IND vs AUS: ನಾಳೆ ಭಾರತ-ಆಸ್ಟ್ರೇಲಿಯಾ 2ನೇ ಪಂದ್ಯ, ಡು ಆರ್​ ಡೈ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್​ 11

IND vs AUS: ಭಾರತ ತಂಡ ಮೊದಲ ಪಂದ್ಯವನ್ನು ಸೋತ ನಂತರ ಸರಣಿಯಲ್ಲಿ 1-0 ಹಿನ್ನಡೆ ಹೊಂದಿದೆ. ಟೀಂ ಇಂಡಿಯಾ ಸರಣಿ ಗೆಲ್ಲಲು ಉಳಿದಿರುವ ಎರಡು ಟಿ20 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಈಗ ಅವರಿಗೆ ಎರಡೂ ಪಂದ್ಯಗಳು ನಾಕೌಟ್‌ಗಳಂತಾಗಿದೆ. ಮೂರನೇ ಟಿ20 ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ.

IND vs AUS

IND vs AUS

  • Share this:
ಭಾರತ ಮತ್ತು ಆಸ್ಟ್ರೇಲಿಯಾ (IND v AUS) ನಡುವಿನ 3 ಪಂದ್ಯಗಳ ಸರಣಿಯ ಎರಡನೇ T20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಶುಕ್ರವಾರ (ಸೆಪ್ಟೆಂಬರ್ 23) ನಾಗ್ಪುರದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಸರಣಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.  ಟಿ20 ವಿಶ್ವಕಪ್ (T20 World Cup) ತಯಾರಿಯ ಭಾಗವಾಗಿ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ನಾಳೆ ನಡೆಯಲಿರುವ ಪಂದ್ಯದ ಪಿಚ್​ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್​ 11 (Playing 11) ಸೇರಿದಂತೆ ಎಲ್ಲಾ ಅಂಶಗಳನ್ನು ನೋಡೋಣ ಬನ್ನಿ.

ಪಂದ್ಯದ ವಿವರ: 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಸಂಜೆ 7.00 ರಿಂದ ನಡೆಯಲಿದೆ. ಟಾಸ್ ಸಂಜೆ 6:30ಕ್ಕೆ ನಡೆಯಲಿದೆ. ಈ ಸರಣಿಯನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರವನ್ನು ವೀಕ್ಷಿಸಬಹುದು.  ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಪಂದ್ಯದ ಲೈವ್ ಅಪ್‌ಡೇಟ್‌ಗಳಿಗಾಗಿ News 18 Kannada ವೆಬ್‌ಸೈಟ್ ಅನುಸರಿಸಿ.

ಪಿಚ್​ ರಿಪೋರ್ಟ್:

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಸುಮಾರು ಮೂರು ವರ್ಷಗಳ ಅಂತರದ ನಂತರ T20I ಪಂದ್ಯ ನಡೆಯುತ್ತಿದೆ. ಕೊನೆಯ ಪಂದ್ಯವು ನವೆಂಬರ್ 2019 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದಿತ್ತು. ಒಟ್ಟಾರೆಯಾಗಿ, ಇಲ್ಲಿ ಒಟ್ಟು 56 ಟಿ20 ಪಂದ್ಯಗಳಲ್ಲಿ ಸರಾಸರಿ ಸ್ಕೋರ್ 144 ಆಗಿದೆ. ರಾತ್ರಿಯ ನಂತರ ಇಬ್ಬನಿ ನೆಲೆಗೊಳ್ಳುವ ಸಾಧ್ಯತೆಯಿರುವುದರಿಂದ, ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಹವಾಮಾನ ವರದಿಯ ಪ್ರಕಾರ ನಾಳೆ ನಾಗ್ಪುರದಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಅಡ್ಡಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: IND vs AUS: ಭಾರತ-ಆಸ್ಟ್ರೇಲಿಯಾ ಪಂದ್ಯ, ಟಿಕೆಟ್​ಗಾಗಿ ನೂಕುನುಗ್ಗಲು; ಹಲವರು ಆಸ್ಪತ್ರೆಗೆ ದಾಖಲು

ಬದಲಾವಣೆ ಸಾಧ್ಯತೆ:

ಇನ್ನು, ಭಾರತ ತನ್ನ ಮೊದಲ ಪಂದ್ಯದಲ್ಲಿ 209 ರನ್​ಗಳ ಟಾರ್ಗೆಟ್​ ನೀಡಿದ್ದರೂ ಅದನ್ನು ಡಿಪೆಂಡ್​ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಬೌಲಿಂಗ್​ ನಲ್ಲಿ ತಂಡವು ಕಳಪೇ ಪ್ರದರ್ಶನ ನೀಡಿತು. ಹೀಗಾಗಿ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಬೌಲಿಂಗ್​ ವಿಭಾಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಅದರಲ್ಲಿಯೂ ತಂಡಕ್ಕೆ ಬುಮ್ರಾ ಅವರನ್ನು ಮತ್ತೆ ಪ್ಲೇಯಿಂಗ್​ 11 ನಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗದಲ್ಲಿ ಡೆತ್​ ಓವರ್​ಗಳಲ್ಲಿನ ಸಮಸ್ಯೆ ಬಗೆಹರಿಯಲಿದೆ.

ಇದನ್ನೂ ಓದಿ:  Pro Kabaddi Season 9: ಕಬಡ್ಡಿ ಪ್ರಿಯರಿಗೆ ಗುಡ್‌ ನ್ಯೂಸ್‌, 9ನೇ ಸೀಸನ್​ ಪ್ರೊ ಕಬಡ್ಡಿ ಲೀಗ್‌ ಸಂಪೂರ್ಣ ವೇಳಾಪಟ್ಟಿ ಪ್ರಕಟ

IND vs AUS ಸಂಭಾವ್ಯ ತಂಡ:

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್,
ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ , ಯುಜ್ವೇಂದ್ರ ಚಹಾಲ್.

ಆಸ್ಟ್ರೇಲಿಯಾ ಸಂಭಾವ್ಯ ತಂಡ: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.
Published by:shrikrishna bhat
First published: