ಮುಂದಿನ ವರ್ಷ ಫೆಬ್ರವರಿಯಲ್ಲಿ ಭಾರತ 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳಿಗೆ ಆಸ್ಟ್ರೇಲಿಯಗೆ (IND vsAUS) ಆತಿಥ್ಯ ವಹಿಸಲಿದೆ. ಬಿಸಿಸಿಐ (BCCI) ಗುರುವಾರದಂದು (ಡಿಸೆಂಬರ್ 8) ಈ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರವಾಸವು ಫೆಬ್ರವರಿ 9 ರಿಂದ ನಾಗ್ಪುರದಲ್ಲಿ (Maharashtra Cricket Association Stadium) ಮೊದಲ ಟೆಸ್ಟ್ನೊಂದಿಗೆ ಪ್ರಾರಂಭವಾಗುತ್ತದೆ. ಭಾರತವು ಮುಂದಿನ ಮೂರು ಟೆಸ್ಟ್ ಪಂದ್ಯಗಳನ್ನು ದೆಹಲಿ (Arun Jaitley Stadium), ಧರ್ಮಶಾಲಾ (Himachal Pradesh Cricket Association Stadium, Dharamshala) ಮತ್ತು ಅಹಮದಾಬಾದ್ (Narendra Modi Stadium) ನಲ್ಲಿ ನಡೆಯಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ:
ಇದು ಬಾರ್ಡರ್-ಗವಾಸ್ಕರ್ ಟ್ರೋಫಿಯ ಆವೃತ್ತಿಯಾಗಿದ್ದು, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಒಳಗೊಂಡಿರುತ್ತದೆ. ಐಸಿಸಿಯ ಫ್ಯೂಚರ್ ಟೂರ್ಸ್ ಮತ್ತು ಪ್ರೋಗ್ರಾಂ (ಎಫ್ಟಿಪಿ) ಪ್ರಕಾರ 2024 ರಿಂದ ಐದು ಟೆಸ್ಟ್ ಪಂದ್ಯಗಳಲ್ಲಿ ಇದನ್ನು ಆಡಲಾಗುತ್ತದೆ. ಈ ಮೂಲಕ ಐದು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೆಹಲಿ ಮೊದಲ ಬಾರಿಗೆ ಟೆಸ್ಟ್ಗೆ ಆತಿಥ್ಯ ವಹಿಸಲಿದೆ. 2017 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ಗೆ ಆತಿಥ್ಯ ವಹಿಸಿತ್ತು. ಬಳಿಕ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇಲ್ಲಿ ಟೆಸ್ಟ್ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ.
ಸರಣಿ ಜಯ ದಾಖಲಿಸಿದ್ದ ಭಾರತ:
2020-21ರಲ್ಲಿ 2-1 ಸರಣಿ ಜಯದ ನಂತರ ಭಾರತವು ಇದೀಗ ರೆಡ್ ಬಾಲ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಹೀಗಾಗಿ ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಆಸ್ಟ್ರೇಲಿಯಾ ಟೆಸ್ಟ್ಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡ ನಾಲ್ಕನೇ ದೇಶವಾಗಲಿದೆ. ಬಿಸಿಸಿಐ ಈ ಹಿಂದೆ ಇಂಗ್ಲೆಂಡ್, ನ್ಯೂಜಿಲೆಂಡ್ (ಎರಡೂ 2021 ರಲ್ಲಿ) ಮತ್ತು ಶ್ರೀಲಂಕಾ (2022) ಆತಿಥ್ಯ ವಹಿಸಿತ್ತು.
ಇದನ್ನೂ ಓದಿ: Cricket News: ರನ್ ಗಳಿಸುವಾಗ ಕುಸಿದು ಬಿದ್ದ ಕ್ರಿಕೆಟಿಗ, ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವು
ಬಾರ್ಡರ್-ಗವಾಸ್ಕರ್ ಟ್ರೋಫಿ 2023 ರ ಸಂಪೂರ್ಣ ವೇಳಾಪಟ್ಟಿ:
ಮೊದಲ ಟೆಸ್ಟ್: ಫೆಬ್ರವರಿ 9-13 - ನಾಗ್ಪುರ (ಬೆಳಗ್ಗೆ 9:30ಕ್ಕೆ ಆರಂಭ)
ಎರಡನೇ ಟೆಸ್ಟ್: ಫೆಬ್ರವರಿ 17-21 - ದೆಹಲಿ (ಬೆಳಗ್ಗೆ 9:30ಕ್ಕೆ ಆರಂಭ)
ಮೂರನೇ ಟೆಸ್ಟ್: ಮಾರ್ಚ್ 1-5 - ಧರ್ಮಶಾಲಾ (ಬೆಳಗ್ಗೆ 9:30ಕ್ಕೆ ಆರಂಭ)
ನಾಲ್ಕನೇ ಟೆಸ್ಟ್: ಮಾರ್ಚ್ 9-13 - ಅಹಮದಾಬಾದ್ (ಬೆಳಗ್ಗೆ 9:30ಕ್ಕೆ ಆರಂಭ)
ಬಾರ್ಡರ್-ಗವಾಸ್ಕರ್ ಟ್ರೋಫಿ 2023ರ ನಂತರ ಮುಂಬೈ, ವೈಜಾಗ್ ಮತ್ತು ಚೆನ್ನೈನಲ್ಲಿ ನಡೆಯಲಿರುವ ಮೂರು ಪಂದ್ಯಗಳ ODI ಸರಣಿಯೊಂದಿಗೆ ಆಸೀಸ್ ಭಾರತ ಪ್ರವಾಸ ಕೊನೆಗೊಳ್ಳುತ್ತದೆ.
1 ನೇ ODI: ಮಾರ್ಚ್ 17 ಶುಕ್ರವಾರ - ಮುಂಬೈ (ಬೆಳಗ್ಗೆ 10ಕ್ಕೆ ಆರಂಭ)
2ನೇ ODI: ಮಾರ್ಚ್ 19 ರವಿವಾರ - ವೈಜಾಗ್ (ಬೆಳಗ್ಗೆ 10ಕ್ಕೆ ಆರಂಭ)
3ನೇ ODI: ಮಾರ್ಚ್ ಬುಧವಾರ - ಚೆನ್ನೈ (ಬೆಳಗ್ಗೆ 10ಕ್ಕೆ ಆರಂಭ)
ವಿಶ್ವ ಟೆಸ್ಟ್ ಸರಣಿಯ ಭಾಗ:
2023ರಲ್ಲಿ ಮಾರ್ಚ್ ವರೆಗೆ ನಡೆಯಲಿರುವ ಎಲ್ಲಾ ಸರಣಿಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಅರ್ಹತೆ ಮತ್ತು ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್ನ ಮೇಲೆ ನಿಕಟವಾಗಿ ಗಮನಹರಿಸಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಸೀಸನ್ಗೆ ಮುಂಚಿತವಾಗಿ ಟೀಮ್ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ಅದರ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ