• Home
  • »
  • News
  • »
  • sports
  • »
  • IND vs AUS: ಭರ್ಜರಿ ಬ್ಯಾಟಿಂಗ್​ ಮಾಡಿದ ಆಸೀಸ್​, ಟೀಂ ಇಂಡಿಯಾಗೆ ಬೃಹತ್​ ಮೊತ್ತದ ಟಾರ್ಗೆಟ್​

IND vs AUS: ಭರ್ಜರಿ ಬ್ಯಾಟಿಂಗ್​ ಮಾಡಿದ ಆಸೀಸ್​, ಟೀಂ ಇಂಡಿಯಾಗೆ ಬೃಹತ್​ ಮೊತ್ತದ ಟಾರ್ಗೆಟ್​

IND vs AUS

IND vs AUS

IND vs AUS: ಟಾಸ್​ ಸೋತ​ ಮೊದಲು ಬ್ಯಾಟ್​ ಮಾಡಿದ ಆಸೀಸ್ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 186 ರನ್ ಗಳನ್ನು ಗಳಿಸಿತು. ಆಸೀಸ್​ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ಯಾಮೆರಾನ್ ಗ್ರೀನ್ಭಾರತ ವಿರುದ್ಧ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿದರು.

  • Share this:

ಭಾರತ ಮತ್ತು ಆಸ್ಟ್ರೇಲಿಯಾ  (IND v AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ 3ನೇ ಪಂದ್ಯವು ಇಂದು  ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯುತ್ತಿದೆ. ಈಗಾಗಲೇ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೊದಲು ಬ್ಯಾಟಿಂಗ್​ ಮಾಡಿದ್ದ ಆಸೀಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 186 ರನ್ ಗಳನ್ನು ಗಳಿಸುವ ಮೂಲಕ ಭಾರತ ತಂಡಕ್ಕೆ 187 ರನ್​ ಗಳ ಟಾರ್ಗೆಟ್​ ನೀಡಿದೆ.


ಆಸೀಸ್​ ಪರ ಅಬ್ಬರಿಸಿದ ಗ್ರೀನ್:


ಟಾಸ್​ ಸೋತ​ ಮೊದಲು ಬ್ಯಾಟ್​ ಮಾಡಿದ ಆಸೀಸ್ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 186 ರನ್ ಗಳನ್ನು ಗಳಿಸಿತು. ಆಸೀಸ್​ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ಯಾಮೆರಾನ್ ಗ್ರೀನ್ಭಾರತ ವಿರುದ್ಧ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿದರು, ಅವರು 21 ಎಸೆತದಲ್ಲಿ 3 ಸಿಕ್ಸ್ ಮತ್ತು 7 ಫೋರ್​ ನೆರವಿನಿಂದ 52 ರನ್ ಗಳಿಸಿದರು. ಅವರ ಇಂದಿನ ಅರ್ಧಶತಕ ವೇಗದ ಅರ್ಧಶತಕದಲ್ಲಿ ಒಂದಾಗಿದೆ. ಆರನ್ ಫಿಂಚ್ 7 ರನ್, ಸ್ಟೀವ್ ಸ್ಮಿತ್ 9 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 6 ರನ್, ಜೋಶ್​ ಇಲ್ಲಿಂಗ್ಸ್ 24 ರನ್, ಮ್ಯಾಥ್ಯೂ ವೇಡ್ 1 ರನ್, ಟಿಮ್ ಡೇವಿಡ್ 4 ಸಿಕ್ಸ್ ಮತ್ತು 2 ಬೌಂಡರಿಗಳ ನೆರವಿನಿಂದ ಭರ್ಜರಿ 54 ರನ್ ಸಿಡಿಸಿದರೆ, ಡೇನಿಯಲ್​ ಸ್ಯಾಮ್ಸ್ 28 ರನ್  ಗಳಿಸಿದರು.



ಅಕ್ಷರ್​ ಪಟೇಲ್ ಮಿಂಚಿನ ಬೌಲಿಂಗ್​:


ಈ ಸರಣಿಯಲ್ಲಿ ಭಾರತದ ಪರ ಅಕ್ಷರ್​ ಪಟೇಲ್​ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇಂದೂ ಸಹ ಅಕ್ಷರ್​ ಉತ್ತಮ ಬೌಲಿಂಗ್​ ದಾಳಿ ನಡೆಸಿದ ಅವರು 4 ಓವರ್ ಮಾಡಿ 33 ರನ್​​ ನೀಡಿ ಪ್ರಮುಖ 3 ವಿಕೆಟ್​ ಪಡೆದರು. ಉಳಿದಂತೆ ಚಹಾಲ್​ 22 ರನ್ ನೀಡಿ 2 ವಿಕೆಟ್​ ಪಡೆದರೆ, ಇತ್ತ ಬುಮ್ರಾ 4 ಓವರ್ ಬೌಲ್​ ಮಾಡಿ 50 ರನ್ ನೀಡಿ ಪಮದ್ಯದಲ್ಲಿ ದುಬಾರಿ ಬೌಲರ್​ ಆದರು. ಅವರಂತೆ ಭುವನೇಶ್ವರ್ ಕುಮಾರ್ ಸಹ  4 ಓವರ್ ಬೌಲ್ ಮಾಡಿ 1 ವಿಕೆಟ್​ಗೆ 39 ರನ್ ನೀಡಿ ಇವರೂ ಸಹ ಇಂದು ಕಾಸ್ಟ್ಲಿ ಆದರು.  ಉಳಿದಂತೆ ಹರ್ಷಲ್ ಪಟೇಲ್ 2 ಓವರ್ ಮಾಡಿ 18 ರನ್ ನೀಡಿ 1 ವಿಕೆಟ್ ಪಡೆದರು.


ಇದನ್ನೂ ಓದಿ: Matthew Wade: 11 ತಿಂಗಳಲ್ಲಿ ಕೇವಲ 1 ಬಾರಿ ಔಟ್, ಕ್ಯಾನ್ಸರ್ ಗೆದ್ದವ ಇದೀಗ T20 ಕ್ರಿಕೆಟ್​ನ ಗ್ರೇಟ್​ ಫಿನಿಶರ್!


ಭಾರತ-ಆಸ್ಟ್ರೇಲಿಯಾ ತಂಡ:


ಭಾರತ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್,  ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.


ಇದನ್ನೂ ಓದಿ: MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್


ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಡೇನಿಯಲ್​ ಸ್ಯಾಮ್ಸ್, ಪ್ಯಾಟ್ ಕಮಿನ್ಸ್,  ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಜೋಶ್​ ಇಲ್ಲಿಂಗ್ಸ್

Published by:shrikrishna bhat
First published: