India vs New Zealand 3rd T20: ಟೀಂ ಇಂಡಿಯಾ ಗೆಲುವಿಗೆ ಬೃಹತ್​ ಗುರಿ; ಇತಿಹಾಸ ನಿರ್ಮಿಸಲಿದೆಯಾ ರೋಹಿತ್ ಪಡೆ?

India vs New Zealand 3rd T20:

zahir | news18
Updated:February 10, 2019, 3:16 PM IST
India vs New Zealand 3rd T20: ಟೀಂ ಇಂಡಿಯಾ ಗೆಲುವಿಗೆ ಬೃಹತ್​ ಗುರಿ; ಇತಿಹಾಸ ನಿರ್ಮಿಸಲಿದೆಯಾ ರೋಹಿತ್ ಪಡೆ?
ಸಾಂದರ್ಭಿಕ ಚಿತ್ರ
zahir | news18
Updated: February 10, 2019, 3:16 PM IST
ಹ್ಯಾಮಿಲ್ಟನ್: ಇಲ್ಲಿನ ಸೆಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಭಾರತಕ್ಕೆ ಬೃಹತ್ ಮೊತ್ತದ ಗುರಿ ನೀಡಿದೆ. ಆರಂಭಿಕ ಆಟಗಾರರ ಸ್ಫೋಟಕ ಆಟದ ನೆರವಿನಿಂದ ಕಿವೀಸ್ ತಂಡ​ 213 ರನ್​ಗಳ ಟಾರ್ಗೆಟ್​ ಒಡ್ಡಿದೆ.

ಟಾಸ್​ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಇಳಿದ ಕಿವೀಸ್​ ತಂಡದ ಆರಂಭಿಕರಾರದ ಟಿಮ್ ಸೀಫ‌ರ್ಟ್‌ ಮತ್ತು ಕಾಲಿನ್‌ ಮುನ್ರೊ ಉತ್ತಮ ಅಡಿಪಾಯ ಒದಗಿಸಿಕೊಟ್ಟರು. ಮೊದಲ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡಿದರು. 25 ಎಸೆತಗಳಲ್ಲಿ 43 ರನ್​ ಸಿಡಿಸಿದ ವೇಳೆ ಸೀಫರ್ಟ್​ ಕುಲ್ದೀಪ್​ ಬೌಲಿಂಗ್​ನಲ್ಲಿ ಸ್ಟಂಪ್​ ಆಗುವ ಮೂಲಕ ಹೊರ ನಡೆದರು. ಇನ್ನು 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸ್​ಗಳ ಮೂಲಕ ಭಾರತೀಯ ಬೌಲರ್​ಗಳನ್ನು ದಂಡಿಸಿದ ಮುನ್ರೋ 40 ಎಸೆತಗಳಲ್ಲಿ 76 ರನ್​ಗಳಿಸಿ ಕುಲ್ದೀಪ್​ ಎಸೆತದಲ್ಲಿ ಪಾಂಡ್ಯಗೆ ಕ್ಯಾಚಿತ್ತು ನಿರ್ಗಮಿಸಿದರು.

ತಂಡದ ಎರಡು ಪ್ರಮುಖ ವಿಕೆಟ್​ ಕಳೆದುಕೊಳ್ಳುವ ವೇಳೆಗೆ ನ್ಯೂಜಿಲೆಂಡ್​ ತಂಡದ ಮೊತ್ತವು 10 ಸರಾಸರಿಯಲ್ಲಿ 14 ಓವರ್​ಗೆ 140 ರನ್​ಗಳ ಗಡಿದಾಟಿತ್ತು. ಇನ್ನು ನಾಯಕ ಕೇನ್ ವಿಲಿಯಮ್ಸನ್‌ ಅವರು 27 ರನ್​ಗಳಿಸಿ ಯುವ ಬೌಲರ್​ ಖಲೀಲ್​ ಅಹ್ಮದ್​ಗೆ ವಿಕೆಟ್ ಒಪ್ಪಿಸಿದರು.

ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (30) ಮತ್ತು ಡಾರಿನ್ ಮಿಚೆಲ್(19) ಮತ್ತು ರಾಸ್​ ಟೇಲರ್​ (14) ಕೊನೆಯ ಓವರ್​ಗಳಲ್ಲಿ ಅಬ್ಬರಿಸುವ ಮೂಲಕ ತಂಡವನ್ನು ಇನ್ನೂರ ಗಡಿದಾಟಿಸಿದರು. ಈ ಮೂಲಕ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 212 ರನ್​ಗಳ ಬೃಹತ್ ಮೊತ್ತವನ್ನು ಟೀಂ ಇಂಡಿಯಾ ಮುಂದಿಟ್ಟಿದೆ. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಇದೇ ಮೊದಲ ಬಾರಿಗೆ ಕಿವೀಸ್​ ನೆಲದಲ್ಲಿ ಟಿ20 ಸರಣಿ ಗೆದ್ದ ಹೆಗ್ಗಳಿಕೆ ರೋಹಿತ್​ ಶರ್ಮಾ ಪಡೆ ಪಾಲಾಗಲಿದೆ.

ಇದನ್ನೂ ಓದಿ: ಯಜಮಾನ-ಮಿಠಾಯಿ ಸೂರಿ: ಖತರ್ನಾಕ್ ಖಳನಾಗಿ ಡಾಲಿ ಧನಂಜಯ್!

ಇತ್ತೀಚಿನ ವರದಿ ಬಂದಾಗ ಟೀಂ ಇಂಡಿಯಾ 12 ಓವರ್​ಗೆ 3 ವಿಕೆಟ್​ ನಷ್ಟಕ್ಕೆ 121 ರನ್​ಗಳಿಸಿದೆ. ಧವನ್(5) ವಿಜಯ್​ ಶಂಕರ್(43) ಹಾಗೂ ರಿಷಭ್​ ಪಂತ್(28) ಅವರ ವಿಕೆಟ್​ ಅನ್ನು ಕಳೆದುಕೊಂಡಿದೆ. ಸದ್ಯ ಕ್ರೀಸ್​ನಲ್ಲಿ ರೋಹಿತ್​ ಶರ್ಮಾ(34) ಹಾಗೂ ಹಾರ್ದಿಕ್ ಪಾಂಡ್ಯ(7) ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ಭಾರತದ ಗೆಲುವಿಗೆ 43 ಎಸೆತಗಳಲ್ಲಿ 86 ರನ್​ಗಳ ಅವಶ್ಯಕತೆಯಿದೆ.

ಇದನ್ನೂ ಓದಿ: TRAILER: ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು: ಯಜಮಾನನ ಮಾಸ್​ ಎಂಟ್ರಿ
Loading...

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ