಯ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಪಾಂಡ್ಯ ಬದಲು ಮತ್ತೊಬ್ಬ ಆಲ್ರೌಂಡರ್​​​​ ಆಟಗಾರ ರವೀಂದ್ರ ಜಡೇಜಾಗೆ ಸ್ಥಾನ ನೀಡಲಾಗಿದೆ.

ರವೀಂದ್ರ ಜಡೇಜಾಗೆ ವಿಶ್ವಕಪ್ ತಂಡ ಸೇರಲು ಇದೊಂದು ಉತ್ತಮ ಅವಕಾಶವಾಗಿದ್ದು, ತಮ್ಮ ನೈಜ್ಯ ಪ್ರದರ್ಶನ ತೋರಬೇಕಿದೆ. ಇತ್ತ ಪಾಂಡ್ಯ ಪದೆ ಪದೆ ಇಂಜುರಿಗೆ ತುತ್ತಾಗುತ್ತಿರುಯವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತ-ಆಸ್ಟ್ರೇಲಿಯಾ ಟಿ-20 ಪಂದ್ಯ; ಟಿಕೆಟ್ ಬೇಕಾದರೆ ಹೀಗೆ ಮಾಡಿ

ಟಿ-20 ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಕೆ ಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕ್ರುನಾಲ್ ಪಾಂಡ್ಯ, ವಿಜಯ್ ಶಂಕರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ್​ ಕೌಲ್, ಮಯಾಂಕ್ ಮಾರ್ಕಂಡೆ.
Loading...

ಮೊದಲ ಎರಡು ಏಕದಿನ ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದರ್ ಜಾಧವ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್,  ವಿಜಯ್ ಶಂಕರ್, ಸಿದ್ಧಾರ್ಥ್​​​ ಕೌಲ್, ರಿಷಭ್ ಪಂತ್, ಕೆ ಎಲ್ ರಾಹುಲ್.

ಅಂತಿಮ ಮೂರು ಏಕದಿನ ಪಂದ್ಯಕ್ಕೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದರ್ ಜಾಧವ್, ಎಂ ಎಸ್ ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ವಿಜಯ್ ಶಂಕರ್, ರಿಷಭ್ ಪಂತ್, ಕೆ ಎಲ್ ರಾಹುಲ್.

 

First published:February 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626