India vs Australia: ಕೊಹ್ಲಿ ಶತಕದ ಮಿಂಚು, ಧೋನಿ ಅರ್ಧಶತಕ: ಸರಣಿ ಗೆಲ್ಲುವ ಟೀಂ ಇಂಡಿಯಾ ಆಸೆ ಜೀವಂತ

ಕೊಹ್ಲಿ ಹಾಗೂ ಎಂ ಎಸ್ ಧೋನಿ ತಂಡವನ್ನು ಹೇಗಾದರು ಗೆಲುವಿನ ದಡ ಸೇರಿಸಬೇಕೆಂದು ಟೊಂಕಕಟ್ಟಿ ನಿಂತರು. ಅದ್ಭುತ ಹೊಡೆತಗಳಿಂದ ಕೊಹ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಸೆಂಚುರಿಸಿ ಸಿಡಿಸಿ ಮಿಂಚಿದರು.

Vinay Bhat | news18
Updated:January 15, 2019, 5:28 PM IST
India vs Australia: ಕೊಹ್ಲಿ ಶತಕದ ಮಿಂಚು, ಧೋನಿ ಅರ್ಧಶತಕ: ಸರಣಿ ಗೆಲ್ಲುವ ಟೀಂ ಇಂಡಿಯಾ ಆಸೆ ಜೀವಂತ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: January 15, 2019, 5:28 PM IST
ಅಡಿಲೇಡ್ (ಜ. 15):  ಇಲ್ಲಿನ  ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ಧೋನಿಯ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಏಕದಿನ ಸರಣಿ ವಶಪಡಿಸಿಕೊಳ್ಳುವ ಕೊಹ್ಲಿ ಪಡೆಯ ಆಸೆ ಜೀವಂತವಾಗಿದೆ.

ಆಸ್ಟ್ರೇಲಿಯಾ ನೀಡಿದ್ದ 299 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತಕ್ಕೆ ಧವನ್ 32 ರನ್ ಗಳಿಸಿ ಮೊದಲ ವಿಕೆಟ್​ಗೆ 47 ರನ್​ಗಳ ಕಾಣಿಕೆ ನೀಡಿದರು. 2ನೇ ವಿಕೆಟ್​ಗೆ ಜೊತೆಯಾದ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಸಮಯೋಚಿತ ಆಟ ಪ್ರದರ್ಶಿಸಿದರು. ಅರ್ಧಶತಕದ ಜೊತೆಯಾಟವಾಡಿದ ಇವರಿಬ್ಬರು, ರೋಹಿತ್ 43 ರನ್​​ಗಳಿಸಿರುವಾಗ ಕೆಟ್ಟ ಹೊಡೆತ ಹೊಡೆದು ಔಟ್ ಆದರು.

ಬಳಿಕ ಬಂದ ಅಂಬಟಿ ರಾಯುಡು ಹೆಚ್ಚು ಕ್ರೀಸ್​ನಲ್ಲಿ ನಿಲ್ಲದೆ 24 ರನ್​ ನಿರ್ಗಮಿಸಿದರು. ಈ ಸಂದರ್ಭ ಕೊಹ್ಲಿ ಹಾಗೂ ಎಂ ಎಸ್ ಧೋನಿ ತಂಡವನ್ನು ಹೇಗಾದರು ಗೆಲುವಿನ ದಡ ಸೇರಿಸಬೇಕೆಂದು ಟೊಂಕಕಟ್ಟಿ ನಿಂತರು. ಅದ್ಭುತ ಹೊಡೆತಗಳಿಂದ ಕೊಹ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಅಂತೆಯೆ ಏಕದಿನ ಕ್ರಿಕೆಟ್​ನಲ್ಲಿ 39ನೇ ಶತಕ ಸಿಡಿಸಿದ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧವೇ 5ನೇ ಸೆಂಚುರಿ ಬಾರಿಸಿದರು.

LIVE BLOG: India vs Australia, Live Cricket Score: ಭಾರತಕ್ಕೆ ಭರ್ಜರಿ ಜಯ: ಸರಣಿ ಗೆಲುವಿನ ಆಸೆ ಜೀವಂತ

112 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 104 ರನ್ ಬಾರಿಸಿದ ಕೊಹ್ಲಿ ಶತಕದ ಬೆನ್ನಲ್ಲೆ ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು. ಆದರೆ, ಧೋನಿ ಹಾಗೂ ಕಾರ್ತಿಕ್ ಭರ್ಜರಿ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Loading...

ಕೊನೆಯ ಓವರ್​ನಲ್ಲಿ ಗೆಲ್ಲಲು 7 ರನ್​ಗಳ ಅವಶ್ಯಕತೆಯಿದ್ದಾಗ ಧೋನಿ ತಮ್ಮ ಎಂದಿನ ಶೈಲಿಯಲ್ಲಿ ಸಿಕ್ಸ್​ ಸಿಡಿಸಿದರೆ, 2ನೇ ಎಸೆತದಲ್ಲಿ ಸಿಂಗಲ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಧೋನಿ 55 ಹಾಗೂ ಕಾರ್ತಿಕ್ 25 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಭಾರತ ಇನ್ನೂ 4 ಎಸೆತ ಬಾಕಿ ಇರುವಂತೆಯೆ 49.2 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 299 ರನ್ ಬಾರಿಸಿತು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು ಶಾನ್ ಮಾರ್ಶ್​​ ಅವರ 131 ಹಾಗೂ ಮ್ಯಾಕ್ಸ್​​ವೆಲ್​ರ 48 ರನ್​ಗಳ ನೆರವಿನಿಂದ ನಿಗದಿತ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 298 ರನ್​ ಬಾರಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಆರಂಭದಲ್ಲೇ ಆ್ಯರೋನ್ ಫಿಂಚ್(6) ಹಾಗೂ ಅಲೆಕ್ಸ್ ಕ್ಯಾರಿ(18) ವಿಕೆಟ್ ಕಳೆದುಕೊಂಡಿತಾದರು, ಶಾನ್ ಮಾರ್ಶ್​​ ಹಾಗೂ ಉಸ್ಮಾನ್ ಖ್ವಾಜಾ​ ಆಸರೆಯಾದರು. 3ನೇ ವಿಕೆಟ್​ಗೆ 56 ರನ್​ಗಳ ಜೊತೆಯಾಟವಾಡಿದ ಈ ಜೋಡಿ 21 ರನ್ ಗಳಿಸಿರುವಾಗ ಖ್ವಾಜಾ​​ ಔಟ್ ಆದರು.

ನಂತರ ಬಂದ ಬ್ಯಾಟ್ಸ್​ಮನ್​ಗಳಾದ ಪೀಟರ್ ಹ್ಯಾಂಡ್ಸ್​ಕಅಂಬ್(20) ಹಾಗೂ ಮಾರ್ಕಸ್ ಸ್ಟಾಯಿನಿಸ್(29) ಮಾರ್ಶ್ ಜೊತೆ​​ ಮತ್ತೊಂದು ಉತ್ತಮ ಇನ್ನಿಂಗ್ಸ್​ ಕಟ್ಟಿ ನಿರ್ಗಮಿಸಿದರು.

ಬಳಿಕ ಟೀಂ ಇಂಡಿಯಾ ಬೌಲರ್​ಗಳನ್ನು ಕಾಡಿದ ಮಾರ್ಶ್​​ ಹಾಗೂ ಮ್ಯಾಕ್ಸ್​ವೆಲ್​​ ಹೊಡಿಬಡಿ ಆಟಕ್ಕೆ ಮುಂದಾದು. ಈ ಮಧ್ಯೆ ಮಾರ್ಶ್​​ ಅಮೋಘ ಶತಕ ಸಿಡಿಸಿ ಮಿಂಚಿದರು. ರನ್​ ಗತಿಯನ್ನು ಏರಿಸಿದ ಈ ಜೋಡಿ ತಂಡದ ಮೊತ್ತವನ್ನು 280ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 50 ಓವರ್​​ಗೆ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಭಾರತಕ್ಕೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಿದೆ. ಭಾರತ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 3 ವಿಕೆಟ್ ಹಾಗೂ ಜಡೇಜಾ 1 ವಿಕೆಟ್ ಪಡೆದರು.

ಒಟ್ಟಾರೆ ಭಾರತ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದು, ಅದ್ಭುತ ಆಟ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಆಸ್ಟ್ರೇಲಿಯಾ ಪರ ರಿಚರ್ಡಸನ್, ಬೆಹ್ರೆನ್​​ಡಾರ್ಫ್​​​, ಸ್ಟಾಯಿನಿಸ್ ಹಾಗೂ ಮ್ಯಾಕ್ಸ್​ವೆಲ್​ ತಲಾ 1 ವಿಕೆಟ್ ಪಡೆದರು. ಸದ್ಯ ಸರಣಿ ಸಮಬಲಗೊಂಡಿದ್ದು, ಜ. ರಂದು ಮೆಲ್ಬೋರ್ನ್​​ನಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

First published:January 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626