• Home
  • »
  • News
  • »
  • sports
  • »
  • IND vs AUS: ಟಾಸ್​ ಗೆದ್ದ ಟೀಂ ಇಂಡಿಯಾ; ತಂಡಕ್ಕೆ ಕಂಬ್ಯಾಕ್​ ಮಾಡಿದ ಸ್ಟಾರ್​ ಬೌಲರ್​, ಇಲ್ಲಿದೆ ಪ್ಲೇಯಿಂಗ್​ 11

IND vs AUS: ಟಾಸ್​ ಗೆದ್ದ ಟೀಂ ಇಂಡಿಯಾ; ತಂಡಕ್ಕೆ ಕಂಬ್ಯಾಕ್​ ಮಾಡಿದ ಸ್ಟಾರ್​ ಬೌಲರ್​, ಇಲ್ಲಿದೆ ಪ್ಲೇಯಿಂಗ್​ 11

IND vs AUS

IND vs AUS

IND vs AUS: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ  (IND v AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ 3ನೇ ಪಂದ್ಯವು ಇಂದು  ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದ ತಂಡ ಸರಣಿಯನ್ನು ಗೆಲ್ಲಲಿದೆ. ಇದೇ ಕಾರಣಕ್ಕಾಗಿ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.


ಪಂದ್ಯದ ವಿವರ:


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದಿನ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ News 18 Kannada ವೆಬ್‌ಸೈಟ್ ಅನುಸರಿಸಿ.



ಪಿಚ್​ ರಿಪೋರ್ಟ್:


ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ​  ಪಿಚ್​ ಆಗಿದೆ. ಹೀಗಾಗಿ ಟಿ20 ಕ್ರಿಕೆಟ್​ನಲ್ಲಿ ದೊಡ್ಡ ಮೊತ್ತದ ಸ್ಕೋರ್​ ಮಾಡಲು ಇದು ಸಹಾಯಕವಾಗಿದ್ದು, ರನ್​ಗಳ ಮಳೆ ಸುರಿಯುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದು, ಟಿ20 ಕ್ರಿಕೆಟ್​ನಲ್ಲಿ ಈ ಮೈದಾನದಲ್ಲಿ ಕೊಹ್ಲಿ 94 ರನ್ ಗಳಿಸಿ ಮಿಂಚಿದ್ದರು.


ಇದನ್ನೂ ಓದಿ: Team India: ಬಿರಿಯಾನಿಗಾಗಿ ಹೋಟೆಲ್ ಸಿಬ್ಬಂದಿ ಜೊತೆ ಜಗಳವಾಡಿದ್ದ ಟೀಂ ಇಂಡಿಯಾ ಪ್ಲೇಯರ್ಸ್, ಅಷ್ಟಕ್ಕೂ ಆ ದಿನ ಏನಾಗಿತ್ತು?


ಭುವಿ ಇನ್​-ಪಂತ್​ ಔಟ್​:


ಇಂದಿನ ಪಂದ್ಯವು ಹೈದರಾಬದ್​ ನಲ್ಲಿ ನಡೆಯುತ್ತಿರುವುದರಿಂದ ತಂಡಕ್ಕೆ ಮತ್ತೆ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಇದರಿಂದ ರಿಷಭ್ ಪಂತ್​ ಅವರನ್ನು ಕೈಬಿಟ್ಟಿದ್ದು, ಕಾರ್ತಿಕ್ ಪ್ಲೇಯಿಂಗ್​ 11ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಗೆ ಹೈದರಾಬಾದ್ ಪಿಚ್​ ಹೋಂ ಪಿಚ್​ ಇದ್ದಂತೆ. ಏಕೆಂದರೆ ಭುವಿ ಐಪಿಎಲ್​ ನಲ್ಲಿ ಎಸ್​ಆರ್​ಎಚ್​ ಪರ ಆಡುವುದರಿಂದ ಇಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ.


ಇದನ್ನೂ ಓದಿ: BCCI: ಬಿಸಿಸಿಐ ಚುನಾವಣಾ ಅಧಿಸೂಚನೆ ಬಿಡುಗಡೆ, ಎಲೆಕ್ಷನ್ ಯಾವಾಗ?


ಭಾರತ-ಆಸ್ಟ್ರೇಲಿಯಾ ತಂಡ:


ಭಾರತ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್,  ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.


ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಡೇನಿಯಲ್​ ಸ್ಯಾಮ್ಸ್, ಪ್ಯಾಟ್ ಕಮಿನ್ಸ್,  ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಜೋಶ್​ ಇಲ್ಲಿಂಗ್ಸ್

Published by:shrikrishna bhat
First published: