ಬಾರ್ಡರ್‌-ಗವಾಸ್ಕರ್‌ ಟೆಸ್ಟ್ ಸರಣಿ: ನಾಳೆಯಿಂದ ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಪಂದ್ಯ

ಭಾರತ ತಂಡಕ್ಕೆ ಸರಣಿ ಆರಂಭದಲ್ಲೇ ಗಾಯದ ಸಮಸ್ಯೆ ಎದುರಾಗಿದ್ದು ಯುವ ಆಟಗಾರ ಪೃಥ್ವಿ ಶಾ ನಾಳಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

zahir | news18
Updated:December 5, 2018, 10:21 PM IST
ಬಾರ್ಡರ್‌-ಗವಾಸ್ಕರ್‌ ಟೆಸ್ಟ್ ಸರಣಿ: ನಾಳೆಯಿಂದ ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಪಂದ್ಯ
Tim Paine and Virat Kohli
zahir | news18
Updated: December 5, 2018, 10:21 PM IST
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್​ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. ಭಾರತದ ಕಾಲಮಾನ ಬೆಳಿಗ್ಗೆ 5.30 ಕ್ಕೆ ಅಡಿಲೇಡ್​ನ ಓವಲ್​ ಕ್ರೀಡಾಂಗಣದಲ್ಲಿ ಬಾರ್ಡರ್‌-ಗವಾಸ್ಕರ್‌ ಸರಣಿಯ ಮೊದಲ ಪಂದ್ಯ ಶುರುವಾಗಲಿದೆ. ತವರಿನಲ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿ ಜಯಿಸಿ ಆತ್ಮ ವಿಶ್ವಾಸದಲ್ಲಿರುವ ಟೀಂ ಇಂಡಿಯಾಗೆ ಆಸೀಸ್ ವಿರುದ್ಧದ ಟೆಸ್ಟ್​ ಸರಣಿ ಅಗ್ನಿ ಪರೀಕ್ಷೆ ಆಗಿರಲಿದೆ ಎನ್ನಲಾಗಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿದ್ದು, ಸರಣಿ ಜಯಿಸುವ ಆತ್ಮ ವಿಶ್ವಾಸದಲ್ಲಿದ್ದಾರೆ. ಆದರೆ ಆಸ್ಟ್ರೇಲಿಯಾದ ಪುಟಿದೇಳುವ ಪಿಚ್​ನಲ್ಲಿ ಕಾಂಗರೂ ಬೌಲರ್​ಗಳನ್ನು ಎದುರಿಸಲು ಸಕಲ ತಯಾರಿಯಲ್ಲಿರುವ  ಟೀಂ ಇಂಡಿಯಾ ಪಾಲಿಗೆ ಇದು ಮಹತ್ವದ ಸರಣಿಯಾಗಿದೆ. ಈ ಪ್ರವಾಸದ ಬಳಿಕ ಭಾರತ ತಂಡವು ವಿಶ್ವಕಪ್​ನತ್ತ ಗಮನ ಹರಿಸಲಿದೆ. ಇಲ್ಲಿ ಮುಖ್ಯವಾಗಿ ವೇಗದ ಪಿಚ್​ಗೆ ಹೊಂದಿಕೊಳ್ಳಲು ದಾಂಡಿಗರು ಹೆಚ್ಚು ಗಮನ ಹರಿಸಲಿದ್ದಾರೆ. ಮುಂಬರುವ ವರ್ಲ್ಡ್​ಕಪ್ ಇಂಗ್ಲೆಂಡ್​ನಲ್ಲಿ ನಡೆಯಲಿರುವುದರಿಂದ ಆಟಗಾರರಿಗೆ ವೇಗದ ಪಿಚ್​ನಲ್ಲಿ ಆಡುವ ಉತ್ತಮ ಅವಕಾಶ ಆಸ್ಟ್ರೇಲಿಯಾ ಪ್ರವಾಸದಲ್ಲಿ ದೊರೆತಿದೆ.

ಇನ್ನು ಟಿಮ್ ಪೆನ್​ ನೇತೃತ್ವದ ಆಸ್ಟ್ರೇಲಿಯಾ ತಂಡವೂ ಇತ್ತೀಚೆಗೆ ಪಾಕಿಸ್ತಾನ ಎದುರಿನ ಟೆಸ್ಟ್‌ ಸರಣಿಯಲ್ಲಿ ಹೀನಾಯವಾಗಿ ಸೋತಿತ್ತು. ತಂಡದ ಈ ವೈಫಲ್ಯದಿಂದ ಹೊರ ಬರಲು ಉತ್ತಮ ವೇದಿಕೆ ತವರಿನಲ್ಲಿ ದೊರೆತಿದ್ದು, ಹೀಗಾಗಿ ಆಸೀಸ್ ಆಟಗಾರರು ಗೆಲುವಿಗಾಗಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಭಾರತ ತಂಡಕ್ಕೆ ಸರಣಿ ಆರಂಭದಲ್ಲೇ ಗಾಯದ ಸಮಸ್ಯೆ ಎದುರಾಗಿದ್ದು ಯುವ ಆಟಗಾರ ಪೃಥ್ವಿ ಶಾ ನಾಳಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಆಡುವ ಹನ್ನೊಂದರಲ್ಲಿ ಮುರಳಿ ವಿಜಯ್ ಅಥವಾ ಕನ್ನಡಿಗ ಕೆ.ಎಲ್ ರಾಹುಲ್​ಗೆ ಸ್ಥಾನ ಸಿಗುವ ಚಾನ್ಸ್​ ಅಧಿಕವಿದೆ. ಹಾಗೆಯೇ ಒಂದು ವರ್ಷದ ಬಳಿಕ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದು, ನಾಳಿನ ಪಂದ್ಯಕ್ಕೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ತಂಡಗಳು ಇಂತಿವೆ
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಚೇತೇಶ್ವರ ಪೂಜಾರ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ರಿಷಭ್‌ ಪಂತ್‌, ಪಾರ್ಥೀವ್‌ ಪಟೇಲ್‌, ಮುರಳಿ ವಿಜಯ್‌, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ ಮತ್ತು ಭುವನೇಶ್ವರ ಕುಮಾರ್‌.

ಇದನ್ನೂ ಓದಿ: 6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Loading...

ಆಸ್ಟ್ರೇಲಿಯಾ: ಟಿಮ್‌ ಪೇನ್‌ (ನಾಯಕ), ಮಾರ್ಕಸ್‌ ಹ್ಯಾರಿಸ್‌, ಜೋಶ್‌ ಹ್ಯಾಜಲ್‌ವುಡ್‌, ಮಿಷೆಲ್‌ ಮಾರ್ಷ್‌, ಪ್ಯಾಟ್‌ ಕಮಿನ್ಸ್‌, ಆರೋನ್ ಫಿಂಚ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌ ಟ್ರಾವಿಸ್‌ ಹೆಡ್‌, ಉಸ್ಮಾನ್‌ ಖ್ವಾಜಾ, ನೇಥನ್‌ ಲಿಯೊನ್‌,  ಪೀಟರ್‌ ಹ್ಯಾಂಡ್ಸ್‌ಕಂಬ್‌,  ಶಾನ್‌ ಮಾರ್ಷ್‌, ಪೀಟರ್‌ ಸಿಡ್ಲ್‌, ಮಿಷೆಲ್‌ ಸ್ಟಾರ್ಕ್‌ ಮತ್ತು ಕ್ರಿಸ್‌ ಟ್ರೆಮೈನ್‌.
First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ