• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಮೊದಲ ಟೆಸ್ಟ್​ನಲ್ಲಿ ಸಿರಾಜ್​ಗೆ ಗಾಯ, ರಕ್ತ ಸುರಿಸಿಕೊಂಡು ಬೌಲಿಂಗ್​ ಮಾಡಿದ RCB ಬೌಲರ್​

IND vs AUS: ಮೊದಲ ಟೆಸ್ಟ್​ನಲ್ಲಿ ಸಿರಾಜ್​ಗೆ ಗಾಯ, ರಕ್ತ ಸುರಿಸಿಕೊಂಡು ಬೌಲಿಂಗ್​ ಮಾಡಿದ RCB ಬೌಲರ್​

ಮೊಹಮ್ಮದ್ ಸಿರಾಜ್​

ಮೊಹಮ್ಮದ್ ಸಿರಾಜ್​

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ದೆಹಲಿಯಲ್ಲಿ ಆರಂಭವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ಆರಂಭಿಸಿದೆ.

  • Share this:

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಂದು ಟೆಸ್ಟ್ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ (IND vs AUS) ಶುಕ್ರವಾರ ದೆಹಲಿಯಲ್ಲಿ ಪ್ರಾರಂಭವಾಗಿದೆ. ಟಾಸ್ ಗೆದ್ದ ಕಾಂಗರೂ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj)  ಪಂದ್ಯದ 4ನೇ ಓವರ್‌ನಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕೆಲಕಾಲ ಆಟವನ್ನು ನಿಲ್ಲಿಸಬೇಕಾಯಿತು. ಆ ನಂತರ ಎದುರಾಳಿ ಬ್ಯಾಟರ್‌ಗಳ ವಿರುದ್ಧ ಕೊಂಚ ಆಕ್ರಮಣಕಾರಿಯಾದರು. ಊಟದ ಹೊತ್ತಿಗೆ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿದೆ.


ಸಿರಾಜ್​ ಕೈಬೆರಳಿಗೆ ಗಾಯ:


ಇನಿಂಗ್ಸ್‌ನ 4ನೇ ಓವರ್‌ ಅನ್ನು ಮೊಹಮ್ಮದ್‌ ಸಿರಾಜ್‌ ಬೌಲ್‌ ಮಾಡುತ್ತಿದ್ದರು. ಮೂರನೇ ಎಸೆತದಲ್ಲಿ ಡೇವಿಡ್ ವಾರ್ನರ್ ನೇರ ಹೊಡೆತ ಸಿರಾಜ್​ ಕೈಗೆ ತಗಲುವ ಮೂಲಕ ಕೈ ಬೆರಳಿಗೆ ಪೆಟ್ಟಾಗಿದೆ. ಈ ವೇಳೆ ಕೈಗೆ ಪೆಟ್ಟು ಬಿದ್ದು ರಕ್ತ ಬರತೊಡಗಿತು. ಹೀಗಾಗಿ ಫಿಸಿಯೋ ಮೈದಾನಕ್ಕೆ ಬಂದು ಕೈಗೆ ಬ್ಯಾಂಡೇಜ್ ಹಾಕಿದರು. ಇದಾದ ಬಳಿಕ ಸಿರಾಜ್ ಆಕ್ರಮಣಕಾರಿ ಬೌಲಿಂಗ್​ನಿಂದಾಗಿ ವಾರ್ನರ್ ಗಾಯಗೊಂಡರು.ಮತ್ತೊಮ್ಮೆ ಡೇವಿಡ್ ವಾರ್ನರ್ ಮೊಹಮ್ಮದ್ ಸಿರಾಜ್ ಅವರ 5 ನೇ ಓವರ್‌ನ ಕೊನೆಯ ಬೌನ್ಸರ್ ಬಾಲ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಅದು ಬೌನ್ಸರ್ ಹೆಲ್ಮೆಟ್‌ಗೆ ಬಡಿಯಿತು. ವಾರ್ನರ್​ ಅಂತಿಮವಾಗಿ 44 ಎಸೆತಗಳಲ್ಲಿ 15 ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್​ ಒಪ್ಪಿಸಿದರು. ಮೊದಲ ಟೆಸ್ಟ್‌ನ ಕುರಿತು ಮಾತನಾಡುತ್ತಾ, ವಾರ್ನರ್​ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್ ಗಳಿಸಿದ್ದರು. ಮಾರ್ನಸ್ ಲಬುಶೆನ್ 18 ಮತ್ತು ಸ್ಟೀವ್ ಸ್ಮಿತ್ ಶೂನ್ಯ ರನ್ ಗಳಿಸುವ ಮೂಲಕ ಆಫ್ ಸ್ಪಿನ್ನರ್ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.


ಇದನ್ನೂ ಓದಿ: IND vs AUS: ಅಶ್ವಿನ್​ ದಾಳಿಗೆ ತತ್ತರಿಸಿದ ಆಸೀಸ್​, ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ಮೇಲುಗೈ


4 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ದೆಹಲಿಯ ಬಗ್ಗೆ ಮಾತನಾಡುವುದಾದರೆ, 1987 ರಿಂದ ಭಾರತ ಇಲ್ಲಿ ಸೋತಿರಲಿಲ್ಲ. ಈ ಅವಧಿಯಲ್ಲಿ ಭಾರತ ತಂಡ 12 ಟೆಸ್ಟ್ ಪಂದ್ಯಗಳನ್ನು ಆಡಿದೆ. 10 ಗೆದ್ದಿದ್ದರೆ, 2 ಪಂದ್ಯ ಡ್ರಾ ಆಗಿದೆ.


ಭಾರತ ತಂಡದ ಸೂಪರ್ ಬೌಲಿಂಗ್:


ಇನ್ನು, ಟೀಂ ಇಂಡಿಯಾ ಟಾಸ್​ ಸೋತು ಮೊದಲು ಬೌಲಿಂಗ್​ ಆರಂಭಿಸಿದೆ. ಭಾರತದ ಪರ ಮೊಹ್ಮಮದ್ ಸಿರಾಜ್​ ಆಸೀಸ್​ಗೆ ಆರಂಭಿಕ ಆಘಾತ ನೀಡಿದರು. ಅವರು 6 ಓವರ್​ಗೆ 1 ವಿಕೆಟ್​ ಪಡೆದರು. ರವಿಚಂದ್ರನ್​ ಅಶ್ವಿನ್​ ಸಹ ಇಂದು 10 ಓವರ್​ ಮಾಡಿ 29 ರನ್ ನೀಡಿ 2 ವಿಕೆಟ್​ ಪಡೆದಿದ್ದಾರೆ. ಹೀಗಾಗಿ ಭಾರತ ಸದ್ಯ ಮೇಲುಗೈ ಸಾಧಿಸಿದೆ.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್.

Published by:shrikrishna bhat
First published: