ಆಸೀಸ್ ಸರಣಿಯಲ್ಲಿ ಜಯ ಸಾಧಿಸಿ, ಗೆಲುವನ್ನು ಹುತಾತ್ಮ ಸೈನಿಕರಿಗೆ ಅರ್ಪಿಸುತ್ತೇವೆ; ಶಮಿ

ಆಸೀಸ್ ವಿರುದ್ಧ ಸರಣಿ ಗೆಲ್ಲಲು ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತೇವೆ ಮತ್ತು ಆ ಗೆಲುವನ್ನು ಸೈನಿಕರಿಗೆ ಅರ್ಪಿಸುತ್ತೇವೆ. ಪುಲ್ವಾಮ ಘಟನೆ ನಮ್ಮನ್ನು ತುಂಬಾನೆ ಕಾಡುತ್ತಿದೆ. ಸೈನಿಕರ ಕಾರ್ಯಕ್ಕೆ ಸಲಾಂ ಹೇಳಲೇಬೇಕು- ಮೊಹಮ್ಮದ್ ಶಮಿ

Vinay Bhat | news18
Updated:February 19, 2019, 7:51 PM IST
ಆಸೀಸ್ ಸರಣಿಯಲ್ಲಿ ಜಯ ಸಾಧಿಸಿ, ಗೆಲುವನ್ನು ಹುತಾತ್ಮ ಸೈನಿಕರಿಗೆ ಅರ್ಪಿಸುತ್ತೇವೆ; ಶಮಿ
ಮೊಹಮ್ಮದ್ ಶಮಿ
  • News18
  • Last Updated: February 19, 2019, 7:51 PM IST
  • Share this:
ತವರಿನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗಿದೆ. ಫೆ. 24 ರಿಂದ ಮೊದಲ ಟಿ-20 ಪಂದ್ಯ ಆರಂಭವಾಗಲಿದೆ. ಹೀಗಿರುವಾಗ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರು, 'ನಾವು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಜಯ ಸಾಧಿಸಿ, ಈ ಗೆಲುವನ್ನು ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸೈನಿಕರಿಗೆ ಅರ್ಪಿಸುತ್ತೇವೆ' ಎಂದು ಹೇಳಿದ್ದಾರೆ.

'ಆಸೀಸ್ ವಿರುದ್ಧ ಸರಣಿ ಗೆಲ್ಲಲು ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತೇವೆ ಮತ್ತು ಆ ಗೆಲುವನ್ನು ಸೈನಿಕರಿಗೆ ಅರ್ಪಿಸುತ್ತೇವೆ. ಪುಲ್ವಾಮ ಘಟನೆ ನಮ್ಮನ್ನು ತುಂಬಾನೆ ಕಾಡುತ್ತಿದೆ. ಸೈನಿಕರ ಕಾರ್ಯಕ್ಕೆ ಸಲಾಂ ಹೇಳಲೇಬೇಕು'.

'ಅವರು ಘಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿದ್ದಾರೆ. ಹೀಗಾಗಿ ನಾವು ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ಇದು ನಾವು ಮಾಡುವ ಚಿಕ್ಕ ಸಹಾಯ. ಅವರ ಜೊತೆ ನಾವು ಎಂದಿಗೂ ಜೊತೆಯಲ್ಲೇ ಇರುತ್ತೇವೆ' ಎಂದು ಶಮಿ ಹೇಳಿದ್ದಾರೆ.

ಇದನ್ನೂ ಓದಿ: IPL 2019: ಕೊಹ್ಲಿ vs ಧೋನಿ; ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿಗೆ ಕಠಿಣ ಸವಾಲು

'ಸೈನಿಕರು ನಮ್ಮನ್ನು ಕಾಪಾಡುತ್ತಿರುವುದಕ್ಕೆ, ಅವರಿಗೆ ಮರಳಿ ಸಹಾಯ ಮಾಡುವುದು ನಮ್ಮ ಕರ್ತವ್ಯ. ನಾವು ಭಾರತೀಯರು ಸುರಕ್ಷಿತವಾಗದ್ದೇವೆ ಎಂದರೆ ಅದಕ್ಕೆ ಕಾರಣ ಘಡಿಯಲ್ಲಿ ಸೈನಿಕರು 24*7 ಕಾರ್ಯನಿರ್ವಹಿಸುತ್ತಿರುವುದು' ಎಂದು ಶಮಿ ಹೇಳಿದ್ದಾರೆ.

ಇದಕ್ಕೂ ಮುನ್ನ ಶಮಿ ಅವರು ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸಿಆರ್​​ಪಿಎಫ್​​ ಯೋಧರ ಕುಟುಂಬಕ್ಕೆ 5 ಲಕ್ಷ ಧನ ಸಹಾಯ ಮಾಡಿದ್ದರು. ಅಲ್ಲದೆ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್, ಶಿಖರ್ ಧವನ್ ಕೂಡ ಹಣಕಾಸಿನ ನೆರವು ನೀಡಿದ್ದರು.

ಇದನ್ನೂ ಓದಿ: ಯುವರಾಜ್​​ ಬ್ಯಾಟ್​ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್​​​ಗೂ ಮುನ್ನ ಅಬ್ಬರಿಸಿದ ಯುವಿಫೆ. 14ರಂದು ನಡೆದ ಪುಲ್ವಾಮ ಉಗ್ರ ದಾಳಿಯ ಹೊಣೆಯನ್ನು ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯು ಹೊತ್ತುಕೊಂಡಿದೆ. 40-42 ಸಿಆರ್​ಪಿಎಫ್ ಯೋಧರು ಈ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. ಅದಾದ ನಂತರ ಸರಕಾರದಿಂದ ಮುಕ್ತ ಕಾರ್ಯಾಚರಣೆಯ ಸ್ವಾತಂತ್ರ್ಯ ಪಡೆದ ಭಾರತೀಯ ಸೈನಿಕರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಜೈಷ್ ಉಗ್ರರ ಸಂಹಾರ ಮಾಡಿದರು. 16 ಗಂಟೆಗಳ ಸುದೀರ್ಘ ಕಾಲ ನಡೆದ ಎನ್​ಕೌಂಟರ್​ನಲ್ಲಿ ಕೆಲ ಭಾರತೀಯ ಯೋಧರೂ ಬಲಿಯಾದರು.

First published: February 19, 2019, 7:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading