ಆಸ್ಟ್ರೇಲಿಯಾ ನೆಲದಲ್ಲಿ ಗೆಲುವಿನ ನಗೆ ಬೀರಿದ ಭಾರತ; ಕೊಹ್ಲಿ ತಂಡಕ್ಕೆ ಐತಿಹಾಸಿಕ ಗೆಲುವು

ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಆಸೀಸ್ ನೆಲದಲ್ಲಿ ಸರಣಿ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಕಾಂಗುರೂಗಳ ನಾಡಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತದ ಪ್ರಪ್ರಥಮ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

Vinay Bhat | news18
Updated:January 7, 2019, 10:35 AM IST
ಆಸ್ಟ್ರೇಲಿಯಾ ನೆಲದಲ್ಲಿ ಗೆಲುವಿನ ನಗೆ ಬೀರಿದ ಭಾರತ; ಕೊಹ್ಲಿ ತಂಡಕ್ಕೆ ಐತಿಹಾಸಿಕ ಗೆಲುವು
ಗೆಲುವಿನ ಸಂಭ್ರಮದಲ್ಲಿ ಭಾರತ
Vinay Bhat | news18
Updated: January 7, 2019, 10:35 AM IST
ಸಿಡ್ನಿ(ಜ.7):  ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯಕಂಡಿದೆ. ಮೂಲಕ ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟೆಸ್ಟ್​​ ಸರಣಿ ತನ್ನದಾಗಿಸಿದೆ.

1947ರಿಂದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ಸರಣಿಆಡುತ್ತಿದೆ. ಆದರೆ, ಈವರೆಗೆ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ವಿರಾಟ್ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಗೆಲುವಿನ ನಗೆ ಬೀರಿದೆ. 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡ ಭಾರತ, ಕಾಂಗುರೂಗಳ ನಾಡಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತದ ಪ್ರಪ್ರಥಮ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ.

ಅಂತಿಮ ಟೆಸ್ಟ್​​ನಲ್ಲಿ ಮೊದಲು ಬ್ಯಾಟಿಂಗ್ಆರಂಭಿಸಿದ ಕೊಹ್ಲಿ ಪಡೆ, ಚೇತೇಶ್ವರ್ ಪೂಜಾರ ಅವರ 193, ರಿಷಭ್ ಪಂತ್ ಅಜೇಯ 159, ರವೀಂದ್ರ ಜಡೇಜಾ 81 ಹಾಗೂ ಮಯಾಂಕ್ ಅಗರ್ವಾಲ್ ಅವರ 77 ರನ್​​ಗಳ ನೆರವಿನಿಂದ ಬೃಹತ್ 626ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು.

ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 300 ರನ್ಗಳಿಗೆ ತನ್ನೆಲ್ಲಾ ವಿಕೆಟ್ಒಪ್ಪಿಸಿತ್ತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 6ರನ್ಗಳಿಸಿ ಆಡುತ್ತಿತ್ತು. ಆದರೆ, ಭಾನುವಾರ ಬ್ಯಾಡ್ಲೈಟ್ಎನ್ನುವ ಕಾರಣಕ್ಕೆ ಪಂದ್ಯ ಮುಂದೂಡಲಾಗಿದ್ದು, ಇಂದು ಕೂಡ ಮಳೆ ಮುಂದುವರಿದ ಕಾರಣ 4ನೇ ಟೆಸ್ಟ್​ ಪಂದ್ಯ ರದ್ದು ಮಾಡಲಾಯಿತು.

ಟೂರ್ನಿಯುದ್ದಕ್ಕು ಭರ್ಜರಿ ಆಟ ಪ್ರದರ್ಶಿಸಿದ ಚೇತೇಶ್ವರ್ ಪೂಜಾರ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡರು.

ಸಂಕ್ಷಿಪ್ಪ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್​​: 622/7 ಡಿಕ್ಲೇರ್
Loading...

(ಪೂಜಾರ 193, ರಿಷಭ್ ಪಂತ್ 159*, ಜಡೇಜಾ 81 ಮಯಾಂಕ್ ಅಗರ್ವಾಲ್ 77, ನೇಥನ್ ಲ್ಯಾನ್ 178/4)

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​: 300/10

(ಮಾರ್ಕಸ್ ಹ್ಯಾರಿಸ್ 79, ಪೀಟರ್ ಹ್ಯಾಂಡ್ಸ್​ಕಾಂಬ್ 37, ಕುಲ್ದೀಪ್ ಯಾದವ್ 99/5)

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​: 6/0

ಇನ್ನು ಭಾರತದ ಗೆಲವಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ