ಆಸೀಸ್ ಸರಣಿಗೆ ಕೊಹ್ಲಿ ಬಳಗ: ವಿಶ್ವಕಪ್​​ಗೂ ಮುನ್ನ ಬಿಸಿಸಿಐಯಿಂದ ಕೊನೆಯ ಪ್ರಯೋಗ

ಈಗಾಗಲೇ ಕೇಳಿಬಂದಿರುವಂತೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವುದು ಪಕ್ಕಾ ಆಗಿದ್ದು, ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್ ಬುಮ್ರಾ ತಂಡ ಸೇರಿಕೊಳ್ಳಲಿದ್ದಾರೆ. ರೋಹಿತ್ ಬದಲು ಬ್ಯಾಕ್​​ಅಪ್​ ಓಪನರ್​​ ಸ್ಥಾನವನ್ನು ಬಿಸಿಸಿಐ ಕೆ ಎಲ್ ರಾಹುಲ್​​ಗೆ ನೀಡುವ ಅಂದಾಜಿದೆ.

Vinay Bhat | news18
Updated:February 14, 2019, 4:20 PM IST
ಆಸೀಸ್ ಸರಣಿಗೆ ಕೊಹ್ಲಿ ಬಳಗ: ವಿಶ್ವಕಪ್​​ಗೂ ಮುನ್ನ ಬಿಸಿಸಿಐಯಿಂದ ಕೊನೆಯ ಪ್ರಯೋಗ
ವಿರಾಟ್ ಕೊಹ್ಲಿ
Vinay Bhat | news18
Updated: February 14, 2019, 4:20 PM IST
ವಿದೇಶದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಮುಗಿಸಿರುವ ಭಾರತ ತವರಿಗೆ ಮರಳಿದೆ. ಸದ್ಯ ಇಲ್ಲೇ ಆಸ್ಟ್ರೇಲಿಯಾ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದಕ್ಕಾಗೆ ನಾಳೆ ಬಿಸಿಸಿಐ 15 ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸುತ್ತಿದೆ. ಹೀಗಾಗಿ ವಿಶ್ವಕಪ್​​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕೆಲ ಆಟಗಾರರಿಗೆ ಇದು ಕೊನೆಯ ಅವಕಾಶವಾದರೆ, ಇತ್ತ ಬಿಸಿಸಿಐ ಕೂಡ ಕೆಲ ಆಟಗಾರರನ್ನು ಪ್ರಯೋಗಕ್ಕೆ ಒಳಪಡಿಸಲು ಮುಂದಾಗಿದೆ.

ಈಗಾಗಲೇ ಕೇಳಿಬಂದಿರುವಂತೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವುದು ಪಕ್ಕಾ ಆಗಿದ್ದು, ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್ ಬುಮ್ರಾ ತಂಡ ಸೇರಿಕೊಳ್ಳಲಿದ್ದಾರೆ. ರೋಹಿತ್ ಬದಲು ಬ್ಯಾಕ್​​ಅಪ್​ ಓಪನರ್​​ ಸ್ಥಾನವನ್ನು ಬಿಸಿಸಿಐ ಕೆ ಎಲ್ ರಾಹುಲ್​​ಗೆ ನೀಡುವ ಅಂದಾಜಿದೆ. ಹೀಗಾಗಿ ಧವನ್ ಜೊತೆ ರಾಹುಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಅಲ್ಲದೆ ರಾಹುಲ್ ಭಾರತ ಎ ತಂಡದ ಪರ ಸದ್ಯ ಆಡುತ್ತಿದ್ದು ಫಾರ್ಮ್​​ಗೆ ಮರಳಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ.

ಇನ್ನು ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್​ಗೆ ಈ ಸರಣಿ ಮುಖ್ಯವಾಗಿದೆ. ಆದರೆ, ಇಬ್ಬರಲ್ಲಿ ಯಾರಿಗೆ ಸ್ಥಾನ ಎಂಬುದೆ ಕುತೂಹಲ. ಕಾರ್ತಿಕ್ ಉತ್ತಮ ಆಟವಾಡುತ್ತಿದ್ದರೆ, ಇತ್ತ ಪಂತ್ ಕೂಡ ಕಳೆದ ಟಿ-20 ಪಂದ್ಯಗಳಲ್ಲಿ ಅಜೇಯ 40 ಹಾಗೂ 28 ರನ್ ಸಿಡಿಸಿದ್ದರು.

ಇದನ್ನೂ ಓದಿ: ಮೌನ ಮುರಿದ ಕಾರ್ತಿಕ್; ಸಿಂಗಲ್ ರನ್ ನಿರಾಕರಿಸಿದ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ

ಇನ್ನು ಬೌಲಿಂಗ್​ನಲ್ಲಿ ಭಾರತ ಪರ ಬದಲಾವಣೆ ಅಗತ್ಯವಿದ್ದು, ಮೊಹಮ್ಮದ್ ಖಲೀಲ್​​ ಬದಲು ಜೈದೇವ್ ಉನಾದ್ಕಟ್​​​ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಉನಾದ್ಕಟ್​​ ರಣಜಿ ಪಂದ್ಯದಲ್ಲಿ 39 ವಿಕೆಟ್ ಕಬಳಿಸಿ ಆಯ್ಕೆದಾರರ ಮನ ತಟ್ಟಿದ್ದಾರೆ.

ಅಂತೆಯೆ ಉಮೇಶ್ ಯಾದವ್ ಕೂಡ ರಣಜಿ ಪಂದ್ಯದಲ್ಲಿ 21 ವಿಕೆಟ್ ಕಿತ್ತು ತಂಡದಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಖಲೀಲ್ ಬದಲು ಉನಾದ್ಕಟ್ ಹಾಗೂ ಮೊಹಮ್ಮದ್ ಸಿರಾಜ್ ಬದಲು ಉಮೇಶ್ ಯಾದವ್​​ ಆಯ್ಕೆಯಾಗುವ ಅಂದಾಜಿದೆ.

ಇದನ್ನೂ ಓದಿ: ನಮ್ಮ ತಂಡ ಬಲಿಷ್ಠವಾಗಿದೆ, ವಿಶ್ವಕಪ್​​ನಲ್ಲಿ ಭಾರತವನ್ನು ಸೋಲಿಸುವುದೆ ಗುರಿ: ಪಾಕ್​​ ಮಾಜಿ ನಾಯಕ
Loading...

ಒಟ್ಟಾರೆ ವಿಶ್ವಕಪ್​​ಗೆ ಟೀಂ ಇಂಡಿಯಾ ಹೇಗಿರಬೇಕೆಂಬ ಪ್ರಯೋಗಗಳು ಈಗಾಗಲೇ ಬಿಸಿಸಿಐ ನಡೆಸುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ಸರಣಿ ಮತ್ತೊಂದು ಅವಕಾಶವಾಗಿ ಸಿಕ್ಕಿದ್ದು, ಯಾವ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದುದು ಸದ್ಯದಲ್ಲೆ ತಿಳಿಯಲಿದೆ. ಅದಕ್ಕೂ ಮುನ್ನ ನಾಳಿನ ಆಯ್ಕೆ ಪ್ರಕ್ರಿಯೆ ಮತ್ತಷ್ಟು ಕುತೂಹಲ ಕೆರಳಿಸಿದೆ.

First published:February 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...