ಆಸೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಿಂದ ಹಾರ್ದಿಕ್-ರಾಹುಲ್ ಔಟ್

ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಟೀಂ ಇಂಡಿಯಾ ವ್ಯವಸ್ಥಾಪಕ ಮಂಡಳಿಯು ಪಾಂಡ್ಯರನ್ನು ತಂಡದಲ್ಲಿ ಸೇರಿಸಿಕೊಳ್ಳದಂತೆ ನಿರ್ಧಾರಮಾಡಿದೆ. ಜೊತೆಗೆ ಕೆ ಎಲ್ ರಾಹುಲ್​​ ಕೂಡ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವಂತಿಲ್ಲ ಎಂದು ತಿಳಿಸಿದೆ.

Vinay Bhat | news18
Updated:January 11, 2019, 5:07 PM IST
ಆಸೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಿಂದ ಹಾರ್ದಿಕ್-ರಾಹುಲ್ ಔಟ್
ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್
Vinay Bhat | news18
Updated: January 11, 2019, 5:07 PM IST
ಸಿಡ್ನಿ: ಖಾಸಗಿ ಚಾನೆಲ್​​ವೊಂದರಲ್ಲಿ ಪ್ರಸಾರವಾಗುವ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಮನಬಂದಂತೆ ಉತ್ತರಿಸಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಅವರನ್ನು ಮೊದಲ ಏಕದಿನ ಪಂದ್ಯದಿಂದ ಹೊರಗಿಡಲಾಗಿದೆ.

ಸಿಡ್ನಿಯಲ್ಲಿ ಟೀಂ ಇಂಡಿಯಾ ನಾಳೆಯಿಂದ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯವನ್ನು ಆಡಲಿದೆ. ಅಂತೆಯೆ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ನಿರ್ಧಾರದ ಬಳಿಕವಷ್ಟೆ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಪಾಂಡ್ಯ-ರಾಹುಲ್ ಲಭ್ಯವೊ ಇಲ್ಲವೊ ಎಂಬುದನ್ನು ನಿರ್ಧರಿಸಬೇಕಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಪಾಂಡ್ಯ-ರಾಹುಲ್ ಹೇಳಿಕೆಗೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ: ವಿರಾಟ್ ಕೊಹ್ಲಿ

ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಟೀಂ ಇಂಡಿಯಾ ವ್ಯವಸ್ಥಾಪಕ ಮಂಡಳಿಯು ಪಾಂಡ್ಯರನ್ನು ತಂಡದಲ್ಲಿ ಸೇರಿಸಿಕೊಳ್ಳದಂತೆ ನಿರ್ಧಾರಮಾಡಿದೆ. ಜೊತೆಗೆ ಕೆ ಎಲ್ ರಾಹುಲ್​​ ಕೂಡ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವಂತಿಲ್ಲ ಎಂದು ತಿಳಿಸಿದೆ.

ತನಿಖೆ ಸಂಬಂಧ ಮುಂದಿನ ಆದೇಶ ಬರುವವರೆಗೆ ತಂಡದಲ್ಲಿ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್​​ ನೇಮಿತ ಆಡಳಿತಗಾರರ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 'ಪಂತ್​ರನ್ನು ಹೊಗಳಿ ಈಗಲೇ ಅಟ್ಟಕ್ಕೆ ಏರಿಸಬೇಡಿ' ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
Loading...

ಪಾಂಡ್ಯ-ರಾಹುಲ್ ಪ್ರಕರಣದ ಬಗ್ಗೆ ಮಾತನಾಡಿದ ಕೊಹ್ಲಿ, 'ಪಾಂಡ್ಯ-ರಾಹುಲ್ ನೀಡಿರುವ ಉತ್ತರಕ್ಕೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರಿಬ್ಬರ ವೈಯಕ್ತಿಕ ಹೇಳಿಕೆ. ಇದರಿಂದ ನಮ್ಮ ಕ್ರಿಕೆಟ್ ತಂಡದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ. ಬಿಸಿಸಿಐ ನಿರ್ಧಾರದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಪಾಂಡ್ಯ-ರಾಹುಲ್ ಕಣಕ್ಕಿಳಿಯಲಿದ್ದಾರೆಯೆ ಎಂಬುದನ್ನು ನಿರ್ಧರಿಸಬೇಕಿದೆ. ಟೀಂ ಇಂಡಿಯಾ ದೃಷ್ಟಿಕೋನದ ಪ್ರಕಾರ ಈ ವಿಚಾರದಿಂದ ನಮ್ಮ ಡ್ರೆಸ್ಸಿಂಗ್ ಕೊಠಡಿಗೆ ಯಾವುದೇ ಕುಂದು ಸಂಭವಿಸಿಲ್ಲ' ಎಂದಿದ್ದಾರೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...