ಇಂದು ಭಾರತ ಮತ್ತು ಆಸ್ಟ್ರೇಲಿಯಾ (IND vs AUS) 2ನೇ ಟೆಸ್ಟ್ ಪಂದ್ಯದ 2ನೇ ದಿನದ ಭೋಜನ ವಿರಾಮ ನೀಡಲಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ನಡೆಯುತ್ತಿರುವ ಈ ಟೆಸ್ಟ್ ಪಂದ್ಯದ ಮೊದಲ ದಿನವೇ ಒಟ್ಟು 10 ವಿಕೆಟ್‌ಗಳು ಪತನಗೊಂಡವು. ಎರಡನೇ ದಿನದ ಭೋಜನ ವಿರಾಮದವರೆಗೂ ಭಾರತ ಎರಡನೇ ದಿನದಾಟದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 35 ಓವರ್ಗೆ 4 ವಿಕೆಟ್‌ಗೆ 88 ರನ್ ಗಳಿಸಿದೆ. ಮೊದಲ ಸೆಷನ್‌ನಲ್ಲಿ ನಾಥನ್ ಲಿಯಾನ್ (Nathan Leon) 4 ವಿಕೆಟ್ ಪಡೆದರು. ಮೊದಲ ದಿನ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 263 ರನ್ ಗಳಿಸಿತ್ತು.
100ನೇ ಪಂದ್ಯದಲ್ಲೇ ಎಡವಿದ ಪೂಜಾರ:
ಇನ್ನು, 2ನೇ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಆಸೀಸ್ ಬೌಲರ್ ನಾಥನ್ ಲಿಯಾನ್ ಶಾಕ್ ನೀಡಿದರು. ಅವರು ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಉರುಳಿಸಿದರು. ಭಾರತದ ಪರ ರೋಹಿತ್ ಶರ್ಮಾ 32 ರನ್, ಕೆಎಲ್ ರಾಹುಲ್ 17 ರನ್, ಚೇತೇಶ್ವರ್ ಪೂಜಾರ ಶೂನ್ಯ ಮತ್ತು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Lunch on Day 2 of the 2nd Test#TeamIndia 88/4, trail by 175 runs.
Scorecard - https://t.co/1DAFKevk9X #INDvAUS @mastercardindia pic.twitter.com/z7DtHitFyY
— BCCI (@BCCI) February 18, 2023
ಇದನ್ನೂ ಓದಿ: Team India: ಟೀಂ ಇಂಡಿಯಾ ಬ್ಯುಸಿ ಶೆಡ್ಯೂಲ್, IPL ಮುಗಿಯುತ್ತಿದ್ದಂತೆ ಶುರುವಾಗಲಿದೆ WTC
ಡೇವಿಡ್ ವಾರ್ನರ್ ಟೆಸ್ಟ್ ಪಂದ್ಯದಿಂದ ಔಟ್:
ಎರಡನೇ ದಿನದ ಆಟದಲ್ಲಿ ಆಸ್ಟ್ರೇಲಿಯಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಕಾಂಗರೂ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇನ್ನು ಮುಂದೆ ದೆಹಲಿ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಆಸೀಸ್ ಮಂಡಳಿ ತಿಳಿಸಿದೆ. ಮೊದಲ ದಿನ ಮೊಹಮ್ಮದ್ ಸಿರಾಜ್ ಎಸೆತಗಳಲ್ಲಿ ವಾರ್ನರ್ ಗಾಯಗೊಂಡಿದ್ದರು. ಕನ್ಕ್ಯುಶನ್ ಕಾರಣ, ಈಗ ಅವರ ಸ್ಥಾನದಲ್ಲಿ ಮ್ಯಾಟ್ ರೆನ್ಶಾ ನೆಲಕ್ಕೆ ಬಂದಿಳಿದರು.
ಟೆಸ್ಟ್ ಪಂದ್ಯದ ಮೊದಲ ದಿನವೇ ಆಲ್‌ರೌಂಡರ್ ರವೀಂದ್ರ ಜಡೇಜಾ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 250 ವಿಕೆಟ್ ಮತ್ತು 2500 ರನ್ ಗಳಿಸಿದ ಭಾರತ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸ್ತುತ ICC ಟೆಸ್ಟ್ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಟ್ ರೆನ್ಶಾ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ