ಆಸೀಸ್ ವಿರುದ್ಧ ತವರಿನಲ್ಲಿ ಸೆಣೆಸಾಟ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಎರಡು ಟಿ-20 ಪಂದ್ಯಗಳ ಹಾಗೂ ಐದು ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಭಾರತ ವಿರುದ್ಧ ಆಡಲಿದೆ. ಮೊದಲ ಟಿ-20 ಪಂದ್ಯ ಫೆಬ್ರವರಿ 24 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ತಿಂಗಳ ಅಂತ್ಯದ ವೇಳೆ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದ್ದು ಐದು ಪಂದ್ಯಗಳ ಟಿ-20, 3 ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಕಿವೀಸ್ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಈ ತಿಂಗಳ ಅಂತ್ಯದ ವೇಳೆ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದ್ದು ಐದು ಪಂದ್ಯಗಳ ಟಿ-20, 3 ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಕಿವೀಸ್ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

  • News18
  • Last Updated :
  • Share this:
ನವ ದೆಹಲಿ (ಜ. 10): ಸದ್ಯ ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಮಧ್ಯೆ ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾದ ಬೆಳೆಸಲಿದ್ದು, ಬಿಸಿಸಿಐ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಎರಡು ಟಿ-20 ಪಂದ್ಯಗಳ ಹಾಗೂ ಐದು ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಭಾರತ ವಿರುದ್ಧ ಆಡಲಿದೆ. ಮೊದಲ ಟಿ-20 ಪಂದ್ಯ ಫೆಬ್ರವರಿ 24 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡನೇ ಟಿ-20 ವಿಶಾಖಪಟ್ಟಣದಲ್ಲಿ ಆಯೋಜಿಸಲಾಗಿದ್ದು ಫೆ. 27 ರಂದು ನಡೆಯಲಿದೆ. ಎರಡೂ ಟಿ-20 ಪಂದ್ಯ ಸಂಜೆ 7 ಘಂಟೆಗೆ ಆರಂಭವಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯ- ಕೆ ಎಲ್ ರಾಹುಲ್​ಗೆ ಏಕದಿನ ಪಂದ್ಯ ನಿಷೇಧ

ಅಂತೆಯೆ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯ ಮಾ. 2 ರಂದು ಹೈದರಾಬಾದ್, 2ನೇ ಏಕದಿನ ಪಂದ್ಯ ಮಾ. 5 ನಾಗ್ಪುರ್, 3ನೇ ಏಕದಿನ ಪಂದ್ಯ ಮಾ. 8 ರಂದು ರಾಂಚಿ, 4ನೇ ಏಕದಿನ ಪಂದ್ಯ ಮಾ. 10 ರಂದು ಮೊಹಾಲಿಯಲ್ಲಿ ಹಾಗೂ ಕೊನೆಯ ಐದನೇ ಏಕದಿನ ಪಂದ್ಯ ಮಾ. 13 ರಂದು ಡೆಲ್ಲಿಯಲ್ಲಿ ನಡೆಯಲಿದೆ. ಎಲ್ಲ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.

 ಇದನ್ನೂ ಓದಿ: 1 ಎಸೆತದಲ್ಲಿ ಗೆಲ್ಲಲು ಬೇಕು 6 ರನ್: ಬ್ಯಾಟ್ಸ್​ಮನ್​ ಬಾಲ್ ಮುಟ್ಟದೆ ಪಂದ್ಯ ಗೆಲ್ಲಿಸಿಕೊಟ್ಟ: ಹೀಗೊಂದು ರೋಚಕ ಪಂದ್ಯ

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಬರುವ ಶನಿವಾರದಿಂದ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯ ಆಡಲಿದೆ. ಈ ಸರಣಿ ಮುಗಿದ ಬಳಿಕ ಭಾರತ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದ್ದು, ಇದಾದ ಬಳಿಕ ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಣೆಸಾಟ ನಡೆಯಲಿದೆ.

First published: