3ನೇ ಟೆಸ್ಟ್​​: ಭಾರತ 443/7 ಡಿಕ್ಲೇರ್: ದಿನದಾಟಕ್ಕೆ ಆಸ್ಟ್ರೇಲಿಯಾ 8/0

ಮೊದಲ ದಿನದಾಟಕ್ಕೆ 2 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿದ್ದ ಭಾರತ ಪೂಜಾರ 68 ಹಾಗೂ ನಾಯಕ ವಿರಾಟ್ ಕೊಹ್ಲಿ 47 ರನ್ ಗಳಿಸಿ ಕ್ರಿಸ್​ನಲ್ಲಿದ್ದರು. ಎರಡನೇ ದಿನವಾದ ಇಂದು ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ ಕಾಂಗರೂಗಳಿಗೆ ಮಾರಕವಾಗಿ ಪರಿಣಮಿಸಿದರು.

Vinay Bhat | news18
Updated:December 27, 2018, 12:45 PM IST
3ನೇ ಟೆಸ್ಟ್​​: ಭಾರತ 443/7 ಡಿಕ್ಲೇರ್: ದಿನದಾಟಕ್ಕೆ ಆಸ್ಟ್ರೇಲಿಯಾ 8/0
(AP Photo/James Elsby)
  • News18
  • Last Updated: December 27, 2018, 12:45 PM IST
  • Share this:
ಮೆಲ್ಬೋರ್ನ್​​ (ಡಿ. 27): ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಪೂಜಾರ ಅವರ ಶತಕ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ 7 ವಿಕೆಟ್ ನಷ್ಟಕ್ಕೆ 443 ರನ್ ಕಲೆಹಾಕಿ ಡಿಕ್ಲೇರ್ ಮಾಡಿದೆ. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್ ಕಲೆಹಾಕಿದ್ದು, ಇನ್ನೂ 435 ರನ್​ಗಳ ಹಿನ್ನಡೆಯಲ್ಲಿದೆ.

ಮೊದಲ ದಿನವೇ ಉತ್ತಮ ಬ್ಯಾಟಿಂಗ್ ಲಯ ಕಂಡುಕೊಂಡ ಕೊಹ್ಲಿ ಪಡೆ ಇಂದು ಕೂಡ ತಮ್ಮ ಹೋರಾಟವನ್ನು ಮುಂದುವರಿಸಿತು. ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿದ್ದ ಭಾರತ, ಪೂಜಾರ 68 ಹಾಗೂ ನಾಯಕ ವಿರಾಟ್ ಕೊಹ್ಲಿ 47 ರನ್ ಗಳಿಸಿ ಕ್ರಿಸ್​ನಲ್ಲಿದ್ದರು. ಎರಡನೇ ದಿನವಾದ ಇಂದು ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ ಕಾಂಗರೂಗಳಿಗೆ ಮಾರಕವಾಗಿ ಪರಿಣಮಿಸಿದರು.

ಇದನ್ನೂ ಓದಿ: VIDEO: ಅದ್ಭುತ ಸ್ವಿಂಗ್ ಬೌಲಿಂಗ್​: ಹತ್ತು ವಿಕೆಟ್​ ಕಬಳಿಸಿ ಮಿಂಚಿದ ಯುವ ವೇಗಿ

3ನೇ ವಿಕೆಟ್​ಗೆ ಇವರಿಬ್ಬರು ಸೇರಿ 170 ರನ್​ಗಳ ಕಾಣಿಕೆ ನೀಡಿದರು. ಈ ಮಧ್ಯೆ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ ವೃತ್ತಿ ಜೀವನದ 17ನೇ ಶತಕ ಸಿಡಿಸಿ 106 ರನ್​ಗೆ ನಿರ್ಗಮಿಸಿದರು. ಇದರೊಂದಿಗೆ ಪೂಜಾರ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಗರಿಷ್ಠ ಶತಕಗಳ ದಾಖಲೆಯನ್ನು ಮುರಿದರು.

ಅಂತೆಯೆ ಕೊಹ್ಲಿ 82 ರನ್​​ಗಳಿಸಿ ಪೂಜಾರಗೆ ಉತ್ತಮ ಸಾತ್ ನೀಡಿದರು. ಇತ್ತ ಕೊಹ್ಲಿ ಕೂಡ ಆಸೀಸ್ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿವಿಎಸ್ ಲಕ್ಷ್ಮಣ್​​ರನ್ನು ಹಿಂದಿಕ್ಕಿದರು. ಲಕ್ಷ್ಮಣ್​​ ಅವರು ಆಸ್ಟ್ರೇಲಿಯಾದಲ್ಲಿ 1236 ರನ್ ಪೇರಿಸಿದ್ದರು. ಸದ್ಯ ಕೊಹ್ಲಿ ಇವರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.

ಇನ್ನು ಬಳಿಕ ಬಂದ ಅಜಿಂಕ್ಯ ರಹಾನೆ ಕೇವಲ 34 ರನ್​ಗೆ ಇನ್ನಿಂಗ್ಸ್​ ಮುಗಿಸಿದರು. ನಂತರ ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಪಂತ್ (39) ನಿರ್ಗಮನದ ಬೆನ್ನಲ್ಲೆ ಕ್ರೀಸ್​ಗೆ ಬಂದ ರವೀಂದ್ರ ಜಡೇಜಾ 4 ರನ್​ಗೆ ಔಟ್ ಆದ ವೇಳೆ ಭಾರತ ಡಿಕ್ಲೇರ್ ಮಾಡಿಕೊಂಡಿತು. ರೋಹಿತ್ ಶರ್ಮಾ 63 ರನ್​ಗಳಿಸಿ ಅಜೇಯರಾಗಿ ಉಳಿದರು. ಆಸೀಸ್ ಪರ ಪ್ಯಾಟ್ ಕಮಿನ್ಸ್​ 3 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 2, ನೇಥನ್ ಲ್ಯಾನ್ ಹಾಗೂ ಜೋಶ್ ಹ್ಯಾಜ್ಲೆವೂಡ್ ತಲಾ 1 ವಿಕೆಟ್ ಪಡೆದಿದ್ದಾರೆ.
First published: December 27, 2018, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading