IND vs AUS: ಇಂದಿನ ಭಾರತ-ಆಸ್ಟ್ರೇಲಿಯಾ ಪಂದ್ಯ ನಡೆಯೋದು ಡೌಟ್​, ಕಾರಣ ಇದು!

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯವು ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಇಂದಿನ ಪಂದ್ಯವು ನಡೆಯುವುದು ಅನುಮಾನ ಎನ್ನಲಾಗಿದೆ.

IND vs AUS

IND vs AUS

  • Share this:
ಭಾರತ ಮತ್ತು ಆಸ್ಟ್ರೇಲಿಯಾ (IND v AUS) ನಡುವಿನ 3 ಪಂದ್ಯಗಳ ಸರಣಿಯ ಎರಡನೇ T20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ (Vidarbha Cricket Association Stadium) ನಡೆಯಲಿದೆ. ಇಂದಿನ ಪಂದ್ಯವು ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇಂದಿನ ಪಂದ್ಯ ಗೆದ್ದಲ್ಲಿ ಮಾತ್ರ ಟೀಂ ಇಂಡಿಯಾ ಸರಣಿಯಲ್ಲಿ ಜೀವಂತವಾಗಿ ಉಳಿಯಲಿದೆ. ಆದರೆ ಇಂದಿನ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಹೌದು, ನಾಗ್ಪುರದಲ್ಲಿ (Nagpur) ಕಳೆದ ದಿನದಿಂದ  ಮಳೆಯ (Rain) ಅಬ್ಬರ ಜೋರಾಗಿದೆ. ಅಲ್ಲದೇ ಇಂದು ಸಹ ಸಂಜೆಯ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಾಗಿದೆ.

ಭಾರತ-ಆಸೀಸ್​ ಪಂದ್ಯಕ್ಕೆ ವರುಣನ ಅಡ್ಡಿ?:

ಹೌದು, ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯ ನಡೆಯಲಿದೆ. ಆದರೆ ನಾಗ್ಪುರದಲ್ಲಿ ನಿನ್ನೆಯಿಂದ  ನಿರಂತರವಾಗಿ ಮಳೆ ಸುರಿಯುತ್ತಿದೆ. ನಿನ್ನೆ (ಗುರುವಾರ) ಸತತ ಮಳೆಯ ಕಾರಣ  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಭ್ಯಾಸ ಮಾಡಲಿಲ್ಲ. ಹೀಗಾಗಿ ಇಂದೂ ಸಹ ಮಳೆಯು ಬೆಳಗಿನಿಂದ ಸುರಿಯುತ್ತಿದ್ದು, ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಸಂಜೆ ವೇಳೆ ಮಳೆ ಬರುವ ಸಂಭವವಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಹವಾಮಾನ ವರದಿಯ ಪ್ರಕಾರ ಇಂದು ನಾಗ್ಪುರದಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಅಡ್ಡಿಯಾಗುವ ಸಾಧ್ಯತೆ ಇದೆ.

VCA ಸ್ಟೇಡಿಯಂನಲ್ಲಿ ಭಾರತದ T20I ದಾಖಲೆ:

ಟಿ20 ಕ್ರಿಕೆಟ್‌ನಲ್ಲಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಭಾರತ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ನಾಲ್ಕರಲ್ಲಿ, ಮೆನ್ ಇನ್ ಬ್ಲೂ ಎರಡರಲ್ಲಿ ಗೆದ್ದಿದ್ದರೆ, ಇನ್ನೆರಡರಲ್ಲಿ ಸೋತಿದೆ. 2009ರಲ್ಲಿ ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ಸೋತಿತ್ತು. 2016ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು 47 ರನ್‌ಗಳಿಂದ ಸೋಲಿಸಿತು. ನಾಗ್ಪುರದಲ್ಲಿ ಭಾರತಕ್ಕೆ ಮೊದಲ ಜಯ ಸಿಕ್ಕಿದ್ದು ಇಂಗ್ಲೆಂಡ್ ವಿರುದ್ಧ. ಅದ್ಭುತ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೆರವಿನಿಂದ. 2019 ರಲ್ಲಿ, ನಾಗ್ಪುರದಲ್ಲಿ ಭಾರತವು ತನ್ನ ಎರಡನೇ ಗೆಲುವನ್ನು ದಾಖಲಿಸಿದಾಗ ದೀಪಕ್ ಚಹಾರ್ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: Irfan Pathan: ಸೌದಿ ಮಾಡೆಲ್ ಫಸ್ಟ್​ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ಪಠಾಣ್​, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?

ಪಿಚ್ ವರದಿ:

ವಿಕೆಟ್ ಬ್ಯಾಟಿಂಗ್ ಸ್ನೇಹಿ ಮೇಲ್ಮೈಯಾಗಿದ್ದು, ಇಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ವೇಗಿಗಳು ಪಂದ್ಯದ ಉತ್ತರಾರ್ಧದಲ್ಲಿ ಸ್ವಲ್ಪ ಸಹಾಯವನ್ನು ಪಡೆಯಬಹುದು. ಈ ಮೈದಾನದಲ್ಲಿ ಚೇಸಿಂಗ್ ಸೂಕ್ತ ಆಯ್ಕೆಯಾಗಿದೆ.  ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 178 ರನ್ ಆಗಿದ್ದು,  ಎರಡನೇ ಬ್ಯಾಟಿಂಗ್ ಮಾಡುವ ತಂಡವು ಉತ್ತಮ ದಾಖಲೆಗಳನ್ನು ಹೊಂದಿದೆ. ಹೀಗಾಗಿ ಟಾಸ್​ ಗೆದ್ದ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Irfan Pathan: ಸೌದಿ ಮಾಡೆಲ್ ಫಸ್ಟ್​ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ಪಠಾಣ್​, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?

IND vs AUS ಸಂಭಾವ್ಯ ತಂಡ:

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ , ಯುಜ್ವೇಂದ್ರ ಚಹಾಲ್.

ಆಸ್ಟ್ರೇಲಿಯಾ ಸಂಭಾವ್ಯ ತಂಡ: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.
Published by:shrikrishna bhat
First published: