ನೆಟ್​​ನಲ್ಲಿ ಮ್ಯಾಕ್ಸ್​​ವೆಲ್​​ರಿಂದ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್

ಟೆಸ್ಟ್​ ಸರಣಿ ಕಳೆದುಕೊಂಡಿರುವ ಕಾಂಗರೂ ಪಡೆ ಹೇಗಾದರು ಏಕದಿನ ಸರಣಿ ಕೈವಶ ಮಾಡಿಕೊಳ್ಳಬೇಕೆಂದು ಪಣತೊಟ್ಟಿದೆ. ಅದಕ್ಕಾಗಿಯೆ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

Vinay Bhat | news18
Updated:January 9, 2019, 3:54 PM IST
ನೆಟ್​​ನಲ್ಲಿ ಮ್ಯಾಕ್ಸ್​​ವೆಲ್​​ರಿಂದ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್
Pic: Twitter
Vinay Bhat | news18
Updated: January 9, 2019, 3:54 PM IST
ಸಿಡ್ನಿ: ಈಗಾಗಲೇ ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್​ ಸರಣಿ ಸೋತಿರುವ ಆಸ್ಟ್ರೇಲಿಯಾ ತಂಡ ಮುಂಬರುವ ಏಕದಿನ ಸರಣಿಗೆ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈಗಾಗಲೇ ಆಟಗಾರರನ್ನು ಪ್ರಕಟಮಾಡಿರುವ ಆಸೀಸ್ ಬಲಿಷ್ಠ ತಂಡವನ್ನೆ ಕಣಕ್ಕಿಳಿಸಲು ತೀರ್ಮಾನಿಸಿದೆ.

ವೇಗಿ ಪೀಟರ್ ಸಿಡ್ಲ್, ಸ್ಪಿನ್ನರ್ ನೇಥನ್ ಲೊಯೋನ್ ಮತ್ತು ಬ್ಯಾಟ್ಸ್​ಮನ್​ ಉಸ್ಮಾನ್ ಖ್ವಾಜಾರಂತಹ ಸ್ಟಾರ್ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಟೆಸ್ಟ್​ ಸರಣಿ ಕಳೆದುಕೊಂಡಿರುವ ಕಾಂಗರೂ ಪಡೆ ಹೇಗಾದರು ಏಕದಿನ ಸರಣಿ ಕೈವಶ ಮಾಡಿಕೊಳ್ಳಬೇಕೆಂದು ಪಣತೊಟ್ಟಿದೆ. ಅದಕ್ಕಾಗಿಯೆ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಅದರಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್​​ ವಿಭಿನ್ನ ರೀತಿಯಲ್ಲಿ ಪ್ರ್ಯಾಕ್ಟೀಸ್​​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಖಾಸಗಿ ಸಂದರ್ಶನಕ್ಕೆ ನಿರ್ಭಂದ: ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯ-ಕೆ ಎಲ್ ರಾಹುಲ್​ಗೆ ನೊಟೀಸ್

ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಫೇಮಸ್ ಹೆಲಿಕಾಫ್ಟರ್ ಶಾಟ್ ಮೊರೆಹೋಗಿರುವ ಮ್ಯಾಕ್ಸ್​ವೆಲ್​ ನೆಟ್​​ನಲ್ಲಿ ಸತತ ಅಭ್ಯಾಸದಲ್ಲಿ ತೊಡಗಿದ್ದಾರೆ. ಥೇಟ್ ಧೋನಿಯಂತೆ ಹೆಲಿಕಾಫ್ಟರ್ ಶಾಟ್ ಬೀಸುವ ಮ್ಯಾಕ್ಸ್​ವೆಲ್​ ಅವರ ಅಭ್ಯಾಸದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿದ್ದು, ಸದ್ಯ ಜನವರಿ 11 ರಿಂದ ಆರಂಭವಾಗುವ ಮೊದಲ ಏಕದಿನ ಪಂದ್ಯಕ್ಕೆ ಸಜ್ಜುಗೊಳ್ಳುತ್ತಿದೆ.

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...