IND vs AUS: ಭರ್ಜರಿ ಆಟ ಆಡುತ್ತಿರುವ ರಾಹುಲ್​, ಭಾರತ 4ನೇ ವಿಕೆಟ್​ ಪತನ

IND vs AUS: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಈಗಾಗಲೇ ಟಾಸ್​ ಗೆದ್ದ ಆಸೀಸ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

IND vs AUS

IND vs AUS

  • Share this:
ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (Punjab Cricket Association) ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್​ ಪಿಂಚ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್​ ಆರಂಭಿಸಿದೆ. ಇಂದು ರಾಹುಲ್​ ಮತ್ತು ನಾಯಕ ರೋಹಿತ್​ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದುದ್ದು, ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ.



ಕೆಎಲ್ ರಾಹುಲ್​ ಭರ್ಜರಿ ಬ್ಯಾಟಿಂಗ್​:

ಆರಂಭಿಕರಾಗಿ ನಾಯಕ ರೋಹಿತ್​ ಜೊತೆ ಕಣಕ್ಕಿಳಿದ ಕನ್ನಡಿಗ ಕೆಎಲ್ ರಾಹುಲ್ ಆಸೀಸ್​ ವಿರುದ್ಧ ಭರ್ಜರಿಯಾ್ಗಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಅನೇಕ ದಿನಗಳಿಂದ ಕಳಪೆ ಫಾರ್ಮ್​ನಿಂದ ಕೂಡಿದ್ದ ರಾಹುಲ್​ ಇಂದು ಸೂಪರ್​ ಬ್ಯಾಟಿಂಗ್​ ಮಾಡಿದರು. ಭಾರತದ 3ನೇ ವಿಕೆಟ್​ ಪತನವಾಗಿದ್ದು, ಉತ್ತಮವಾಗಿ ಆಟವಾಡುತ್ತಿದ್ದ ರಾಹುಲ್​ 35 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೊರ್​ ನೆರವಿನಿಂದ 55 ರನ್ ಗಳಿಸಿ ಜೋಶ್ ಹ್ಯಾಝಲ್‌ವುಡ್ ಬೌಲಿಂಗ್​ ನಲ್ಲಿ ವಿಕೆಟ್​ ಒಪ್ಪಿಸಿದರು.

ಭಾರತ ತಂಡಕ್ಕೆ ಆರಂಭಿಕ ಆಘಾತ:

ಭಾರತ ತಂಡದ ನಾಯಕ ರೋಹಿತ್​ ಶರ್ಮಾ 1 ಸಿಕ್ಸ್ 1 ಪೋರ್​ ನೆರವಿನಿಂದ ಕೇವಲ 11 ರನ್ ಗಳಿಸಿ ಜೋಶ್ ಹ್ಯಾಝಲ್‌ವುಡ್ ಬೌಲಿಂಗ್​ ನಲ್ಲಿ ವಿಕೆಟ್​ ಒಪ್ಪಿಸಿದರು.

ನಂತರ ಬಂದ ವಿರಾಟ್​ ಕೊಹ್ಲಿ 7 ಬೌಲ್​ ಆಡಿ ಕೇವಲ 2 ರನ್​ ಗಳಿಸಿ ನಾಥಾನ್​ ನೀಲ್ಸ್ ಬೌಲಿಂಗ್​ ನಲ್ಲಿ ಕ್ಯಾಮೆರಾನ್ ಗ್ರೀನ್​ ಗೆ ಕ್ಯಾಚ್​ ನೀಡಿ ಔಟ್​ ಆದರು.

ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ಕ್ಯಾಮರೂನ್​ ಗ್ರೀನ್​ ಅವರಿಗೆ ವಿಕೆಟ್​ ಒಪ್ಪಿಸಿದರು. ಅವರು 4 ಭರ್ಜರಿ ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 46 ರನ್ ಗಳಿಸಿ ಅರ್ಧಶತಕ ವಂಚಿತರಾದರು.

ಇದನ್ನೂ ಓದಿ: ICC Cricket Rules: ಅಕ್ಟೋಬರ್ 1 ರಿಂದ ಹೊಸ ನಿಯಮ, ಬೌಲರ್​ ಈ ರೀತಿ ಮಾಡಿದ್ರೆ ಬ್ಯಾಟ್ಸ್​ಮನ್​ಗೆ ಸಿಗುತ್ತೆ 5 ರನ್

ರಿಷಭ್ ಪಂತ್​-ಬುಮ್ರಾ ಔಟ್​:‘

ಇನ್ನು, ಇಂದಿನ ಆಸೀಸ್​ ಪಂದ್ಯದಲ್ಲಿ ರಿಷಭ್ ಪಂತ್​ ಪ್ಲೇಯಿಂಗ್​ 11ನಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ವಿಕೆಟ್​ ಕೀಪರ್​ ಕಂ ಬ್ಯಾಟ್ಸ್​ಮನ್​ ಆಗಿ ದಿನೇಶ್​ ಕಾರ್ತಿಕ್​ ಪ್ಲೇಯಿಂಗ್​ 11 ನಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೇ ಕೆಎಲ್ ರಾಹುಲ್-ರೋಹಿತ್ ಶರ್ಮಾ  ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇದಲ್ಲದೇ ಪಂತ್​ ಜೊತೆ ಬುಮ್ರಾ ಸಹ ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Irfan Pathan: ಸೌದಿ ಮಾಡೆಲ್ ಫಸ್ಟ್​ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ಪಠಾಣ್​, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?

ಪಿಚ್​ ವರದಿ:

ಇನ್ನು, ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್ ಸ್ನೇಹಿ ಮೇಲ್ಮೈಯಾಗಿದ್ದು, ಇಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ವೇಗಿಗಳು ಪಂದ್ಯದ ಉತ್ತರಾರ್ಧದಲ್ಲಿ ಸ್ವಲ್ಪ ಪ್ರಭಾವ ಬೀರುವ ಸಾಧ್ಯತೆ ಇದೆ.  ಈ ಮೈದಾನದಲ್ಲಿ ಚೇಸಿಂಗ್ ಸೂಕ್ತ ಆಯ್ಕೆಯಾಗಿದೆ.

ಭಾರತ-ಆಸೀಸ್​ ಪ್ಲೇಯಿಂಗ್​ 11:

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್.

ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್.
Published by:shrikrishna bhat
First published: