3ನೇ ದಿನದಾಟಕ್ಕೆ ಆಸ್ಟ್ರೇಲಿಯಾ 132/4: ಉತ್ತಮ ಮುನ್ನಡೆಯತ್ತ ಕಾಂಗರೂ ಪಡೆ

2ನೇ ಇನ್ನಿಂಗ್ಸ್​ನಲ್ಲಿ ಓಪನರ್​ಗಳ ಪೈಕಿ ಮಾರ್ಕಸ್ ಹ್ಯಾರಿಸ್ 20 ರನ್ ಗಳಿಸಿರುವಾಗ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರೆ, ಆ್ಯರೋನ್ ಫಿಂಚ್ ಗಾಯಗೊಂಡಿದ್ದರಿಂದ ಮೈದಾನ ತೊರೆದಿದ್ದಾರೆ.

Vinay Bhat | news18
Updated:December 16, 2018, 3:38 PM IST
3ನೇ ದಿನದಾಟಕ್ಕೆ ಆಸ್ಟ್ರೇಲಿಯಾ 132/4: ಉತ್ತಮ ಮುನ್ನಡೆಯತ್ತ ಕಾಂಗರೂ ಪಡೆ
(Image: AP)
  • News18
  • Last Updated: December 16, 2018, 3:38 PM IST
  • Share this:
ಪರ್ತ್​: ಇಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ 2ನೇ ಇನ್ನಿಂಗ್ಸ್​ನಲ್ಲಿ 3ನೇ ದಿನದಾಟಕ್ಕೆ 4 ವಿಕೆಟ್ ಕಳೆದುಕೊಂಡು 132 ರನ್ ಕಲೆಹಾಕಿದೆ. ಈಗಾಗಲೇ 175 ರನ್​ಗಳ ಲೀಡ್​ನಲ್ಲಿರುವ ಕಾಂಗರೂ ಪಡೆ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ.

ಭಾರತವನ್ನು 283 ರನ್​ಗೆ ಆಲೌಟ್ ಮಾಡಿ 2ನೇ ಇನ್ನಿಂಗ್ಸ್​ ಆರಂಭಿಸಿದ ಆಸೀಸ್ ಬಹು ಬೇಗನೆ ವಿಕೆಟ್ ಕಳೆದುಕೊಂಡಿತು. ಓಪನರ್​ಗಳ ಪೈಕಿ ಮಾರ್ಕಸ್ ಹ್ಯಾರಿಸ್ 20 ರನ್ ಗಳಿಸಿರುವಾಗ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರೆ, ಆ್ಯರೋನ್ ಫಿಂಚ್ ಗಾಯಗೊಂಡಿದ್ದರಿಂದ ಮೈದಾನ ತೊರೆದರು. ಬಳಿಕ ಬಂದ ಶಾನ್ ಮಾರ್ಶ್(5), ಪೀಟರ್ ಹ್ಯಾಂಡ್ಸ್​ಕಾಂಬ್(13) ಹಾಗೂ ಟ್ರಾವಿಸ್ ಹೆಡ್(19) ಬೇಗನೆ ನಿರ್ಗಮಿಸಿದರು. ಆದರೆ, ಕ್ರೀಸ್ ಕಚ್ಚಿ ನಿಂತಿರುವ ಉಸ್ಮಾನ್ ಖ್ವಾಜಾ 41 ಹಾಗೂ ನಾಯಕ ಟಿಮ್ ಪೈನ್ 8 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: (VIDEO): ನಾಟೌಟ್ ಆಗಿದ್ದರು ಕೊಹ್ಲಿಯನ್ನು ಪೆವಿಲಿಯನ್​ಗೆ ಅಟ್ಟಿದ ಥರ್ಡ್​ ಅಂಪೈರ್

ಇದಕ್ಕೂ ಮೊದಲು  ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 326 ರನ್​ಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಭಾರತ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತ್ತು. ಟೀಂ ಇಂಡಿಯಾಕ್ಕೆ ಬೆನ್ನೆಲುಬಾಗಿ ನಿಂತ ವಿರಾಟ್ ಕೊಹ್ಲಿ(123) ಶತಕದ ಆಟ ಆಡಿದರಾದರು ಇವರಿಗೆ ಉಳಿದ ಬ್ಯಾಟ್ಸ್​ಮನ್​ಗಳು ಸಾತ್ ನೀಡಲಿಲ್ಲ. ದಿನದ ಆರಂಭಲ್ಲೇ ಅಜಿಂಕ್ಯ ರಹಾನೆ(51) ವಿಕೆಟ್ ಕಳೆದುಕೊಂಡಿತು.

ಬಳಿಕ ಹನುಮ ವಿಹಾರಿ ಜೊತೆಯಾದ ಕೊಹ್ಲಿ ಅಮೋಘ ಆಟ ಪ್ರದರ್ಶಿಸಿದರು. 50 ರನ್​ಗಳ ಕಾಣಿಕೆ ನೀಡಿದ ಕೊಹ್ಲಿ-ವಿಹಾರಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ಮಧ್ಯೆ ಕೊಹ್ಲಿ ಶತಕದ ಮಿಂಚು ಹರಿಸಿದರೆ, ವಿಹಾರಿ 20 ರನ್​ಗೆ ನಿರ್ಗಮಿಸಿದರು. ಶತಕದ ಬಳಿಕ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 123 ರನ್ ಗಳಿಸಿರುವಾಗ ಪ್ಯಾಟ್ ಕಮಿನ್ಸಿ ಎಸೆತದಲ್ಲಿ ಕೊಹ್ಲಿ ನಿರ್ಗಮಿಸಿದರು.

ಇದನ್ನೂ ಓದಿ: ಭಾರತ 283 ಆಲೌಟ್: 43 ರನ್​ಗಳ ಹಿನ್ನಡೆ

ಬಳಿಕ ಬಂದ ಬೆನ್ನಲ್ಲೆ ಮೊಹಮ್ಮದ್ ಶಮಿ ಶೂನ್ಯಕ್ಕೆ ನಿರ್ಗಮಿಸಿದರೆ, ಇಶಾಂತ್ ಶರ್ಮಾ 1 ರನ್​ಗೆ ಸುಸ್ತಾದರು. ರಿಷಭ್ ಪಂತ್ ಒಂದಿಷ್ಟೊತ್ತು ಬ್ಯಾಟ್ ಬೀಸಿದರಾದರು ಅಂತಿಮವಾಗಿ 36 ರನ್​ಗೆ ಔಟ್ ಆದರು. ಜಸ್​ಪ್ರೀತ್ ಬುಮ್ರಾ 4 ರನ್​ಗೆ ಔಟ್ ಆಗುವ ಮೂಲಕ ಭಾರತ 43 ರನ್​ಗಳ ಹಿನ್ನಡೆಯೊಂದಿಗೆ 283 ರನ್​ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ನೇಥನ್ ಲ್ಯಾನ್ 5 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್​, ಜೋಶ್ ಹ್ಯಾಜ್ಲೆವುಡ್ ತಲಾ 2 ವಿಕೆಟ್ ಪಡೆದರು.
First published: December 16, 2018, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading