4ನೇ ಟೆಸ್ಟ್​: ಮಂದ ಬೆಳಕಿನಿಂದ 3ನೇ ದಿನದಾಟ ಅಂತ್ಯ: ಆಸ್ಟ್ರೇಲಿಯಾ 236/6

ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ಇಂದು ಉತ್ತಮ ಆರಂಭ ಪಡೆದುಕೊಂಡಿತಾದರು, ಬಳಿಕ ದಿಢೀರ್ ಕುಸಿತ ಕಂಡಿದೆ.

Vinay Bhat | news18
Updated:January 5, 2019, 12:43 PM IST
4ನೇ ಟೆಸ್ಟ್​: ಮಂದ ಬೆಳಕಿನಿಂದ 3ನೇ ದಿನದಾಟ ಅಂತ್ಯ: ಆಸ್ಟ್ರೇಲಿಯಾ 236/6
Pic: Twitter
  • News18
  • Last Updated: January 5, 2019, 12:43 PM IST
  • Share this:
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ.

ಬ್ಯಾಟಿಂಗ್​ನಲ್ಲಿ ಮಿಂಚಿದ ಭಾರತೀಯರು 622 ರನ್​ಗೆ ಡಿಕ್ಲೇರ್ ಮಾಡಿಕೊಂಡಿದ್ದರು. ಇಂದು ಬೌಲರ್​ಗಳು ಕೂಡ ಅದ್ಭುತ ಪ್ರದರ್ಶನ ತೋರಿದ್ದು, ಆಸೀಸ್​ ಪಡೆಯ 6 ವಿಕೆಟ್ ಕಿತ್ತಿದ್ದಾರೆ.

ಪರಿಣಾಮ ಮಂದ ಬೆಳಕಿನಿಂದಾಗಿ ಆಟವನ್ನು ಬೇಗನೆ ಮುಕ್ತಾಯಗೊಳಿಸಿದ್ದು ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿದೆ. ಅಂತೆಯೆ ಆಸೀಸ್ ಇನ್ನೂ 386 ರನ್​ಗಳ ಹಿನ್ನಡೆಯಲ್ಲಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ಇಂದು ಉತ್ತಮ ಆರಂಭ ಪಡೆದುಕೊಂಡಿತಾದರು, ಬಳಿಕ ದಿಢೀರ್ ಕುಸಿತ ಕಂಡಿತು.

ಮೊದಲ ವಿಕೆಟ್​ಗೆ ಮಾರ್ಕಸ್ ಹ್ಯಾರಿಸ್ ಹಾಗೂ ಉಸ್ಮಾನ್ ಖ್ವಾಜಾ 72 ರನ್​​ಗಳ ಕಾಣಿಕೆ ನೀಡಿದರು. ಅರ್ಧಶತಕ ಬಾರಿಸಿದ ಮಾರ್ಕಸ್ 79 ರನ್​ಗೆ ಜಡೇಜಾ ಎಸೆತದಲ್ಲಿ ಬೌಲ್ಡ್​ ಆದರೆ, ಉಸ್ಮಾನ್ 27 ರನ್​ಗೆ ನಿರ್ಗಮಿಸಿದರು. ಬಳಿಕ ಬಂದ ಮರ್ನಸ್ ಲಾಬುಸ್ಚಗ್ನೆ(38) ಒಂದಿಷ್ಟೊತ್ತು ಕ್ರೀಸ್​ನಲ್ಲಿ ಇದ್ದರಾದರು ಉಳಿದ ಬ್ಯಾಟ್ಸ್​​ಮನ್​ಗಳು ಇವರಿಗೆ ಸರಿಯಾಗಿ ಸಾತ್ ನೀಡಲಿಲ್ಲ. ಶಾನ್ ಮಾರ್ಶ್​​ ಬಂದ ಬೆನ್ನಲ್ಲೆ 8, ಟ್ರಾವಿಸ್ ಹೆಡ್ 20, ನಾಯಕ ಟಿಮ್ ಪೇಯ್ನ್​​ 5ರನ್​ಗೆ ಬ್ಯಾಟ್ ಕೆಳಗಿಟ್ಟರು.

ಇದನ್ನೂ ಒದಿ: ಭಾರತ 622/7 ಡಿಕ್ಲೇರ್: ಎರಡನೇ ದಿನದಾಟದ ಅಂತ್ಯಕ್ಕೆ ಆಸೀಸ್: 24/0

ಈ ಸಂದರ್ಭ ಜೊತೆಯಾದ ಪೀಟರ್ ಹ್ಯಾಂಡ್ಸ್​ಕಾಂಬ್(28)​ ಹಾಗೂ ಪ್ಯಾಟ್ ಕಮಿನ್ಸ್(25)​​ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದು ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತಿದ್ದರೆ, ರವೀಂದ್ರ ಜಡೇಜಾ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ.
Loading...

ಇದಕ್ಕೂ ಮೊದಲು ಟೀಂ ಇಂಡಿಯಾ ಚೇತೇಶ್ವರ್ ಪೂಜಾರ ಅವರ 193, ರಿಷಭ್ ಪಂತ್ ಅಜೇಯ 159, ರವೀಂದ್ರ ಜಡೇಜಾ 81 ಹಾಗೂ ಮಯಾಂಕ್ ಅಗರ್ವಾಲ್ ಅವರ 77 ರನ್​ಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 622 ರನ್​ ಗಳಿಸಿರುವಾಗ ಡಿಕ್ಲೇರ್ ಮಾಡಿಕೊಂಡಿತ್ತು.

First published:January 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...