ಅಬ್ಬರವನ್ನು ಮರೆತ ಗಬ್ಬರ್; 2ನೇ ಏಕದಿನದಲ್ಲಿ ಧವನ್ ಬದಲು ರಾಹುಲ್​ಗೆ ಅವಕಾಶ?

ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ಎಡವುತ್ತಿದೆ. ಬೆಸ್ಟ್​ ಒಪನಿಂಗ್ ಜೋಡಿ ಎಂದೇ ಹೇಳಲಾಗುವ ರೋಹಿತ್ ಶರ್ಮಾ-ಶಿಖರ್ ಧವನ್ ಜೊತೆಯಾಟ ಯಾಕೋ ಮಂಕಾದಂತಿದೆ.

Vinay Bhat | news18
Updated:March 4, 2019, 4:35 PM IST
ಅಬ್ಬರವನ್ನು ಮರೆತ ಗಬ್ಬರ್; 2ನೇ ಏಕದಿನದಲ್ಲಿ ಧವನ್ ಬದಲು ರಾಹುಲ್​ಗೆ ಅವಕಾಶ?
ಕೆ ಎಲ್ ರಾಹುಲ್ (ಟೀಂ ಇಂಡಿಯಾ ಆಟಗಾರ)
Vinay Bhat | news18
Updated: March 4, 2019, 4:35 PM IST
ನಾಗ್ಪುರ: ಟಿ-20 ಸರಣಿಯಲ್ಲಿ ಸೋತ ಬಳಿಕ ಏಕದಿನ ಸರಣಿಯಲ್ಲಿ ಭರ್ಜರಿ ಕಮ್​​ಬ್ಯಾಕ್ ಮಾಡಿರುವ ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ. ಎಂ ಎಸ್ ಧೋನಿ ಹಾಗೂ ಕೇದರ್ ಜಾಧವ್​ರ 141 ರನ್​​ಗಳ ಕಾಣಿಕೆಯ ನೆರವಿನಿಂದ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ 6 ವಿಕೆಟ್​ಗಳ ಜಯ ಸಾಧಿಸಿತ್ತು.

ಸದ್ಯ ಎರಡನೇ ಏಕದಿನಕ್ಕೆ ಸಜ್ಜಾಗಿರುವ ಭಾರತಕ್ಕೆ ಆರಂಭಕ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನಾಳೆ ನಾಗ್ಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಒಂದಿಷ್ಟು ಬದಲಾವಣೆಯೊಂದಿಗೆ ಇಳಿಯಲಿದೆ.

ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ಎಡವುತ್ತಿದೆ. ಬೆಸ್ಟ್​ ಒಪನಿಂಗ್ ಜೋಡಿ ಎಂದೇ ಹೇಳಲಾಗುವ ರೋಹಿತ್ ಶರ್ಮಾ-ಶಿಖರ್ ಧವನ್ ಜೊತೆಯಾಟ ಯಾಕೋ ಮಂಕಾದಂತಿದೆ. ಅಲ್ಲದೆ ಧವನ್ ಕಳಪೆ ಫಾರ್ಮ್​​ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಹೀಗಾಗಿ ಧವನ್ ಬದಲು ಭರ್ಜರಿ ಫಾರ್ಮ್​ನಲ್ಲಿರುವ ಕೆ ಎಲ್ ರಾಹುಲ್ ಓಪನರ್ ಆಗಿ ನಾಳಿನ ಪಂದ್ಯದಲ್ಲಿ ಕಣಕ್ಕಿಲಿಯುವ ಅಂದಾಜಿದೆ.

ಇದನ್ನೂ ಓದಿ: 2022ರ ಏಷ್ಯನ್ ಗೇಮ್ಸ್​​ನಲ್ಲಿ ಮತ್ತೆ ಕ್ರಿಕೆಟ್​ಗೆ ಸ್ಥಾನ

3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ಅಂಬಟಿ ರಾಯುಡು ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರಾದರು ಮತ್ತೊಂದು ಅವಕಾಶ ನೀಡಬಹುದು. ರಾಯುಡು ಫಾರ್ಮ್​​ಗೆ ಮರಳಿದರೆಂದಾದರೆ ಭಾರತದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ. 5ನೇ ಹಾಗೂ 6ನೇ ಸ್ಥಾನ ಕ್ರಮವಾಗಿ ಎಂಎಸ್ ಧೋನಿ ಹಾಗೂ ಕೇದರ್ ಜಾಧವ್​​ಗೆ ಹೇಳಿ ಮಾಡಿಸಿದ್ದಾಗಿದೆ.

7ನೇ ಸ್ಥಾನದಲ್ಲಿ ಆಲ್ರೌಂಡರ್ ವಿಜಯ್ ಶಂಕರ್​​ರನ್ನು ಕೈಬಿಟ್ಟು ರಿಷಭ್ ಪಂತ್​​ರನ್ನು ಆಡಿಸಿದರೆ ಉತ್ತಮ. ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿ ಮಿಂಚಿದರೆ, ಮೊಹಮ್ಮದ್  ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ಬೆಂಕಿಯ ಚೆಂಡನ್ನು ಉಗುಳುತ್ತಿದ್ದಾರೆ. ಒಟ್ಟಾರೆ ಮೇಲಿಂದ ಟೀಂ ಇಂಡಿಯಾ ಬಲಿಷ್ಠವಾಗಿ ಕಂಡರು ದಿಢೀರ್ ಕುಸಿತ ಕಂಡಿರುವುದನ್ನು ಕಂಡಿದ್ದೇವೆ. ಹೀಗಾಗಿ ಏಕದಿನ ಸರಣಿ ವಶಪಡಿಸಿಕೊಳ್ಳಬೆಕಾದರೆ ಭಾರತ ಎಚ್ಚರಿಕೆಯಿಂದ ಆಡಬೇಕಿದೆ.
Loading...

First published:March 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...