4ನೇ ಟೆಸ್ಟ್​: 193ಕ್ಕೆ ಪೂಜಾರ ಔಟ್​; 441ಕ್ಕೆ 6 ವಿಕೆಟ್​ ಕಳೆದುಕೊಂಡ ಭಾರತ

ಭಾರತ ಪರ ಇದೇ ಮೊದಲ ಬಾರಿಗೆ ಕನ್ನಡಿಗರಿಬ್ಬರು ಓಪನರ್​ಗಳಾಗಿ ಕಣಕ್ಕಿಳಿದಿದ್ದು ಹೆಚ್ಚು ಕುತೂಹಲ ಕೆರಳಿಸಿತ್ತು. ಆದರೆ, ಆರಂಭದಲ್ಲೇ ರಾಹುಲ್ ಔಟ್ ಆಗಿ ನಿರಾಸೆ ಮೂಡಿಸಿದರು.

Pic: Twitter

Pic: Twitter

  • News18
  • Last Updated :
  • Share this:
ಸಿಡ್ನಿ (. 03): ಇಲ್ಲಿನ ಸಿಡ್ನಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 441ರನ್​ ಕಲೆ ಹಾಕಿ 6 ವಿಕೆಟ್​ ಕಳೆದುಕೊಂಡಿದೆ.

ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಅವರ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟಕ್ಕೆ 4 ವಿಕೆಟ್ ಕಳೆದುಕೊಂಡು 303 ರನ್ ಕಲೆಹಾಕಿದೆ.

ಭಾರತ ಪರ ಇದೇ ಮೊದಲ ಬಾರಿಗೆ ಕನ್ನಡಿಗರಿಬ್ಬರು ಓಪನರ್​ಗಳಾಗಿ ಕಣಕ್ಕಿಳಿದಿದ್ದು ಹೆಚ್ಚು ಕುತೂಹಲ ಕೆರಳಿಸಿತ್ತು. ಆದರೆ, ಆರಂಭದಲ್ಲೇ ರಾಹುಲ್ ಔಟ್ ಆಗಿ ನಿರಾಸೆ ಮೂಡಿಸಿದರು. ಮತ್ತೊಮ್ಮೆ ಕಳಪೆ ಆಟವಾಡಿ ಕೇವಲ 9 ರನ್​ಗೆ ರಾಹುಲ್ ನಿರ್ಗಮಿಸಿದರು. ಬಳಿಕ ಚೇತೇಶ್ವರ್ ಪೂಜಾರ ಜೊತೆಯಾದ ಮಯಾಂಕ್ ಅಗರ್ವಾಲ್ ಭರ್ಜರಿ ಆಟ ಪ್ರದರ್ಶಿಸಿದರು.

ಇದನ್ನೂ ಓದಿಆಸೀಸ್ ನೆಲದಲ್ಲಿ ಕನ್ನಡಿಗನ ಕಮಾಲ್: ಗವಾಸ್ಕರ್ ದಾಖಲೆ ಸರಿಗಟ್ಟಿದ ಅಗರ್ವಾಲ್

ಶತಕದ(116) ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಆಸರೆಯಾದರು. ಆದರೆ, ಮಯಾಂಕ್ ಮತ್ತೆ ಶತಕದ ಅಂಚಿನಲ್ಲಿ ಎಡವಿದರು. 112 ಎಸೆತಗಳನ್ನು ಎದುರುಸಿದ ಮಯಾಂಕ್ 7 ಬೌಂಡರಿ ಮತ್ತು 2 ಸಿಕ್ಸ್​​ನೊಂದಿಗೆ 77 ರನ್​ ಗಳಿಸಿ ನಿರ್ಗಮಿಸಿದರು.

ನಂತರ ಬಂದ ನಾಯಕ ವಿರಾಟ್ ಕೊಹ್ಲಿ(23) ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(18) ಬೇಗನೆ ಔಟ್ ಆಗಿದ್ದು ತಂಡಕ್ಕೆ ಕೊಂಚ ಹೊಡೆತ ಬಿದ್ದಂತಾಯಿತು. ಆದರೆ, ಪೂಜಾರ ಎಚ್ಚರಿಕೆಯ ಆಟಪ್ರದರ್ಶಿಸಿ ಟೆಸ್ಟ್​ ಕ್ರಿಕೆಟ್​ನಲ್ಲಿ 18ನೇ ಶತಕ ಸಿಡಿಸಿದರು. ಅಲ್ಲದೆ ಈ ಟೆಸ್ಟ್​​ ಸರಣಿಯಲ್ಲಿ ಪೂಜಾರ ಅವರ ಬ್ಯಾಟ್​ನಿಂದ ಬಂದ ಮೂರನೇ ಶತಕ ಇದಾಯಿತು.

ಅಂತಿಮವಾಗಿ ದಿನದಾಟಕ್ಕೆ ಪೂಜಾರ-ಹನುಮ ವಿಹಾರಿ ಜೊತೆಯಾಗಿ 75 ರನ್​ಗಳ ಕಾಣಿಕೆ ನೀಡಿದ್ದು, ಭಾರತದ ಮೊತ್ತ 4 ವಿಕೆಟ್ ನಷ್ಟಕ್ಕೆ 303 ಆಗಿದೆ. ಪೂಜಾರ 250 ಎಸೆತಗಳಲ್ಲಿ 16 ಬೌಂಡರಿಯೊಂದಿಗೆ 130 ರನ್ ಗಳಿಸಿದ್ದರೆ, ವಿಹಗಾರಿ 39 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸೀಸ್ ಪರ ಜೋಶ್ ಹ್ಯಾಜ್ಲೇವುಡ್ 2, ನೇಥನ್ ಲ್ಯಾನ್ ಹಾಗೂ ಮಿಚೆಲ್ ಸ್ಟಾರ್ಕ್​ ತಲಾ 1 ವಿಕೆಟ್ ಪಡೆದಿದ್ದಾರೆ.

 First published: